ಅಭಿಪ್ರಾಯ / ಸಲಹೆಗಳು

ಡಿಸಿಐಬಿ ಪೊಲೀಸರ ಕಾರ್ಯಾಚರಣೆ, ಅಕ್ರಮ ಬೀಟೆ ಮರ ಸಾಗಾಟ ಪ್ರಕರಣ ಪತ್ತೆ.
 
ಮಡಿಕೇರಿ ತಾಲೂಕಿನ ಪಡಿಯಾಣಿ ಎಮ್ಮೆಮಾಡು ಗ್ರಾಮದ ಪಿ.ಕೆ ಮಜೀದ್ ಎಂಬವರ ಕಾಫಿ ತೋಟಕ್ಕೆ ದಾಳಿ ನಡೆಸಿದ ಜಿಲ್ಲಾ ಡಿಸಿಐಬಿ ಪೊಲೀಸರ ತಂಡ ಅಕ್ರಮವಾಗಿ ಬೀಟಿಮರವನ್ನು ಕಡಿದು ಸಾಗಾಟಮಾಡಿದ ಪ್ರಕರಣವನ್ನು ಪತ್ತೆಹಚ್ಚಿ ತೋಟದ ಮಾಲೀಕ ಪಿ.ಕೆ ಮಜೀದ್ ಹಾಗೂ ಅ‌ವರ ಸಹಚರ ಕೊಳಕೇರಿ ಮೂಸಾ ಎಂಬವರನ್ನು ವಶಕ್ಕೆ ಪಡೆದು ಭಾಗಮಂಡಲ ವಲಯ ಅರಣ್ಯಾಧಿಯವರಿಗೆ ಒಪ್ಪಿಸಿ
ಕಾನೂನು ಕ್ರಮ ಕೈಗೊಳ್ಳಲಾಯಿತು. ಅಕ್ರಮ ಸಾಗಾಟ ಮಾಡಿದ ಬೀಟಿ ಮರದ ಅಂದಾಜು ಮೌಲ್ಯ ₹ 3 ಲಕ್ಷ ಗಳಾಗಬಹುದಾಗಿದೆ. ಈ ಕಾರ್ಯಾಚರಣೆಯು ಡಿಸಿಐಬಿ ಘಟಕದ ಪಿ.ಐ. ಶ್ರೀ ಐ.ಪಿ ಮೇದಪ್ಪನವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆ ಯಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವೆಂಕಟೇಶ್, ಸುರೇಶ್, ವಸಂತ, ಶರತ್ ರೈ, ಅನಿಲ್ ಕುಮಾರ್ ಮತ್ತು ಚಾಲಕರಾದ ಶಶಿ ಕುಮಾರ್ ಮತ್ತು ಅಭಿಲಾಷ್ ರವರು ಭಾಗಿಯಾಗಿದ್ದರು.
 
 
 
 
  
 
ಅಕ್ರಮ ಮರಳುಗಾರಿಕೆ ಪ್ರಕರಣ ಪತ್ತೆ.
 
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪತ್ತೆಹಚ್ಚುವಲ್ಲಿ ಡಿಸಿಐಬಿ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 4-2-2021 ರಂದು ದೊರೆತ ಮಾಹಿತಿ ಮೇರೆಗೆ ಡಿಸಿಐಬಿ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಬಿಳಿಗೇರಿ ಗ್ರಾಮದ ಕಿರುಹೊಳೆಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಪತ್ತೆಹಚ್ಚಿ ಮರಳು ತುಂಬಿದ ಒಂದು ಮಿನಿ ಟಿಪ್ಪರ್, ಹೊಳೆಯ ದಡದಲ್ಲಿ ಸಂಗ್ರಹಿಟ್ಟಿದ್ದ 2 ಲೋಡಿನಷ್ಟು ಮರಳು ಮತ್ತು ಒಂದು ಕಬ್ಬಿಣದ ತೆಪ್ಪವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಪತ್ತೆಕಾರ್ಯವನ್ನು ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಡಿಸಿಐಬಿ ಪಿ.ಐ. ಶ್ರೀ ಐ.ಪಿ.ಮೇದಪ್ಪ, ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಐ. ಶ್ರೀ ರವಿಕಿರಣ್, ಡಿಸಿಐಬಿ ಎಎಸ್ಐ ಶ್ರೀ ಹಮೀದ್ ಸಿಬ್ಬಂದಿಗಳಾದ ನಿರಂಜನ್, ವೆಂಕಟೇಶ್, ವಸಂತ, ಯೋಗೇಶ್ ಕುಮಾರ್, ಶರತ್ ರೈ, ಸುರೇಶ್, ಅನಿಲ್ ಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ಕೆ.ಡಿ.ದಿನೇಶ್ ಚಾಲಕರುಗಳಾದ ಶಶಿಕುಮಾರ್, ಅಭಿಷೇಕ್ ಮತ್ತು ಪ್ರವೀಣ್ ರವರು ಭಾಗಿಯಾಗಿದ್ದರು.
 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

ನಾಪೋಕ್ಲು ಠಾಣಾ ಸರಹದ್ದಿನ ಇಂದಿರಾನಗರದ ನಿವಾಸಿ ಸಿ.ರಾಜೇಂದ್ರ ಎಂಬವರು ದಿನಾಂಕ 5-12-2021 ರಂದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಇಂದಿರಾ ನಗರದ ನಿವಾಸಿಗಳಾದ ಸುರೇಶ ಮತ್ತು ಲಕ್ಷ್ಮಣ ಎಂಬವರು ಸಿ.ರಾಜೇಂದ್ರರವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ  ಹಲ್ಲೆ

ದಿನಾಂಕ 23-10-2021 ರಂದು ಬೆಂಗಳೂರಿನ ನಿವಾಸಿ ಎಂ.ಎಂ.ಮುದ್ದಯ್ಯ ಎಂಬವರು ಬೆಂಗಳೂರಿನಿಂದ ತಮ್ಮ ಸಂಸಾರದೊಂದಿಗೆ ಕಾರಿನಲ್ಲಿ ಸೋಮವಾರಪೇಟೆ ತಾಲೂಕು ಸೂರ್ಲಬ್ಬಿ ರಸ್ತೆಯಲ್ಲಿ ತಮ್ಮ ನೆಂಟರ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಮುದ್ದಂಡ ಮಧು ಎಂಬವರು ಜೀಪನ್ನು ಚಲಾಯಿಸಿಕೊಂಡು ಬಂದು ಹಾರ್ನ್ ಮಾಡಿ ಅವರು ಮುಂದೆ ಸಾಗಿ ಜೀಪನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ  ಬೈದು ಮುಂದೆ ಸಾಗಿ ಮತ್ತೆ ಸೂರ್ಲಬ್ಬಿ ಕೂವ ಹೊಳೆಯ ಹತ್ತಿರ ನಮ್ಮನ್ನು ತಡೆದು ಜಗಳ ಮಾಡಿ ಹಲ್ಲೆನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
.
 

ಇತ್ತೀಚಿನ ನವೀಕರಣ​ : 07-12-2021 11:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080