ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ, ಮಹಿಳೆ ಸಾವು

ದಿನಾಂಕ 20/02/2021ರಂದು ಪೊನ್ನಂಪೇಟೆ ಬಳಿಯ ಧನುಗಾಲ ನಿವಾಸಿ ಭಾಗೀರಥಿ ಎಂಬವರು ಪೊನ್ನಂಪೇಟೆ ನಗರದ ಸೀಗಲ್‌ ಹೋಟೆಲ್‌ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಒಂದು ಸ್ಕೂಟರನ್ನು ಅದರ ಚಾಲಕ ಗಿರೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭಾಗೀರಥಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಭಾಗೀರಥಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹುಲಿ ದಾಳಿ, ಬಾಲಕನ ಸಾವು

ದಿನಾಂಕ 20/02/2021ರಂದು ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಪಣಿ ಎರವರ ಬಸವ ಎಂಬವರ ಮಗ ಅಯ್ಯಪ್ಪ ಎಂಬ ಬಾಲಕನ ಮೇಲೆ ಅದೇ ಗ್ರಾಮದ ನಿವಾಸಿ ಅಶ್ವಥ ಎಂಬವರ ತೋಟದೊಳಗೆ ಹುಲಿಯೊಂದು ದಾಳಿಯೆಸಗಿ ಕೊಂದು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಫಿ ಕಳವು ಪ್ರಕರಣ

ಬೆಂಗಳೂರು ನಿವಾಸಿ ಕೆ.ಬಿ.ಚಂಗಪ್ಪ ಎಂಬವರಿಗೆ ಸೇರಿದ ವಿರಾಜಪೇಟೆ ನಗರದ ಮಹಿಳಾ ಸಮಾಜದ ರಸ್ತೆಯಲ್ಲಿರುವ ಕಾಫಿ ತೋಟಕ್ಕೆ ದಿನಾಂಕ 14/02/2021ರಂದು ಯಾರೋ ಅಪರಿಚಿತರು ತೋಟದ ಗೇಟಿನ ಬೀಗ ಒಡೆದು ಒಳ ಪ್ರವೇಶಿಸಿ ತೋಟದಲ್ಲಿನ ಸುಮಾರು ರೂ.10,000/- ಮೌಲ್ಯದ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ ಪ್ರಕರಣ

ದಿನಾಂಕ 14/02/2021ರಂದು ಚೆಟ್ಟಳ್ಳಿ ಬಳಿಯ ಚೇರಳ ಶ್ರೀಮಂಗಲ ನಿವಾಸಿ ಮುಖಾರಿಬ್‌ ಎಂಬವರಿಗೆ ಒಂದು ಪಾರ್ಸೆಲ್‌ ಬಂದಿದ್ದು ಸದ್ರಿ ಪಾರ್ಸಲನ್ನು ಪಡೆಯಲು ರೂ.25,000/- ಕಸ್ಟಮ್ಸ್‌ ಶುಲ್ಕವನ್ನು ಕಟ್ಟಬೇಕೆಂದು ಯಾರೋ ಮೊಬೈಲ್‌ ಕರೆ ಮಾಡಿ ಹೇಳಿದ್ದನ್ನು ನಂಬಿ ಮುಖಾರಿಬ್‌ರವರು ಕರೆಮಾಡಿದ ಬ್ಯಕ್ತಿ ಹೇಳಿದ ಬ್ಯಾಂಕ್‌ ಖಾತೆಗೆ ರೂ.25,000/- ಹಣವನ್ನು ಜಮಾ ಮಾಡಿದ್ದು ನಂತರ ಪುನಃ ಅದೇ ಅಪರಿಚಿತರು ಕರೆ ಮಾಡಿ ಮತ್ತೊಮ್ಮೆ ರೂ.12,000/- ಹಣವನ್ನು ಜಮಾ ಮಾಡುವಂತೆ ಹೇಳಿದಾಗ ತಾವು ಮೋಸ ಹೋಗಿರುವ ಬಗ್ಗೆ ಸಂಶಯ ಬಂದು ಮುಖಾರಿಬ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಆನ್‌ಲೈನ್‌ ಮೂಲಕ ಹಣ ವಂಚನೆ

ದಿನಾಂಕ 19/02/2021ರಂದು ಚೆಟ್ಟಳ್ಳಿ ನಿವಾಸಿ ಕೆ.ಎಂ.ಪೂವಯ್ಯ ಎಂಬವರಿಗೆ ಯಾರೋ ಅಪರಿಚಿತರು ಅವರ ಜಿಯೋ ಮೋಬೈಲಿಗೆ ರೂ.10 ರೀಚಾರ್ಜ್‌ ಮಾಡಿ ನಂತರ ಅವರಿಗೆ ಕರೆ ಮಾಡಿ TeamViewer Quick support app ನ್ನು ಡೌನ್‌ಲೋಡ್‌ ಮಾಡುವಂತೆ ತಿಳಿಸಿದ್ದು ಅದೇ ರೀತಿ ಪೂವಯ್ಯನವರು ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿದ ನಂತರ ಅವರ ಕೆನರಾ ಬ್ಯಾಂಕ್‌ ಖಾತೆಯಿಂದ ರೂ. 93,484/- ಹಣವನ್ನು ಹಂತ ಹಂತವಾಗಿ ತೆಗೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 21-02-2021 11:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080