ಅಭಿಪ್ರಾಯ / ಸಲಹೆಗಳು

ಕುಶಾಲನಗರ ಪೊಲೀಸರ ಕಾರ್ಯಾಚರಣೆ, ಚಿನ್ನಾಭರಣ ದೋಚಿ ಪರಾರಿಯಾದ ಆರೋಪಿಗಳ ಬಂಧನ:

ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 1ನೇ ಬ್ಲಾಕ್ ಬೈಚನಹಳ್ಳಿ ಕುಶಾಲನಗರದ ಶ್ರೀಮತಿ ಲಕ್ಷ್ಮೀ ಎಂಬವರ ಮನೆಗೆ ಒಬ್ಬ ಅಪರಿಚಿತ ಮಹಿಳೆಯು ಹಣೆಗೆ ವಿಭೂತಿ ಧರಿಸಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಣಿ ಹಾಕಿಕೊಂಡು ಕೈಯಲ್ಲಿ ಗಂಟೆ ಹಿಡಿದು ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸಿಕೊಡುತ್ತೇನೆ ಎಂದು ಹೇಳಿ ಮನೆಯ ಒಳಗಡೆ ಬಂದು ನಿಮಗೆ ಆರೋಗ್ಯ ಸರಿ ಇಲ್ಲದಿದ್ದರೆ ನಾನು ಎಲ್ಲವನ್ನು ಬಗೆಹರಿಸಿಕೊಡುತ್ತೇನೆಂದು ತಲೆಯ ಮೇಲೆ ಕೈಯಿಟ್ಟು ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮೋಸದಿಂದ ಚಿನ್ನಾಭರಣಗಳನ್ನು ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದರಿ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಿಪಿಐ ಕುಶಾಲನಗರ ವೃತ್ತರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಪ್ರಕರಣದ ಪತ್ತೆಯ ಬಗ್ಗೆ  ಸೂಚನೆಗಳನ್ನು ನೀಡಿದ್ದು, ಅದರಂತೆ ಕಾರ್ಯ ಪ್ರವೃತ್ತರಾದ ಸಿಪಿಐ ಕುಶಾಲನಗರ ರವರ ತಂಡ ಆರೋಪಿಗಳನ್ನು ಕುಶಾಲನಗರ- ಕೊಪ್ಪ ಕಾಫಿ ಡೇ ಸಮೀಪದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಬಂಧಿಸುವಲ್ಲಿ AiÀıÀ¹éAiÀiÁVದ್ದು ಬಂಧಿತರಿಂದ 135 ಗ್ರಾಂ. ಚಿನ್ನಾಭರಣ ಮತ್ತು 27,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ :

    1.  ಶ್ರೀಮತಿ ಲಕ್ಷ್ಮಿ, ಗಂಡ ರವಿ, ಪ್ರಾಯ 22 ವರ್ಷ, ವ್ಯಾಪಾರ ವೃತ್ತಿ, ಭಜನಾ ಮಂದಿರ ರಸ್ತೆ, ವೇದಾವತಿ ನಗರ, ಹಿರಿಯೂರು ನಗರ, ಚಿತ್ರದುರ್ಗ,              ಸ್ವಂತ ಊರು ಅಡವಿ ಆಂಜನೇಯ ಬಡಾವಣೆ, ರಾಣಿ ಬೆನ್ನೂರು ಟೌನ್, ಹಾವೇರಿ. 

  1. ಶ್ರೀಮತಿ ಲಕ್ಷ್ಮಿ ಗಂಡ ರಂಗಪ್ಪ, ಪ್ರಾಯ 23 ವರ್ಷ, ವ್ಯಾಪಾರ ವೃತ್ತಿ, ವಾಸ ಭಜನಾ ಮಂದಿರ ರಸ್ತೆ, ವೇದಾವತಿ ನಗರ, ಹಿರಿಯೂರು ನಗರ, ಚಿತ್ರದುರ್ಗ, ಸ್ವಂತ ಊರು ಅಡವಿ ಆಂಜನೇಯ ಬಡಾವಣೆ, ರಾಣಿ ಬೆನ್ನೂರು ಟೌನ್, ಹಾವೇರಿ. 
  1. ಶ್ರೀಮತಿ ಸುಜಾತ ಗಂಡ ರವಿ, ಪ್ರಾಯ 22 ವರ್ಷ, ವ್ಯಾಪಾರ ವೃತ್ತಿ, ವಾಸ ಭಜನಾ ಮಂದಿರ ರಸ್ತೆ, ವೇದಾವತಿ ನಗರ, ಹಿರಿಯೂರು ನಗರ, ಚಿತ್ರದುರ್ಗ, ಸ್ವಂತ ಊರು ಅಡವಿ ಆಂಜನೇಯ ಬಡಾವಣೆ, ರಾಣಿ ಬೆನ್ನೂರು ಟೌನ್, ಹಾವೇರಿ. 

     ಈ ಕಾರ್ಯಾಚರಣೆಯನ್ನು ಶ್ರೀ. ಮಹೇಶ್ ಎಂ, ಸಿಪಿಐ ಕುಶಾಲನಗರ ವೃತ್ತ ರವರ ನೇತೃತ್ವದಲ್ಲಿ, ಶ್ರೀ. ಗಣೇಶ್ ಪಿಎಸ್ಐ ಕುಶಾಲನಗರ ಟೌನ್ ಪೊಲೀಸ್ ಠಾಣೆ, ಶ್ರೀ. ಗೋಪಾಲ ಎಎಸ್ಐ, ಸಿಬ್ಬಂದಿಯವರಾದ ಶ್ರೀ. ಉಮೇಶ್, ಸುದೀಶ್ ಕುಮಾರ್, ಶ್ರೀ ರಂಜಿತ್, ಶ್ರೀಮತಿ ನಿಶಾ, ಸೌಮ್ಯ ರವರ ಪರಿಶ್ರಮದಲ್ಲಿ ಭೇಧಿಸಿದ್ದು, ತಂಡದ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಲಾಗಿದೆ. 

     ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಗಳಿದ್ದು ಆರೋಪಿಗಳ ಪತ್ತೆ ಬಗ್ಗೆ ತಂಡ ರಚಿಸಲಾಗಿರುತ್ತದೆ. ಕೊಡಗು ಜಿಲ್ಲೆಯ ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳು ಮಾರು ವೇಷಗಳಲ್ಲಿ ಮನೆಗಳಿಗೆ ಬಂದು ಮನೆಯಲ್ಲಿ ಮಹಿಳೆಯರು ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಕಷ್ಟ ಪರಿಹಾರಗಳನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಮನೆಯೊಳಗೆ ಹೋಗಿ ಆಭರಣಗಳನ್ನು ಧರಿಸಿಕೊಂಡು ಪೂಜೆ ಮಾಡಿ ಮೋಸದಿಂದ ಸದರಿ ಆಭರಣಗಳನ್ನು ತೆಗೆದುಕೊಂಡು ಹೋಗುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಇಂತಹ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಹಾಗೂ ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿ ಇಡದೆ  ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳವುದು.  ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ  ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 112 ಇಂಡಿಯಾ ಎಂಬ ತಂತ್ರಾಂಶವನ್ನು ಬಳಸಿ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ.

ಅಪರಾಧ ಪ್ರಕರಣಗಳು

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ದಿನಾಂಕ 7-4-2021 ರಂದು ಬೆಂಗಳೂರಿನ ಸುಬ್ರಮಣ್ಯಪುರದಲ್ಲಿ ವಾಸವಾಗಿರುವ ಸುಭಾಷ್ ಚೆಂಗಪ್ಪ ಹಾಗು ಅವರ ಪತ್ನಿ ರೀನಾ ಹೆಬ್ಬಾರ್ ರವರು ಗೋಣಿಕೊಪ್ಪ ನಗರದಪ್ರಕಾಶ್ ಇಂಟರ್ ನ್ಯಾಷನಲ್ ಲಾಡ್ಜ್ ಗೆ ಬಂದು ದಿನಾಂಕ 8-4-2021ರಂದು ಗೋಣಿಕೊಪ್ಪ ಪೊಲೀಸರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಸದರಿ ಲಾಜ್ಡಿಗೆ ಹೋಗಿ ಪರಿಶೀಲಿಸಿದ ಸಂದರ್ಭದಲ್ಲಿ  ರೀನಾ ಹೆಬ್ಬಾರ್ ರವರು ವಿಷ ಸೇವಿಸಿ ಮೃತಪಟ್ಟಿರುವುದು ಕಂಡು ಬಂದಿದ್ದು ಅವರ ಪತಿ ಸುಭಾಷ್ ಚೆಂಗಪ್ಪನವರೂ ಸಹ ಅಸ್ವಸ್ಥರಾಗಿರುವು ಕಂಡು ಬಂದಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಕಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಂಬಿಕೆ ದ್ರೋಹ ಪ್ರಕರಣ ದಾಖಲು

ವಿರಾಜಪೇಟೆ ನಗರದ ಶಿವಕೇರಿಯಲ್ಲಿ ವಾಸವಾಗಿರುವ ರಾಘವೇಂದ್ರ ಎಂಬವರು ನಗರದ ದೊಡ್ಡಟ್ಟಿ ಚೌಕಿಯಲ್ಲಿ ಹೊಟೇಲ್ ನಡೆಸುತ್ತಿದ್ದು ದಿನಾಂಕ 7-4-2021 ರಂದು ಸದರಿ ಹೋಟೇಲ್ ಗೆ ಒಬ್ಬ ಅಪರಿಚಿತ ಯುವಕ ಬಂದು ಆಹಾರವನ್ನು ಸೇವಿಸಿ ಹೋಗಿದ್ದು ಮತ್ತೆ ರಾತ್ರಿ 9-20 ಗಂಟೆಯ ಸಮಯದಲ್ಲಿ  ಸದರಿ ವ್ಯಕ್ತಿ  ಹೋಟೇಲಿಗೆ ಬಂದು ಹೋಟೇಲಿನಲ್ಲಿದ್ದ ರಾವೇಂದ್ರರವರ ಅಣ್ಣ ರವಿಯವರಲ್ಲಿ ರಾಘವೇಂದ್ರರವರ ಬಾಪ್ತು ಸ್ಕೂಟರನ್ನು 5 ನಿಮಿಷದಲ್ಲಿ ಬರುವುದಾಗಿ ಪಡೆದುಕೊಂಡು ಹೋಗಿದ್ದು ಮತ್ತೆ ಸದರಿ ಸ್ಕೂಟರನ್ನು ತಂದು ಕೊಡದೆ ನಂಬಿಕೆದ್ರೋಹ ಎಸಗಿಸುತ್ತಾನೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ವಂಚನೆ:

ಮಡಿಕೇರಿ ನಗರದ ಹೊಸಬಡಾವಣೆ ಯಲ್ಲಿ ವಾಸವಾಗಿರುವ ಶಿವಕುಮಾರ್ ಜಿ.ಎಂ. ಮತ್ತು ರಾಮಣ್ಣ ಶೆಟ್ಟಿ ಎಂಬವರು ಸ್ನೇಹಿತರಾಗಿದ್ದು, ದಿನಾಂಕ 27-8-2020 ರಂದು ರಾಮಣ್ಣ ಶೆಟ್ಟಿರವರು ಶಿವಕುಮಾರ್ ರವರ ಕಾರ್ಪೋರೇಶನ್ ಬ್ಯಾಂಕಿನ ಚೆಕ್ಕನ್ನು ಇಟ್ಟುಕೊಂಡು ನಕಲಿ ಸಹಿ ಮಾಡಿ 7 ಲಕ್ಷ ಹಣವನ್ನು ಪಾವತಿ ಮಾಡುವಂತೆ  ನೋಟೀಸ್ ನೀಡಿದ್ದು ಆರೋಪಿ ಶಿವಕುಮಾರ್ ಮೋಸದಿಂದ ಹಣವನ್ನು ಪಡೆಯುವ ಉದ್ದೇಶದಿಂದ ಶಿವಕುಮಾರ್ ರವರ ಚೆಕ್ಕನ್ನು ಮೋಸದಿಂದ ಇಟ್ಟುಕೊಂಡು ಮೋಸ ಮಾಡಿರುತ್ತಾರೆಂದು ನ್ಯಾಯಾಲಯದಲ್ಲಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಡಿಕೇರಿ  ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 10-04-2021 11:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080