ಅಭಿಪ್ರಾಯ / ಸಲಹೆಗಳು

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ವ್ಯಕ್ತಿಗೆ ಗಾಯ

ದಿನಾಂಕ 4-2-2021 ರಂದು ಗುಡ್ಡಪ್ಪರೈ ಬಡಾವಣೆ, ಸುಂಟಿಕೊಪ್ಪ ನಿವಾಸಿ ಕೆ. ಆಲಿ ಎಂಬವರು ಮೈಸೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಂಟಿಕೊಪ್ಪ ಬಳಿಯ ಶಾಂತಿನಗರ ಎಸ್ಟೇಟ್ ಬಳಿ ಬಸ್ಸಿನ ಹಿಂದಿನ ಬಾಗಿಲಿನಿಂದ ಹೊರಕ್ಕೆ ಬಿದ್ದು ಗಾಯಗೊಂಡಿದ್ದು ಈ ಸಂಬಂಧ ಕೆ.ಆಲಿಯವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ ನಗರದ ಟಿ.ಜಾನ್ ಬಡಾವಣೆಯ  ನಿವಾಸಿ ಹೆಚ್.ಎನ್. ಬೋಪಯ್ಯನವರ ಮಗ ಕಿರಣ್ ಕುಮಾರ್ ರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ದಿನಾಂಕ 5-2-2021 ರಂದು ತಾನು ವಾಸವಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಕಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಲಾರಿ ಅಪಘಾತ

ದಿನಾಂಕ 5-2-2021 ರಂದು ಹಾಸನ ಜಿಲ್ಲೆಯ ಹಳೇಕೋಟೆ ನಿವಾಸಿ ಚಂದ್ರ ಎಂಬವರು ಬೆಂಗಳೂರಿನಿಂದ ಕಣ್ಣೂರಿಗೆ ಲಾರಿಯಲ್ಲಿ ಸಂಚರಿಸುತ್ತಿದ್ದಾಗ ಗೋಣಿಕೊಪ್ಪದ ಹೆಬ್ಬಾಲೆ ಗ್ರಾಮದಲ್ಲಿ ಲಾರಿಯು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗ ಪರಿಣಾಮ 3 ವಿದ್ಯುತ್ ಕಂಬಗಳು ಜಖಂಗೊಂಡು ಸುಮಾರು 5000/- ರೂ. ನಷ್ಟ ಆಗಿರುವುದಾಗಿ ಕೃಷ್ಣಕುಮಾರ್, ಶಾಖಾಧಿಕಾರಿ, ಕೆಇಬಿ, ಗೋಣಿಕೊಪ್ಪನವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ರಿಕ್ಷಾ ಅಪಘಾತ

ದಿನಾಂಕ 05-02-2021 ರಂದು ಚರಣ್ ಕುಮಾರ್  ಎಂಬವರು ತಮ್ಮ ಬಾಪ್ತು ಆಟೋ ರಿಕ್ಷಾವನ್ನು ಅತೀ ವೇಗ ಮತ್ತು ದುಡುಕಿನಿಂದ ಚಾಲನೆ ಮಾಡಿ  ಕೂಡಿಗೆ ಡೈರಿ ಮುಂದಿನ ರಸ್ತೆಯ ಡಿವೈಡರ್ ಬಳಿ ಆಟೋ ರಿಕ್ಷವನ್ನು ತಿರುಗಿಸಿದಾಗ ಆಟೋ ರಿಕ್ಷ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಕೊಂಡಿದ್ದು ಇದರಿಂದ ಚಾಲಕ ಚರಣ್ ಕುಮಾರ್ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ನಾರಾಯಣಪ್ಪ ಎಂಬವರಿಗೆ  ರಕ್ತಗಾಯವಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನವೀಕರಣ​ : 06-02-2021 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ