Feedback / Suggestions

ಹಲ್ಲೆ ಕೊಲೆ ಬೆದರಿಕೆ

ದಿನಾಂಕ 07/03/2021ರಂದು ಕುಟ್ಟ ಬಳಿಯ ಮಂಚಳ್ಳಿ ನಿವಾಸಿಗಳಾದ ಎಂ.ಎಲ್.ಮಹದೇವ ಹಾಗೂ ಪಣಿ ಎರವರ ಬೋಳ ಎಂಬವರು ಅವರ ತೋಟದ ಮಾಲೀಕರ ಪಿಕ್‌ಅಪ್‌ ವಾಹನವೊಂದರಲ್ಲಿ ಸುಳ್ಳಿಮಾಡ ಗೋಪಾಲ ಎಂಬವರ ಮನೆಯಿಂದ ಹುಲ್ಲು ತುಂಬಿಸಿಕೊಂಡು ಮರಳಿ ಬರುತ್ತಿರುವಾಗ ಚೂರಿಕಾಡು ಗ್ರಾಮದ ಬಳಿ ಒಂದು ಮಾರುತಿ ಓಮಿನಿ ವ್ಯಾನಿನಲ್ಲಿ ತಾತೀರ ಪೊನ್ನಣ್ಣ ಮತ್ತು ವಾಸು ಎಂಬವರು ಬಂದು ಮಹದೇವರವರ ಪಿಕ್‌ಅಪ್‌ ವಾಹನವನ್ನು ಅಡ್ಡಗಟ್ಟಿ ಹುಲ್ಲು ಸಾಗಿಸುತ್ತಿರುವ ಬಗ್ಗೆ ಜಗಳವಾಡಿ ಮಹದೇವ ಹಾಗೂ ಬೋಳರವರಿಗೆ ಕೈಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದ್ದು ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ, ಕರ್ತವ್ಯಕ್ಕೆ ಅಡ್ಡಿ  

ದಿನಾಂಕ 07/03/2021ರಂದು ಕುಟ್ಟ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ  ಕುಟ್ಟ ಪೊಲೀಸ್‌ ಠಾಣೆಯ ಪಿಎಸ್‌ಐರವರಾದ ಹೆಚ್‌.ಜೆ.ಚಂದ್ರಪ್ಪರವರು ಸಿಬ್ಬಂದಿಗಳಾದ ಎಎಸ್‌ಐ  ಅಬ್ದುಲ್‌ ಮಜೀದ್‌ ಮತ್ತು ಇತರ ಸಿಬ್ಬಂದಿಗಳೊಂದಿಗೆ ಚೂರಿಕಾಡು ಗ್ರಾಮದ ತಾತೀರ ಪೊನ್ನಣ್ಣರವರ ಮನೆಗೆ ಹೋದಾಗ ಅಲ್ಲಿ ಪೊನ್ನಣ್ಣರವರು ಪೊಲೀಸ್‌ ಅಧಿಕಾರಿಗಳನ್ನು ಕುರಿತು ಅಶ್ಲೀಲವಾಗಿ ನಿಂದಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದುದಲ್ಲದೆ ಎಎಸ್‌ಐ ಅಬ್ದುಲ್‌ ಮಜೀದ್‌ರವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ಸುಲಿಗೆ ಪ್ರಕರಣ

ದಿನಾಂಕ 07/03/2021ರ ಬೆಳಗಿನ ಜಾವ ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಮಂಡ್ಯ ವಿಭಾಗದ ಪಾಂಡವಪುರ ಘಟಕದ ಬಸ್‌ ಒಂದರ ನಿರ್ವಾಹಕರಾದ ಕಿರನ್‌ ಕುಮಾರ್‌ ಎಂಬವರು ಬಸ್ಸಿನಲ್ಲಿ ತಂಗಿದ್ದು ನಿತ್ಯಕರ್ಮಕ್ಕಾಗಿ ಬಸ್ಸಿನ ಹಿಂದಿನ ಬಾಗಿಲಿನ ಮೂಲಕ ಇಳಿಯುತ್ತಿರುವಾಗ ಯಾರೋ ಅಪರಿಚಿತರು ಬಂದು ಕಿರಣ್‌ ಕುಮಾರ್‌ರವರ ಅಂಗಿಯ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡು ಪ್ಯಾಂಟಿನ ಜೇಬಿನಲ್ಲಿ ಕಿರಣ್‌ ಕುಮಾರ್‌ರವರು ಹಿಂದಿನ ದಿನ ಬಸ್‌ ಕಾರ್ಯಾಚರಣೆಯ ವೇಳೆ ಸಂಗ್ರಹಿಸಿದ್ದ ಸುಮಾರು ರೂ. 16,420/- ನಗದು ಹಣವನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 06/03/2021ರಂದು ಮಡಿಕೇರಿಯ ನಿವಾಸಿ ಕರುಣ್‌ ಮಂದಣ್ಣ ಎಂಬವರು ಅವರ ತಂದೆ ತಾಯಿಯವರೊಂದಿಗೆ ಅಮ್ಮತ್ತಿ ಒಂಟಿಯಂಗಡಿಯ ಬಳಿ ಕಾರಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ಒಂದು ಬೊಲೆರೋ ಪಿಕ್‌ಅಪ್‌ ವಾಹನವನ್ನು ಅದರ ಚಾಲಕ ಕಲ್ಪೇಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕರುಣ್‌ ಮಂದಣ್ಣರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಕರುಣ್‌ ಮಂದಣ್ಣರವರ ತಂದೆ ಭೀಮಯ್ಯ, ಕರುಣ್‌ ಮಂದಣ್ಣ ಹಾಗೂ ತಾಯಿ ಕುಸುಮಾಋವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ ಪ್ರಕರಣ

ದಿನಾಂಕ 06/03/2021ರಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಗ್ರಾಮದ ನಿವಾಸಿ ನಳಿನ್‌ ಕುಮಾರ್‌ ಎಂಬವರು ಅವರ ಸ್ಕೂಟರಿನಲ್ಲಿ ಸಂಪಾಜೆ ಬಳಿಯ ಚೆಂಬು ಗ್ರಾಮದಿಂದ ಮನೆಗೆ ಹೋಗುತ್ತಿರುವಾಗ ಬಾಲಂಬಿ ಎಂಬಲ್ಲಿ ಎದುರಿನಿಂದ ಒಂದು ಸ್ಕೂಟರನ್ನು ಅದರ ಸವಾರ ಚಿದಾನಂದ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಳಿನ್‌ ಕುಮಾರ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ನಳಿನ್‌ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Last Updated: 08-03-2021 03:49 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080