ಅಭಿಪ್ರಾಯ / ಸಲಹೆಗಳು

ಕಳವು ಸ್ವತ್ತುಗಳ ಮರಳಿಸುವ ಕಾರ್ಯಕ್ರಮ

 

ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ 2019 ರಿಂದ ಇಲ್ಲಿಯವರೆಗೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಸ್ವತ್ತುಗಳನ್ನು ದಿನಾಂಕ: 01-11-2021 ರಂದು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

 

ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ನಡೆಸಿದ ತನಿಖೆಯಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೊಡಗು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ಒಟ್ಟು 14 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ರೂ 31, 67,000/- ರೂ ಬೆಲೆ ಬಾಳುವ ಒಟ್ಟು 401 ಗ್ರಾಂ ನ ಚಿನ್ನದ ಆಭರಣಗಳು, 1,19,500/- ರೂ ನಗದು, ಸುಮಾರು 2,74,000/- ರೂ ಬೆಲೆಬಾಳುವ ಮೊಟಾರ್ ಸೈಕಲ್, ಸುಮಾರು ಸುಮಾರು 6,86,000/- ರೂ ಬೆಲೆ ಬಾಳುವ ಮಾರುತಿ ಕಾರು ಹಾಗೂ ಇತರೆ ವಸ್ತುಗಳು ಒಟ್ಟು ಮೌಲ್ಯ 42,46,500/- ರೂ ಬೆಲೆ ಬಾಳುವ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

 

ಮೇಲ್ಕಂಡ ಪ್ರಕರಣಗಳಲ್ಲಿ ಮಾಹಿತಿ ಸಂಗ್ರಹಿಸಿ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ ಕೊಡಗು ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 31/10/2021ರಂದು ಪೊನ್ನಂಪೇಟೆ ಬಳಿಯ ಶಿವ ಕಾಲೋನಿ ನಿವಾಸಿ ಸುನಿತಾ ಎಂಬವರ ಮನೆಗೆ ಬಂದ ಪ್ರಿಯಾ ಎಂಬವರು ಕೌಟುಂಬಿಕ ಕಾರಣಗಳಿಗೆ ಸುನಿತಾರವರೊಂದಿಗೆ ಜಗಳವಾಡಿ ದೊಣ್ಣೆಯಿಂದ ಸುನಿತಾರವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಆತ್ಮಹತ್ಯೆ ಯತ್ನ

ದಿನಾಂಕ 31/10/2021ರಂದು ತಿತಿಮತಿ ಭದ್ರಗೊಳ ಗ್ರಾಮದ ಮೂಡಗದ್ದೆ ಈರಪ್ಪ ಎಂಬವರು ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದು ಆಸ್ತಿಯ ವಿಚಾರವಾಗಿ ಅವರ ಮನೆಯವರಾದ ಮೂಡಗದ್ದೆ ರಾಮಕೃಷ್ಣರವರು ಕಿರುಕುಳ ನೀಡುತ್ತಿದ್ದು ಅದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 30/10/2021ರಂದು ಮೂರ್ನಾಡು ಬಳಿಯ ಐಕೊಳ ನಿವಾಸಿ ಶಬರಿ ಗಂಗಮ್ಮ ಎಂಬಾಕೆಯು ವಿರಾಜಪೇಟೆ ನಗರದಲ್ಲಿ ಕೆಲಸ ಮುಗಿಸಿ ಮೂರ್ನಾಡು ರಸ್ತೆಯ ಬಳಿ ನಡೆದುಕೊಂಡು ಬರುತ್ತಿದ್ದಾಗ ಗಡಿಯಾರ ಕಂಬದ ಕಡೆಯಿಂದ ಒಂದು  ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಬರಿ ಗಂಗಮ್ಮರವರಿಗೆ ಡಿಕ್ಕಿಪಡಿಸಿದ ಪರಿಣಾಮ ಶಬರಿ ಗಂಗಮ್ಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 30/10/2021ರಂದು ವಿರಾಜಪೇಟೆ ಪಟ್ಟಣದ ನೆಹರು ನಗರ ನಿವಾಸಿ ಸೈಫುಲ್ಲಾ ಎಂಬವರಿಗೆ ಮೊಗರಗಲ್ಲಿ ನಿವಾಸಿ ಇರ್ಫಾನ್‌ ಎಂಬವರು ವ್ಯಾಪಾರದ ವಿಷಯದಲ್ಲಿ ಜಗಳವಾಡಿ ರಬ್ಬರ್‌ ವಯರಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬಸ್‌ ಅಪಘಾತ

ದಿನಾಂಕ 31/10/2021ರ ಬೆಳಗಿನ ಜಾವ ಕುಂದಾಪುರದಿಂದ ಮೈಸೂರಿಗೆ ಹೋಗುತ್ತಿದ್ದ ದುರ್ಗಾಂಬಾ ಎಂಬ ಖಾಸಗಿ ಬಸ್ಸನ್ನು ಅದರ ಚಾಲಕ ಮಡಿಕೇರಿ ಬಳಿಯ ರಾ.ಹೆ.275ರಲ್ಲಿರುವ ಬೋಯಿಕೇರಿ ಬಳಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಬೋಯಿಕೇರಿಯಲ್ಲಿರುವ ಖಾದರ್‌ ಎಂಬವರ ಅಂಗಡಿಯ ಕಟ್ಟಡಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅಂಗಡಿಗೆ ಸುಮಾರು ರೂ. 70,000/- ಹಾನಿಯಾಗಿದ್ದು ಅದೇ ಸಂದರ್ಭ ಅಲ್ಲಿ ನಿಂತಿದ್ದ ಚಂದ್ರಶೇಖರ್‌ ಎಂಬವರ ಕಾಲಿನ ಮೇಲೆ ಅಂಗಡಿಯ ಪಿಲ್ಲರ್‌ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 01-11-2021 01:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080