ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

ದಿನಾಂಕ 27/12/2020ರಂದು ಶ್ರೀಮಂಗಲ ಬಳಿಯ ಪರಕಟಗೇರಿ ನಿವಾಸಿ ಕರ್ತಮಾಡ ವಿಜಯ ಎಂಬವರೊಂದಿಗೆ ಅದೇ ಗ್ರಾಮದ ನಿವಾಸಿ ಕರ್ತಮಾಡ ಸಂಜಯ್‌ ಎಂಬವರು ಸಾಲದ ಹಣದ ವಿಚಾರವಾಗಿ ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ಹಲ್ಲೆ ಪ್ರಕರಣ

ದಿನಾಂಕ 27/12/2020ರಂದು ಪೊನ್ನಂಪೇಟೆ ಬಳಿಯ ಕಾನೂರು ಗ್ರಾಮದ ನಿಡುಗಂಭ ನಿವಾಸಿ ಎಸ್‌.ಎಂ.ನಾಗರತ್ನ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ರಾಜೇಂದ್ರ, ನವೀನ, ಪವನ್‌ ಮತ್ತು ಪವನ್‌ ಎಂಬವರುಗಳು ಸೇರಿಕೊಂಡು ರಸ್ತೆ ವಿಚಾರವಾಘಿ ಜಗಳವಾಡಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ಹಲ್ಲೆ ಪ್ರಕರಣ

ದಿನಾಂಕ 27/12/2020ರಂದು ವಿರಾಜಪೇಟೆ ನಗರದ ನಿವಾಸಿ ಶಕೀಲ್‌ ಎಂಬವರು ಸ್ನೇಹಿತರೊಂದಿಗೆ ಚಿಕ್ಕಪೇಟೆಯಲ್ಲಿ ಆಟವಾಡುತ್ತಿರುವಾಗ ಶಂಷುದ್ದೀನ್‌ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 26/12/2020ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಕಡಂಗದ ಪೊದವಾಡ ನಿವಾಸಿ ಪಣಿ ಎರವರ ಅಪ್ಪಿ ಎಂಬವರು ಅವರ ಲೈನ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮಕ್ಕಳಾಗದ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 26/12/2020ರಂದು ರಾತ್ರಿ ವೇಳೆ ವಿರಾಜಪೇಟೆ ಬಳಿಯ ಟಿ.ಎಂ.ಶರತ್‌ ಎಂಬವರು ಸ್ವಂತ ಕಾರಣಗಳಿಗಾಗಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ಹೊಳೆಯಲ್ಲಿ ಮುಳುಗಿ ಬಾಲಕರ ಸಾವು

ದಿನಾಂಕ 27/12/2020ರಂದು ಹೈಸೊಡ್ಲೂರು ಬಳಿಯ ಎಂ.ಬಿ. ಬೋಪಣ್ಣ ಹಾಗೂ ಪೊನ್ನಂಪೇಟೆ ನಿವಾಸಿ ಮನೀಷ್‌ ಎಂಬ ಇಬ್ಬರು ಯುವಕರು ಗೋಣಿಕೊಪ್ಪ ಬಳಿಯ ಬಾಳಾಜಿ ಬಳಿಯ ಹೊಳೆಯೊಂದರಲ್ಲಿ ಈಜಲು ತೆರಳಿ ಹೊಳೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

ವಿಷ ಸೇವಿಸ ಬಾಲಕಿ ಸಾವು

ದಿನಾಂಕ 27/12/2020ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಶಿ ಜೇನು ಕುರುಬರ ಕರಿಯ ಎಂಬವರ ಮಗಳು ಜ್ಯೋತಿ ಎಂಬ ಬಾಲಕಿಯು ತಿಳಿಯದೆ ಆಕಸ್ಮಿಕವಾಗಿ ಮನೆಯಲ್ಲಿ ಇಟ್ಟಿದ್ದ ತಿಮಟ್‌ ಕ್ರಿಮಿನಾಶಕವನ್ನು ಸೇವಿಸಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 28-12-2020 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ