ಅಭಿಪ್ರಾಯ / ಸಲಹೆಗಳು

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೊಳಕೇರಿ ಗ್ರಾಮದ ನಿವಾಸಿ ಪಿ.ಪಿ. ಸಲಾಂ ಎಂಬವರು ದಿನಾಂಕ 9-4-2022 ರಂದು ಸಂಜೆ  ಅದೇ ಗ್ರಾಮದ ಉಸ್ಮಾನ್ ಅವರ ಬೇಕರಿಗೆ ಹೋಗಿ ಅವರು ಕೊಡಬೇಕಾಗಿದ್ದ ನಾಲ್ಕು ಸಾವಿರ ಹಣವನ್ನು ಕೇಳಿದ್ದು, ಇದಕ್ಕೆ ಈಗ ಹಣಕೊಡಲು ಆಗುವುದಿಲ್ಲ ಎಂದು ಉಸ್ಮಾನ್ ಹೇಳಿದ ಕಾರಣ ಪಿ.ಪಿ.ಸಲಾಂ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದರಿಂದ ಉಸ್ಮಾನ್ ಚಾಕುವಿನಿಂದ ಸಲಾಂ ರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ದಿನಾಂಕ 8-1-2022 ರಂದು ರಾತ್ರಿ ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿಗ್ರಾಮದ ನಿವಾಸಿ ಬಡುಮಂಡ ಸಾಗರ್ ಸೋಮಣ್ಣ ಎಂಬವರು ಶ್ರೀಮಂಗಲದ ಶ್ರೀ ರಾಮ ವೈನ್ಸ್ ಅಂಗಡಿಗೆ ಮದ್ಯವನ್ನು ಖರೀದಿಸಲು ಹೋಗಿದ್ದು ಅಲ್ಲಿಗೆ ತಾವಳಗೇರಿ ಗ್ರಾಮದ ನಿವಾಸಿ ಮಲ್ಲಂಗಡ ಮುತ್ತಪ್ಪ ಎಂಬವರು ಬಂದು ಮದ್ಯವನ್ನು ತೆಗೆದುಕೊಂಡು ಹೋಗಿ ಮತ್ತೆ ಅಲ್ಲಿಗೆ ಬಂದು  ಕೆ.ಬೋಪಣ್ಣ ಎಂಬವರೊಂದಿಗೆ ಜಗಳ ಮಾಡಿ ಅವರ ಮೇಲೆ ಹಲ್ಲೆ ಮಾಡುತ್ತಿದ್ದಾಗ ಬಡುಮಂಡ ಸಾಗರ್ ಸೋಮಣ್ಣನವರು ಏಕೆ ಹೊಡೆಯುತ್ತಿರುವಿರಿ ಎಂದು ವಿಚಾರಿಸಿದ ಕಾರಣಕ್ಕೆ ಮಲ್ಲಂಗಡ ಮುತ್ತಪ್ಪನವರು ಕಬ್ಬಿಣದ ರಾಡಿನಿಂದ ಸೋಮಣ್ಣರವರ ಮೇಲೆ ಹಲ್ಲೆ ಮಾಡಿ ಗಾಯಪಡಿಸಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಿಸ್ತುಲ್ ಕಳವು ಪ್ರಕರಣ ದಾಖಲು

ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ವಾಸವಾಗಿರುವ ಪುರುಷೋತ್ತಮ ರೈ ಎಂಬವರು ದಿನಾಂಕ 11-3-2022 ರಂದು ತಮ್ಮ ಬಾಪ್ತು ಕೆಎ-12ಎಂಬಿ-7363ರ ಟೊಯೋಟಾ ಇನ್ನೊವಾ ಕಾರಿನಲ್ಲಿ ತಮ್ಮ ಬಾಪ್ತು ಲೈಸೆನ್ಸ್ ಹೊಂದಿರುವ ಪಿಸ್ತೂಲ್ ನ್ನು ಇಟ್ಟು ಕುಶಾಲನಗರ, ಪಿರಿಯಾಪಟ್ಟಣ ಕಡೆಗಳಿಗೆ ಹೋಗಿ ಬಂದು  ಮತ್ತೆ ಸದರಿ ವಾಹನವನ್ನು ದಿನಾಂಕ 12-3-2022 ರಂದು ಕುಶಾಲನಗರದ ಕೈಗಾರಿಕಾ ಬಡಾವಣೆಯ ಪಿ.ಆರ್.ಸಿ ಕಾಂಕ್ರೀಟ್ ಪ್ಲಾಂಟ್ ನಲ್ಲಿ ನಿಲ್ಲಿಸಿ  ವಾಹನದಲ್ಲಿ ಇಟ್ಟಿದ್ದ ಪಿಸ್ತೂಲ್ ನ್ನು ತೆಗೆದುಕೊಂಡು ಹೋಗಲು ಮರೆತು ಅಲ್ಲಿಂದ ಬೇರೆ ವಾಹನದಲ್ಲಿ ತಮ್ಮ ಮನೆಗೆ ತೆರಳಿದ್ದು,  ನಂತರ ದಿನಾಂಕ 4-4-2022 ರಂದು ಇನ್ನೊವಾ ಕಾರಿನಲ್ಲಿ ಇಟ್ಟಿದ್ದ ಪಿಸ್ತೂಲನನ್ನು ನೋಡಿದಾಗ ಪಿಸ್ತೂಲ್ ಕಾಣೆಯಾಗಿರುವುದು ಕಂಡುಬಂದಿದ್ದು, ಸದರಿ ಪಿಸ್ತೂಲ್ ನ್ನು ಯಾರೋ ಕಳವು ಮಾಡಿರಬಹುದಾಗಿ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ

ಪೊನ್ನಂಪೇಟೆ ನಗರದ ಪ್ರಭು ವರ್ಕ್ ಶಾಪ್ ಹತ್ತಿರ ವಾಸವಾಗಿರುವ ಹೆಚ್.ಡಿ. ನಂಜಯ್ಯ ರವರು ದಿನಾಂಕ 8-4-2022 ರಂದು ತಮ್ಮ ಪತ್ನಿ ಜಯಮ್ಮ ರವರನ್ನು ತಮ್ಮ ಬಾಪ್ತು ಹೋಂಡಾ ಆಕ್ವೀವಾ ಸ್ಕೂಟಿಯಲ್ಲಿ ಹರಿಹರ ಶಾಲೆಯಿಂದ ಕರೆದುಕೊಂಡು ಪೊನ್ನಂಪೇಟೆ ಕಡೆಗೆ ಬರುತ್ತಿದ್ದಾಗ ನಡಿಕೇರಿ ಗ್ರಾಮದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12-ಜೆಡ್-9941ರ ಐ-20 ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂಜಯ್ಯನವರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿ ರಸ್ತೆಯ ಮೇಲೆ ಬಿದ್ದು ಸ್ಕೂಟಿಯಲ್ಲಿದ್ದ ನಂಜಯ್ಯ ಮತ್ತು ಅವರ ಪತ್ನಿಗೆ ಗಾಯಗಳಾಗಿದ್ದು, ಈ ಸಂಬಂಧ ನಂಜಯ್ಯನವರ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೈನಾನ್ಸ್ ಸಂಸ್ಥೆಯಲ್ಲಿ ಹಣ ದುರುಪಯೋಗ ಪ್ರಕರಣ

ವಿರಾಜಪೇಟೆ ನಗರದಲ್ಲಿ ಸ್ಪಂಧನ ಸ್ಪೂರ್ತಿ ಫೈನಾನ್ಸ್ ನಲ್ಲಿ ಗ್ರಾಮೀಣ ಬಡ ಕುಟುಂಬದ ಮಹಿಳೆಯರಿಗೆ ಸಣ್ಣಪುಟ್ಟ ವ್ಯವಹಾರ ನಡೆಸಲು ಕಿರು ಹಣದ ಸಾಲವನ್ನು ನೀಡುತ್ತಿದ್ದು 8 ರಿಂದ 10 ಮಹಿಳೆಯರನ್ನು ಸೇರಿಸಿ ಗುಂಪುಗಳನ್ನಾಗಿ ವಿಂಗಡಿಸಿಕೊಂಡು ಪ್ರತಿ ಮಹಿಳೆಗೆ 15,000/- ದಿಂದ 80,000/- ರೂ. ವರೆಗೆ ಸಾಲವನ್ನು ನೀಡುತ್ತಿದ್ದು ಸದರಿ ಸಾಲದ ಹಣವನ್ನು ಕಂತಿನ ರೂಪದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಬ್ರಾಂಚಿನ ಸಿಬ್ಬಂದಿಗಳ ಮೂಲಕ ಸಂಗ್ರಹಿಸಿ ಫೈನಾನ್ಸ್ ಗೆ ಜಮಾ ಮಾಡಬೇಕಾಗಿರುತ್ತದೆ.  ಆದರೆ 2020ನೇ ಜೂನ್ ತಿಂಗಳಿಂದ 2022ನೇ ಸಾಲಿನವರೆಗೆ ಸಂಗ್ರಹಿಸಿದ ಹಣವನ್ನು ಜಮಾಮಾಡದೆ   ಒಟ್ಟು 3,06,727/- ರೂ ಹಣವನ್ನು ಬ್ಯಾಂಕಿನ ವ್ಯವಸ್ಥಾಪದ ಪುಟ್ಟರಾಜು ಮತ್ತು ಸಿಬ್ಬಂದಿಗಳು ದುರುಪಯೋಗ ಪಡಿಸಿಕೊಂಡಿರುತ್ತಾರೆಂದು ವಿರಾಜಪೇಟೆ ನಗರದ ಸುಭಾಷ್ ನಗರದ ನಿವಾಸಿ ಬಿ.ನವೀನ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ.

ದಿನಾಂಕ 7-4-2022 ರಂದು ಹೆರವನಾಡು ಗ್ರಾಮದ ನಿವಾಸಿ ರೋಹಿಣಿ ಎಂಬವರು ಬೆಳಗ್ಗೆ 10-15 ಗಂಟೆಗೆ ಹಾಕತ್ತೂರಿನ ಪೌಢಶಾಲೆ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಬಸ್ ಹತ್ತಲು ರಸ್ತೆದಾಟುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಅವರಿಗೆ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗದ್ದು,  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ನವೀಕರಣ​ : 10-04-2022 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080