ಅಭಿಪ್ರಾಯ / ಸಲಹೆಗಳು

ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ದಾಖಲು

 ಶನಿವಾರಸಂತೆ ಠಾಣಾ ಸರಹದ್ದಿನ ಜಾಮಿಯಾ ಮಸೀದಿಯಲ್ಲಿ ದಿನಾಂಕ 4-2-2022 ರಂದು  ಶನಿವಾರಸಂತೆ ನಿವಾಸಿ ಅಬ್ದುಲ್ ರಜಾಕ್ ರವರ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳಾದ ಅಕ್ಮಲ್, ಸಮೀಲ್, ಪರ್ವಿಜ್ ಮತ್ತು ನವಾಜ್ ನವರುಗಳು ಸೇರಿ  ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ ಮಹಿಳೆ ಮೇಲೆ ಹಲ್ಲೆ

 ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ನಾರ್ಗಣೆ ಗ್ರಾಮದಲ್ಲಿ ವಾಸವಾಗಿರುವ ಎ.ಮೂಸ ಎಂಬವರ ಮಗಳಾದ ರಿಸ್ವಾನಾ ಫಾತೀಮರನ್ನು ಸುಂಟಿಕೊಪ್ಪದ ನಿವಾಸಿ ರಫೀಕ್ ರವರಿಗೆ ಮದುವೆ ಮಾಡಿಕೊಟ್ಟಿದ್ದು ಸದರಿ ಫಾತೀಮಾರವರು 2ನೇ ಮಗುವಿಗೆ ಜನ್ಮನೀಡುವ ಸಂದರ್ಭದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ 2 ಮಕ್ಕಳನ್ನು ಎ.ಮೂಸಾ ರವರು ನೋಡಿಕೊಳ್ಳುತ್ತಿದ್ದು, ಅವರ ಮನೆಗೆ ದಿನಾಂಕ 11-2-2022 ರಂದು ಅವರ ಅಳಿಯ ರಫೀಕ್ ರವರು ಬುರ್ಕಾದಾರಿ ಮಹಿಳೆ ಮತ್ತು ವಾಹನ ಚಾಲಕನೊಂದಿಗೆ ಅಕ್ರಮ ಪ್ರವೇಶ ಮಾಡಿ  ಮೂಸಾ ರವರ ಪತ್ನಿಯ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ 25,000/- ರೂ ಹಾಗು 4 ಪೌನ್ ಚಿನ್ನವಿದ್ದ ಬ್ಯಾಗ್ನೊಂದಿಗೆ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಈ ಸಂಬಂಧ .ಮೂಸಾ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು, ಪ್ರಕರಣ ದಾಖಲು

           ದಿನಾಂಕ 8-2-2022 ರಂದು  ಬೆಳಗ್ಗೆ ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ಎಸ್.ಡಿ. ಪ್ರಕಾಶ್ ರವರು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಕುಶಾಲನಗರದ ಗಂಧದಕೋಟೆ ವಿವೇಕಾನಂದ ಕಾಲೇಜು ಬಳಿ ನಿಲ್ಲಿಸಿದ್ದು ಸದರಿ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಂ.ಚೆಂಬು ಗ್ರಾಮದ ನಿವಾಸಿ ಕೆ.ಎಸ್. ಜಯಪ್ರಕಾಶ್ ರವರು ದಿನಾಂಕ 10-2-2022 ರಂದು ಗ್ರಾಮದ ದೈವಸ್ಥಾನ ಎಂಬಲ್ಲಿಗೆ ಹೋದಾಗ  ಅದೇ ಗ್ರಾಮದ ನಿವಾಸಿಗಳಾದ  ಚರಣ್ ಹಾಗು ಗಗನ್ ಎಂಬವರು ದಾರಿಯ ವಿಚಾರದಲ್ಲಿ ಮನಸ್ಥಾಪವನ್ನಿಟ್ಟುಕೊಂಡು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನವೀಕರಣ​ : 12-02-2022 01:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080