ಅಭಿಪ್ರಾಯ / ಸಲಹೆಗಳು

ಬೈಕ್ ಅಪಘಾತ

ದಿನಾಂಕ 19-3-2022 ರಂದು ಶನಿವಾರಸಂತೆ ನಿವಾಸಿ ಇರ್ಫಾನ್ ಎಂಬವರು ಮತ್ತು ತ್ಯಾಗರಾಜ ಕಾಲೋನಿ, ಶನಿವಾರಸಂತೆ ನಿವಾಸಿಯಾದ ಇಬ್ರಾಹಿಂ ಎಂಬವರು ಮೋಟಾರ್ ಸೈಕಲಿನಲ್ಲಿ ಕಣಗಾಲು ಕಡೆಗೆ ಪ್ರಯಾಣಿಸುತ್ತಿದ್ದಾಗ ಮಾಲಂಬಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ  ಬಿದ್ದು ಬೈಕಿನಲ್ಲಿ ಸಂಚರಿಸುತ್ತಿದ್ದ ಇಬ್ರಾಹಿಂ ರವರ ಕಾಲಿಗೆ ಗಾಯಗಳಾಗಿದ್ದು, ಈ ಸಂಬಂಧ ಇಬ್ರಾಹಿಂರವರ ಮಗ ಶಕಿಲ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ಜಗಳ ಹಲ್ಲೆ

ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿ ವೇಣು ಬಿಳಿಮಗ್ಗ ಎಂಬವರೊಂದಿಗೆ  ಕುಶಾಲನಗರದ ನಿವಾಸಿಗಳಾದ ಆನಂದ, ಗಣಿಪ್ರಸಾದ್, ಕೀರ್ತನ್ ಮತ್ತು ಇತರರು ಸೇರಿ ಹಣದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ವೇಣು ಬಿಳಿಮಗ್ಗ ರವರನ್ನು ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ

ದಿನಾಂಕ 18-3-2022 ರಂದು ರಾತ್ರಿ 10.30 ಗಂಟೆಗೆ ಗೋಣಿಕೊಪ್ಪದ ಹರಿಶ್ಚಂದ್ರಪುರದ ನಿವಾಸಿ ಎಂ.ಇ.ನಿಹಾಲ್ ಎಂಬವರು  ಪಿರಿಯಾಪಟ್ಣದಿಂದ ತರಕಾರಿಯನ್ನು ಪಿಕ್ಅಪ್ ವಾಹನದಲ್ಲಿ ಲೋಡ್ ಮಾಡಿಕೊಂಡು ಗೋಣಿಕೊಪ್ಪದ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಒಂದು ಆಲ್ಟೋ ಕಾರು ರಸ್ತೆಯ ಮೇಲೆ ಅಡ್ಡಾದಿಡ್ಡಿ ಯಾಗಿ ಬರುತ್ತಿದ್ದು ದೇವರಪುರ ದಾಟಿ ಮುಂದೆ ಬರುತ್ತಿರುವಾಗ ಸದರಿ ಆಲ್ಟೋ ಕಾರನ್ನು ಪಿಕ್ಅಪ್  ಮುಂದೆ ಬಂದು ಅಡ್ಡಲಾಗಿ ನಿಲ್ಲಿಸಿ ಸದರಿ ಕಾರಿನಿಂದ ಮೂವರು ಇಳಿದು ಬಂದು ವಿನಾ ಕಾರಣ ಜಗಳ ಮಾಡಿದ್ದು ಅಲ್ಲದೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಲ್ಟೋ ಕಾರಿಗೆ ಕಂಟೈನರ್ ಡಿಕ್ಕಿ ಮೂವರಿಗೆ ಗಾಯ

ದಿನಾಂಕ 18-3-2022 ರಂದು ಸುಳ್ಯ ತಾಲೋಕಿನ ಜಾಲ್ಸೂರು ನಿವಾಸಿ ಎ. ಅಶ್ವಿನ್ ರವರು ತಮ್ಮ ಮಕ್ಕಳೊಂದಿಗೆ ಮಡಿಕೇರಿಯಿಂದ ಸುಳ್ಯದ ಕಡೆಗೆ ತಮ್ಮ ಬಾಪ್ತು ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮದೆನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಂಟೈನರ್ ಲಾರಿ ಆಲ್ಟೋಕಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎ.ಅಶ್ವಿನ್ ಮತ್ತು ಅವರ ಮಕ್ಕಳಾದ ನಿಹಾರಿಕಾ ಮತ್ತು ಆರಾದ್ಯ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 20-03-2022 01:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080