ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ ಬೈಕ್ ಸವಾರ ಸಾವು

ಕುಶಾಲನಗರದ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಚಿಟ್ಟಿಯಪ್ಪ ಎಂಬವರ ಮಗ ತೇಜಸ್ ತಿಮ್ಮಯ್ಯ ರವರು ದಿನಾಂಕ 20-5-2022 ರಂದು ತಾನು ಕೆಲಸ ಮಾಡುತ್ತಿದ್ದ ಜೊಮ್ಯಾಟೋದಿಂದ ಫುಡ್ ಡೆಲಿವರಿಗಾಗಿ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ  ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನಪ್ಪಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಟ್ಯಾಂಕರ್ ಡಿಕ್ಕಿ

ದಿನಾಂಕ 20-5-2022 ರಂದು  ಕೂಡ್ಲೂರು ನವಗ್ರಾಮದ ನಿವಾಸಿ ಜಯ ಎಂಬವರ ಮಗ ವೆಂಕಟೇಶ್ ಎಂಬರು ಚಾಲಿಸುತ್ತಿದ್ದ ಮೋಟಾರ್ ಸೈಕಲಿಗೆ  ಕೂಡಿಗೆ ಗ್ರಾಮದ ಯುವರಾಜ್ ಎಂಬವರು ಹೈಚರ್ ಟ್ಯಾಂಕರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ವೆಂಕಟೇಶ್ ಗಾಯಗೊಂಡಿದ್ದು ಅಲ್ಲದೆ ಮೋಟಾರ್ ಸೈಕಲ್ ಸಹಾ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು

ಗೋಣಿಕೊಪ್ಪ ಠಾಣಾ ಸರಹದ್ದಿನ ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಶ್ರೀಮತಿ ಜೆ. ಪದ್ಮ ಎಂಬವರ ಸಹೋದರ ಕರಿಯಣ್ಣ ಎಂಬವರು ದಿನಾಂಕ 20-5-2022 ರಂದು ಗೋಣಿಕೊಪ್ಪದಿಂದ ಚೆನ್ನಂಗೊಲ್ಲಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿರಾಜಪೇಟೆ-ಮೈಸೂರು ಸಾರ್ವಜನಿಕ ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಸಂಬಂಧ ಶ್ರೀಮತಿ ಜೆ.ಪದ್ಮಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಗೂಡ್ಸ್ ವಾಹನ ಡಿಕ್ಕಿ

ದಿನಾಂಕ  20-5-2022 ರಂದು ರಮೇಶ್, ಟಿ.ನರಸಿಪುರ, ಮೈಸೂರು ಜಿಲ್ಲೆ ಇವರು ತಮ್ಮ ಬಾಪ್ತು ಇನೋವಾ ಕಾರಿನಲ್ಲಿ ಪ್ರವಾಸಿಗರನ್ನು ಮಡಿಕೇರಿಯಿಂದ ಸುಬ್ರಮಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದು ಮಡಕೇರಿ ಸಮೀಪದ ಮದೆನಾಡು ಗ್ರಾಮದ ದೇವರಕೊಲ್ಲಿ ಎಂಬಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವು ರಮೇಶ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಕಾರು ಜಖಂ ಗೊಂಡಿದ್ದು, ಈ ಸಂಬಂಧ  ರಮೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

 

ಇತ್ತೀಚಿನ ನವೀಕರಣ​ : 22-05-2022 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080