ಅಭಿಪ್ರಾಯ / ಸಲಹೆಗಳು

ದರೋಡೆ ಯತ್ನ

ದಿನಾಂಕ 28/12/2021ರಂದು ಅಪರಾಹ್ನ ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಸುಳ್ಳಿಮಾಡ ಪಿ ತಿಮ್ಮಯ್ಯ ಎಂಬವರು ಅವರ ಪತ್ನಿ ಪಾರ್ವತಿ ಎಂಬವರೊಂದಿಗೆ ಮನೆಯಲ್ಲಿರುವಾಗ ಓರ್ವ ಅಪರಿಚಿತ ವ್ಯಕ್ತಿಯು ಅನಿರೀಕ್ಷಿತವಾಗಿ ಅವರ ಮನೆಯೊಳಕ್ಕೆ ಪ್ರವೇಶಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ದರೋಡೆ ಮಾಡುವ ಉದ್ದೇಶದಿಂದ ಹಣ ಕೊಡುವಂತೆ ಕೇಳಿದ್ದು ಆಗ ತಿಮ್ಮಯ್ಯನವರು ಅವರ ಬಳಿ ಇದ್ದ ಬೆತ್ತದ ಕೋಲನ್ನು ಆತನಿಗೆ ತೋರಿಸಿದ್ದು ಆಗ ಆತನು ತಿಮ್ಮಯ್ಯನವರ ಕೈಗೆ ಚಾಕುವಿನಿಂದ ಇರಿದು  ಗಾಯಗೊಳಿಸಿದಾಗ ತಿಮ್ಮಯ್ಯನವರು ಜೋರಾಗಿ ಕಿರುಚಿಕೊಂಡಾಗ ಆತನು ಅಲ್ಲಿಂದ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನುಷ್ಯ ಕಾಣೆ ಪ್ರಕರಣ

ಕೊಡ್ಲಿಪೇಟೆ ಬಳಿಯ ದೊಡ್ಡ ಕೊಡ್ಲಿ ನಿವಾಸಿ ಸದಾಶಿವಾಚಾರ್ಯ ಎಂಬವರು ದಿನಾಂಕ 25/12/2021ರಂದು ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 28/12/2021ರಂದು ವಿರಾಜಪೇಟೆಯ ವಿದ್ಯಾನಗರದ ನಿವಾಸಿ ಅಬ್ದುಲ್‌ ರೆಹಮಾನ್‌ ಎಂಬವರು ವಿರಾಜಪೇಟೆ ನಗರದ ಜಯಪ್ರಕಾಶ್‌ ಬಾಲಿಕಾ ಪ್ರೌಢಶಾಲೆಯ ಬಳಿ ಅವರ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಚಿಕ್ಕಪೇಟೆ ಕಡೆಯಿಂದ ಒಂದು ಬೈಕನ್ನು ಅದರ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಬ್ದುಲ್‌ ರೆಹಮಾನ್ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅಬ್ದುಲ್‌ ರೆಹಮಾನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 28/12/2021ರಂದು ವಿರಾಜಪೇಟೆ ನಗರದ ನೆಹರುನಗರ ನಿವಾಸಿ ರಂಷೀದ್‌ ಎಂಬವರು ಅವರ ರಿಕ್ಷಾದಲ್ಲಿ ಮೊಗರಗಲ್ಲಿ ಕಡೆಗೆ ಹೋಗುತ್ತಿರುವಾಗ ಅವರ ಪರಿಚಯದ ನೆಹರುನಗರದ ನಿವಾಸಿ ಶಂಶುದ್ದೀನ್‌ ಎಂಬವರು ಹಳೆ ವೈಷಮ್ಯದಿಂದ ರಿಕ್ಷಾವನ್ನು ಅಡ್ಡಗಟ್ಟಿ ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಸು ಕಳವು ಪ್ರಕರಣ

ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ತೋರದಲ್ಲಿ ಗೋಶಾಲೆ ನಡೆಸುತ್ತಿರುವ ಬಿ.ಡಿ.ಬಿದ್ದಪ್ಪ ಎಂಬವರು ದಿನಾಂಕ 24/12/2021ರಂದು ಮೇಯಲು ಬಿಟ್ಟಿದ್ದ ಒಂದು ಹಸುವನ್ನು ತೋರ ನಿವಾಸಿಗಳಾದ ಮಧು ಮತ್ತು ವಿನು ಎಂಬವರು ಕಳವು ಮಾಡಿ ಕಾಳೆಂಗಿ ನಿವಾಸಿ ಸಜಿ ಎಂಬವರಿಗೆ ರೂ.7,000/- ಕ್ಕೆ ಮಾರಾಟ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 29-12-2021 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080