ಅಭಿಪ್ರಾಯ / ಸಲಹೆಗಳು

ಆನ್ ಮೂಲಕ ವಂಚನೆ, ಪ್ರಕರಣ ದಾಖಲು

ಮಡಿಕೇರಿ ನಗರ ಠಾಣಾ ಸರಹದ್ದಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ವೃತ್ತದ ಬಳಿ ವಾಸವಾಗಿರುವ ರಮೇಶ್ ಬೋಪಯ್ಯ ಎಂಬವರಿಗೆ ಕರೆಂಟ್ ಬಿಲ್ ಪಾವತಿ ಮಾಡದೇ ಇರುವ ಸಂಬಂಧ  ಕರೆಂಟ್ ಸಂಪರ್ಕ ಕಡಿತಮಾಡುವುದಾಗಿ ಬೆಸ್ಕಾಂ ಎಲೆಕ್ಟ್ರಿಸಿಟಿ ಕಛೇರಿಯಿಂದ ಬಂದ  ಮೊಬೈಲ್ ಸಂದೇಶವನ್ನು  ಸದರಿಯವರು ನಿಜವೆಂದು ನಂಬಿ ಸದರಿ ಮೊಬೈಲ್ ಸಂಖ್ಯೆಗೆ ಕರೆಮಾಡಿ ವಿಚಾರಿಸಿದಾಗ ಹಿಂದಿನ ಬಾಕಿ ರೂ.11/-ನ್ನು ಪಾವತಿಸಲು ಸೂಚಿಸಿದ ಮೇರೆಗೆ ರಮೇಶ್ ಬೋಪಯ್ಯನವರು  ಬಳಸುತ್ತಿದ್ದ BESCOM APP ಮೂಲಕ ರೂ.11/- ನ್ನು ಪಾವತಿಸಲು ಪ್ರಯತ್ನಿಸಿದ್ದು ಅದು ಸಾದ್ಯವಾಗದೇ ಇದ್ದು, ಪುನ: ಸದರಿ ಸಂಖ್ಯೆಗೆ ಕರೆಮಾಡಿದಾಗ  ಸದರಿ ವ್ಯಕ್ತಿ QUICK SUPPORT APP ನ್ನು ಡೌನ್ಲೋಡ್ ಮಾಡಿ ಹಣ ಪಾವತಿಮಡುವಂತೆ ತಿಳಿಸಿದ್ದು ಅದರಂತೆ ಸದರಿ APP ನ್ನುಡೌನ್ ಲೋಡ್ ಮಾಡಿಕೊಂಡು ಮತ್ತೆ BESCOM APP ನಿಂದ IDBI, HDFC ಮತ್ತು SBI ಖಾತೆಗಳಿಂದ   ರೂ.11/ ನ್ನು ಪಾವತಿ ಮಾಡಿದ್ದು,  ಮರುಕ್ಷಣವೇ  ರಮೇಶ್ ಬೋಪಯ್ಯರವರ ಬಾಪ್ತು HDFC Bank ಖಾತೆಯಿಂದ ರೂ. 22,000/-  IDBI BANK ಖಾತೆಯಿಂದ  1,95,000/- ಮತ್ತು SBI BANK ಖಾತೆಯಿಂದ  94,500 ಹಣ ಒಟ್ಟು 3,11,500/- ಹಣವನ್ನು ಡ್ರಾ ಆಗಿದ್ದುಕಂಡು ಬಂದಿದ್ದು, ಈ ಸಂಬಂಧ ಕೊಡಗು ಜಿಲ್ಲೆಯ ಸಿ.ಇ.ಎನ್. ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮೊಬೈಲ್  ಮೂಲಕ ನಕಲಿ ಸಂದೇಶ ಕಳುಹಿಸಿ ನಂಬಿಸಿ ಹಣ ದೋಚುವ ಹಾಗು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಹಣದ ಅವಶ್ಯಕತೆ ಇರುವುದಾಗಿ ಸಂದೇಶ ಕಳುಹಿಸಿ ನಂಬಿಸಿ ಹಣ ದೋಚುವ ವಂಚಕರಿದ್ದು, ಸದರಿ ಕರೆಗಳನ್ನು ಹಾಗೂ ಸಂದೇಶಗಳನ್ನು ನಂಬಿ ಹಣವನ್ನು ಕಳುಹಿಸಿ ಮೋಸಹೋಗದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾ ಪೊಲೀಸ್ ವತಿಯಿಂದ ಮನವಿ ಮಾಡಲಾಗಿದೆ.

ನಿಂತಿದ್ದ ಬಸ್ಸಿಗೆ ಲಾರಿ ಡಿಕ್ಕಿ

ದಿನಾಂಕ 8-4-2022 ರಂದು ಕುಶಾಲನಗರದ ನಿವಾಸಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮುಸ್ತಾಕ್ ಆಹಮ್ಮದ್ ಮುಲ್ಲಾ ರವರು ಕುಶಾಲನಗರದಿಂದ ಮಡಿಕೇರಿ ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದು ಕೆದಕಲ್ ಬಸ್ ತಂಗುದಾಣದಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಗ್ಯಾಸ್ ಲಾರಿಯೊಂದು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಯಾದ  ಪರಿಣಾಮ ಬಸ್ ಮುಂದೆ ಸಾಗಿ ರಸ್ತೆಯ ಎಡಬದಿಯ ತೋಟಕ್ಕೆ  ನುಗ್ಗಿ ನಿಂತಿದ್ದು, ಚಾಲಕ ಮುಸ್ತಾಕ್ ಆಹಮ್ಮದ್ ಮುಲ್ಲಾ ಮತ್ತು  ಬಸ್ಸಿನ ನಿರ್ವಾಹಕನಿಗೆ ಪೆಟ್ಟಾಗಿ ನೋವುಂಟಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತಿ-ಪತ್ನಿ ಜಗಳ ಪ್ರಕರಣ ದಾಖಲು

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಅಳಿಲುಗುಪ್ಪೆ, ಸಿದ್ದಲಿಂಗಪುರ ಗ್ರಾಮದ ನಿವಾಸಿ ಶ್ರೀಮತಿ ಎ.ಎಲ್ ಶಶಿಕಲಾ ಎಂಬವರ ಪತಿ  ಲೋಕೇಶ ಎಂಬವರು ದಿನಾಂಕ 7-4-2022 ರಂದು ಮದ್ಯಪಾನ ಮಾಡಿಕೊಂಡು  ಮನೆಗೆ ಬಂದು ವಿನಾಕಾರಣ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಮತ್ತೆ ದಿನಾಂಕ 8-4-2022 ರಂದು ಬೆಳಗ್ಗೆ 7-30 ಗಂಟೆಗೆ ಮನೆಯಲ್ಲಿ ಕಾಫಿ ತಯಾರಿಸುತ್ತಿದ್ದಾಗ  ಗಂಡ ಲೊಕೇಶ ಹಲ್ಲೆ ಮಾಡಲು ಬಂದು ಕಾಫಿ ಪಾತ್ರೆಯಲ್ಲಿದ್ದ ಬಿಸಿ ನೀರು ಪತ್ನಿ ಎ.ಎಲ್. ಶಶಿಕಲಾರವರ ಮುಖದ ಮೇಲೆ ಬಿದ್ದು ಸುಟ್ಟ ಗಾಯಗಳಾಗಿದ್ದು ಸದರಿಯವರು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಮುನುಷ್ಯ ಕಾಣೆ ಪ್ರಕರಣ ದಾಖಲು

ಗೋಣಿಕೊಪ್ಪ ಠಾಣಾ ಸರಹದ್ದಿನ ಮಾಯಮುಡಿ ಗ್ರಾಮದಲ್ಲಿ ವಾಸವಾಗಿರುವ ಅಸ್ಕರ್ ಎಂಬವರು ಮಾಯಮುಡಿಯಲ್ಲಿ ಸುಮಾರು 15 ವರ್ಷಗಳಿಂದ ಕಾಫಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 5-4-2022 ರಂದು ತನ್ನ ತಮ್ಮ ನೌಫಲ್ ರವರಿಗೆ ಸೇರಿದ ಇನ್ನೋವಾ ಕಾರನ್ನು ತೆಗೆದುಕೊಂಡು ಕುಶಾಲನಗರಕ್ಕೆ ಹೋಗಿ ವ್ಯಾಪಾರದ ಹಣ ತರುವುದಾಗಿ ತಿಳಿಸಿ ಹೋಗಿದ್ದು ಮತ್ತೆ ಮರಳಿ ಮನಗೆ ಬಾರದೇ ಕಾಣೆಯಾಗಿರುತ್ತಾರೆಂದು  ಅವರ ಪತ್ನಿ ಶ್ರೀಮತಿ ಟಿ.ಎ. ಫರೀದಾ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 09-04-2022 12:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080