ಅಭಿಪ್ರಾಯ / ಸಲಹೆಗಳು

ಲಾರಿ ಅಪಘಾತ ಒಬ್ಬನ ಸಾವು, ಇಬ್ಬರಿಗೆ ಗಾಯ

ದಿನಾಂಕ 26-12-2021ರ ಮುಂಜಾನೆ ಹಾಲಿನ ಕ್ರೇಟ್ ಗಳನ್ನು ಸರಬರಾಜು ಮಾಡುವ ಲಾರಿ ವಿರಾಜಪೇಟೆ ತಾಲೋಕು ಬಿಳುಗುಂದ ಗ್ರಾಮದ ಜಂಕ್ಷನ್ ನಲ್ಲಿ ಅಪಘಾತಕ್ಕೀಡಾಗಿದ್ದು ಲಾರಿಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರ ಪೈಕಿ ಅಜಯ್ ಎಂಬವರು ಸಾವನಪ್ಪಿದ್ದು, ಉಳಿದಂತೆ ಲಾರಿ ಚಾಲಕ ಹರ್ಷ ಹಾಗು ಮುತ್ತುರಾಜ್ ಎಂ.ಸಿ ರವರನ್ನು ಚಿಕಿತ್ಸೆಗೆ  ದಾಖಲಿಸಲಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಕೌಟುಂಬಿಕ ಜಗಳ ಹಲ್ಲೆ

ದಿನಾಂಕ 26-12-2021 ರಂದು ಮಡಿಕೇರಿ ತಾಲ್ಲೂಕು ಅವಂದೂರು ಗ್ರಾಮದ ನಿವಾಸಿ ಸೌಮ್ಯ ಮತ್ತು ಆಕೆಯ ಗಂಡ ಭವಾನಿಶಂಕರ್ ಎಂಬವರು ತಮ್ಮ ಮನೆಯಲ್ಲಿದ್ದು ಸಂಸಾರದ ವಿಚಾದಲ್ಲಿ ಜಗಳವಾಗಿ ಭವಾನಿಶಂಕರ್ ರವರು ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು  ಈ ಸಂಬಂಧ ಸೌಮ್ಯರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಸ್ಸಿನಿಂದ ವ್ಯಕ್ತಿಯ ಬ್ಯಾಗ್ ಕಳವು

 ದಿನಾಂಕ 25-12-2021 ರಂದು ವಾಮನ ನಾಯಕ್ ಎಂಬವರು ದಿನಾಂಕ 26-12-2021 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಸಹೋದ್ಯೋಗಿಯ ಮಗಳ ಮದುವೆ ಕಾರ್ಯಕ್ರಮ  ಇದ್ದುದರಿಂದ  ಮಡಿಕೇರಿಯಿಂದ ಬೆಂಗಳೂರಿಗೆ ನಾಪೋಕ್ಲು ಮಾರ್ಗವಾಗಿ ಹೋಗುವ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಸಮಯ ಸಂಜೆ 7-00 ಗಂಟೆಗೆ ಹೊರಟ್ಟಿದ್ದು ತಮ್ಮ ಬಾಪ್ತು ಬ್ಯಾಗ್ ನ್ನು ಬಸ್ಸಿನ ಸೀಟಿನ ಕೆಳಗೆ ಇಟ್ಟುಕೊಂಡಿದ್ದು ಸದರಿ ಬ್ಯಾಗನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು ಸದರಿ ಬ್ಯಾಗಿನಲ್ಲಿ ಒಟ್ಟು 5000/- ರೂ. ಬೆಲೆಬಾಳುವ ಸಾಮಾಗ್ರಿಗಳು ಇದ್ದವು ಎಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಆಸ್ತಿ ವಿಚಾರದಲ್ಲಿ ಹಲ್ಲೆ

ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಗುಡ್ಡಂಡ ಸುಶೀಲ ಎಂಬವರೊಂದಿಗೆ ಅವರ ಮಗನಾದ ವಾಸುದೇವ್ ರವರು ಆಸ್ತಿ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಮನೆಯ ಬಾಗಿಲನ್ನು ಒಡೆದು ಹಾಕಿರುವ ಬಗ್ಗೆ ನೀಡಿದ ದೂರಿನ  ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 27-12-2021 05:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080