ಅಭಿಪ್ರಾಯ / ಸಲಹೆಗಳು

ದ್ವೇಷದ ಹಿನ್ನೆಲೆ ವ್ಯಕ್ತಿಮೇಲೆ ಹಲ್ಲೆ

ದಿನಾಂಕ 27-2-2022 ರಂದು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದ ನಿವಾಸಿ ಎನ್.ಎ.ಗಫೂರ್ ರವರು ರಾತ್ರ 11-00 ಗಂಟೆ ಸಮಯದಲ್ಲಿ ಎಮ್ಮೆಮಾಡು ಮಸೀದಿನ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಹಸೈನಾರ್, ಅಜರುದ್ದೀನ್ ಮತ್ತು ಸಮೀರ್ ರವರುಗಳು ಎನ್.ಎ. ಗಫೂರ್ ರವರನ್ನು ತಡೆದು ನಿಲ್ಲಿಸಿ ಹಿಂದೆ ಅವರ ಮೇಲೆ ನೀಡಿದ ದೂರಿನ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿಯ ಕೊಲೆ ಬಳಿಕ ಆತ್ಮಹತ್ಯೆ.

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದ ನಿವಾಸಿ ಬಯವಂಡ ವಾಸು ಮಾದಪ್ಪ ಎಂಬವರ ಲೈನು ಮನೆಯಲ್ಲಿ ಪಣಿಎರವರ ಮುತ್ತ ಹಾಗು ಆತನ ಪತ್ನಿ ಪೊನ್ನಕ್ಕಿ ರವರುಗಳು ವಾಸವಿದ್ದು ದಿನಾಂಕ 27-2-2022 ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಪಣಿಎರವರ ಮುತ್ತ ತನ್ನ ಪತ್ನಿ ಪೊನ್ನಕ್ಕಿಯ ಮೇಲೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಲ್ಲದೇ ತಾನು ಪಕ್ಕದಲ್ಲೇ ಮರದ ಕೌಕೋಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹೈಸೋಡ್ಲೂರು ಗ್ರಾಮದ ಬಯವಂಡ ವಾಸು ಮಾದಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನದಿಂದ ಬೆಲೆಬಾಳುವ ಹಿತ್ತಾಳೆ ಗಂಟೆ ಕಳವು

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದ ಕಮಟೆ ಶ್ರೀಮಹಾದೇವರ ದೇವಸ್ಥಾನನ ಮುಂಭಾಗದಲ್ಲಿ ಎರಡು ಸ್ಟೀಲ್ ಕಂಬಗಳ ನಡುವೆ ತೂರುಹಾಕಿದ ಸುಮಾರು 65,000/- ರೂ ಬೆಲೆಬಾಳುವ ಹಿತ್ತಾಳೆಯ 104 ಕೆ.ಜಿ. ತೂಕದ ಗಂಟೆಯನ್ನು ದಿನಾಂಕ 27-2-2022ರ ಸಂಜೆ 6 ಗಂಟೆ ಮತ್ತು 28-2-2022ರ ಬೆಳಗ್ಗೆ 6030 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ದೇವಸ್ಥಾನದ ಅಧ್ಯಕ್ಷರಾದ ಎಸ್.ಬಿ. ರಮೇಶ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಇಬ್ಬರಿಗೆ ಗಾಯ

ದಿನಾಂಕ 28-2-2022 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಚಿಕ್ಕಪೇಟೆಯ ಮಠದ ಗದ್ದೆಯ ಸಾರ್ವಜನಿಕ ರಸ್ತೆಯಲ್ಲಿ ಮೊಹಮ್ಮದ್ ತಾಹೀರ್ ಎಂಬವರು ಚಲಾಯಿಸುತ್ತಿದ್ದ ಗೂಡ್ಸ್ ಆಟೋಕ್ಕೆ ವಿರಾಜಪೇಟೆ ನಗರದಿಂದ ಬಂದ KA-47-M-4460 ಸಂಖ್ಯೆಯ ಮಾರುತಿ ಸಿಯಾಸ್ ಕಾರು ಡಿಕ್ಕಿಯಾದ ಪರಿಣಾಮ ಗೂಡ್ಸ್ ಆಟೋ ರಸ್ತೆಯ ಮೇಲೆ ಮಗುಚಿಬಿದ್ದು ಅದರಲ್ಲಿದ್ದ ಚಾಲಕ ಮೊಹಮ್ಮದ್ ತಾಹೀರ್ ಮತ್ತು ಬಲ್ಲಚಂಡ ಹರಿ ರವರು ಗಾಯಗೊಂಡಿದ್ದು ಅಲ್ಲದೆ ರಸ್ತೆಯ ಪಕ್ಕದಲ್ಲಿದ್ದ KA-03 MK-3862 ಸಂಖ್ಯೆಯ ಕಾರು ಸಹ ಜಖಂಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಂಪೋ ಟ್ರಾವಲರ್ ಅಪಘಾತ

ದಿನಾಂಕ 26-2-2022 ರಂದು ವೈ,ಜಿ ಶಿವಶಂಕರ್ ಎಂಬವರು ಟೆಂಪೋಟ್ರಾವಲರ್ ವಾಹನದಲ್ಲಿ ಮೈಸೂರಿನ ನಿವಾಸಿಯಾದ ನಾಗರಾಜು ಹಾಗೂ ಅವರ ಸಂಬಂಧಿಕರನ್ನು ಕರೆದುಕೊಂಡು ಕೇರಳದ ಕಡೆಗೆ ಪ್ರವಾಸಕ್ಕೆ ಹೋಗುತ್ತಿದ್ದು ಸಮಯ ಸಂಜೆ 4-00 ಗಂಟೆಯ ಸಮಯದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟ ಸಾರ್ವಜನಿಕ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ರಸ್ತೆಯ ಬದಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇತ್ತೀಚಿನ ನವೀಕರಣ​ : 01-03-2022 01:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080