ಅಭಿಪ್ರಾಯ / ಸಲಹೆಗಳು

ದಾರಿ ತಡೆದು ಜಗಳ ಕೊಲೆ ಬೆದರಿಕೆ

 ನಾಪೋಕ್ಲು  ಠಾಣಾ ಸರಹದ್ದಿನ  ನೆಲಜಿ ಗ್ರಾಮದ ನಿವಾಸಿ ಸಿ.ಸಿ. ಮುತ್ತಪ್ಪ ಎಂಬವರು ದಿನಾಂಕ 11-3-2022 ರಂದು ತಮ್ಮ ಜಾಗದ ಸರ್ವೆ ಮಾಡಿಸಲು ಸರ್ವೇಯರ್ ರವರೊಂದಿಗೆ  ತಮ್ಮ ಜಾಗಕ್ಕೆ ಹೋದಾಗ ಅದೇ ಗ್ರಾಮದ ನಿವಾಸಿ ಸಿ.ಸಿ.ಕುಂಜಪ್ಪ ಎಂಬವರು ಅವರ ದಾರಿ ತಡೆದು ಜಗಳ ಮಾಡಿ ಸರ್ವೆ ಕಾರ್ಯವನ್ನು ಮಾಡಲು ಬಿಡದೇ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ ದಾಖಲು

ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ನಿವಾಸಿ ಕೆ.ಎಂ. ವಿಜಯಕುಮಾರ್ ಎಂಬವರು  ಕೊಡ್ಲಿಪೇಟೆಯ ಕ್ಯಾತೆ ಎಂಬಲ್ಲಿ ಇಟ್ಟಿಗೆಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಇಟ್ಟಿಗೆಯನ್ನು ತಯಾರಿಸುವ ಕೆಲಸಕ್ಕೆ ಇದ್ದ ತಮಿಳುನಾಡಿನ ಶೇಖರ್ ಎಂಬ ವ್ಯಕ್ತಿ ದಿನಾಂಕ 5-3-2022 ರಂದು ಬೆಳಗ್ಗೆ ತಮಿಳುನಾಡಿಗೆ ಹೋಗಿ ಬರುವುದಾಗಿ ಹೋಗಿದ್ದು ತಮ್ಮ ಮನೆಗೂ ಹೋಗದೆ ಮತ್ತೆ ಮರಳಿ ಕೆಲಸಕ್ಕೂ ಬಾರದೆದ್ದು ಸದರಿಯವರು ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 13-03-2022 01:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080