ಅಭಿಪ್ರಾಯ / ಸಲಹೆಗಳು

ಅಪಘಾತ ಗಾಯಾಳು ಸಾವು

ದಿನಾಂಕ 13/11/2020ರಂದು ಕುಶಾಲನಗರ ಬಳಿಯ ಗುಡ್ಡೆಹೊಸೂರುವಿನ ಜಂಕ್ಷನ್‌ನಲ್ಲಿ ಅಲ್ಲಿನ ನಿವಾಸಿ ಕನಕರಾಜ್‌ ಎಂಬವರು ರಸ್ತೆ ದಾಟುತ್ತಿದ್ದಾಗ ಸುಂಟಿಕೊಪ್ಪದ ಜುನೈದ್‌ ಎಂಬಾತ ಚಾಲಿಸುತ್ತಿದ್ದ ಸ್ಕೂಟಿ ಡಿಕ್ಕಿಯಾಗಿ ಗಾಯಗೊಂಡು ಕೇರಳದ ಕೋಯಿಕ್ಕೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕರಾಜ್‌ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27/11/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 26/11/2020ರಂದು ಕುಶಾಲನಗರ ಬಳಿಯ ಹೆಬ್ಬಾಲೆಯ ನಿವಾಸಿ ಸಂತೋಷ್‌ ಎಂಬಾತನು ವಿಪರೀತ ಪದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದುದನ್ನು ಆಕ್ಷೇಪಿಸಿದ ಹೆಬ್ಬಾಲೆಯ ನಿವಾಸಿ ತಿಮ್ಮಾಜಮ್ಮ ಎಂಬ ಮಹಿಳೆಯ ಮೇಲೆ ಸಂತೋಷ್‌ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಿಷ ಸೇವಿಸಿ ವ್ಯಕ್ತಿ ಸಾವು

ದಿನಾಂಕ 27/11/2020ರಂದು ಸೋಮವಾರಪೇಟೆ ಬಳಿಯ ಕಲ್ಕಂದೂರು ನಿವಾಸಿ ಸುರೇಶ ಎಂಬವರು ವಿಪರೀತ ಮದ್ಯಪಾನ ಮಾಡಿ ಮದ್ಯದ ಅಮಲಿನಲ್ಲಿ ಕ್ರಿಮಿನಾಶಕ ಔಷದಿಯನ್ನು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 27/11/2020ರಂದು ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಬೋಪಯ್ಯ ಎಂಬವರು ಅವರ ಕಾರನ್ನು ಚಾಲಿಸಿಕೊಂಡು ಬರುತ್ತಿರುವಾಗ ತಾಕೇರಿಯ ದುದ್ದಗಲ್‌ ಸೇತುವೆಯ ಬಳಿ ಕಾರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಬೋಪಯ್ಯನವರ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಬೋಪಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 27/11/2020ರಂದು ಮಾದಾಪುರದ ಜಂಬೂರು ಬಾಣೆ ನಿವಾಸಿ ಮಹಮದ್‌ ಸಿದ್ದಿಕ್‌ ಎಂಬವರಿಗೆ ಮಧು ಎಂಬವರು ಜೀಪಿನಲ್ಲಿ ಬಂದು ಹಳೆ ವೈಷಮ್ಯದಿಂದ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 27/11/2020ರಂದು ಯಸಳೂರು ಹೋಬಳಿಯ ಈಚಲಬೀಡು ನಿವಾಸಿ ಧನರಾಜ್‌ ಎಂಬವರು ಅವರ ಕಾರನ್ನು ಶನಿವಾರಸಂತೆ ಬಳಿಯ ಅಪ್ಪಶೆಟ್ಟಹಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಅಪ್ಪಶೆಟ್ಟಹಳ್ಳಿ ಗ್ರಾಮದ ನಿವಾಸಿ ಡಯಾನ್‌ ಗೌಡ ಎಂಬವರಿಗೆ ಡಿಕ್ಕಿಪಡಿಸಿದ ಪರಿಣಾಮ ಡಯಾನ್‌ ಗೌಡರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಗಾಂಜಾ ವಶ

ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ನಾಪೋಕ್ಲು ನಗರದ ಮಾರ್ಕೆಟ್‌ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಾಪೋಕ್ಲು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ದಿನಾಂಕ 27-11-2020 ರಂದು ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ನಾಪೋಕ್ಲು ಠಾಣಾ ವ್ಯಾಪ್ತಿಯ ಮಾರ್ಕೆಟ್ ಬಳಿ ವ್ಯಕ್ತಿಯೋರ್ವ ಅಕ್ರಮವಾಗಿ ಜೇಬಿನಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದನ್ನು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ ಆರೋಪಿ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದ ನಿವಾಸಿ ಮಹಮ್ಮದ್ ತಾಹಿರ್ ಯಾನೆ ಪ್ರಭಾಕರ, ತಂದೆ ನಾರಾಯಣ ಎಂಬಾತನನ್ನು ವಶಕ್ಕೆ ಪಡೆದು ಆರೋಪಿಯಿಂದ 74 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ವಿಷ ಸೇವಿಸಿ ವ್ಯಕ್ತಿ ಸಾವು

ದಿನಾಂಕ 27/11/2020ರಂದು ಪಾರಾಣೆ ಬಳಿಯ ಕೈಕಾಡು ನಿವಾಸಿ ಮುಕ್ಕಾಟಿರ ಲವ ಎಂಬವರು ಮನೆಯಲ್ಲಿ ಕಳೆ ನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 27/11/2020 ರಂದು ಬೆಂಗಳೂರಿನ ನಿವಾಸಿ ಶಂಕರ್‌ ಎಂಬವರು ಅವರ ಕಾರಿನಲ್ಲಿ ಹಲವರನ್ನು ಕರೆದುಕೊಂಡು ಕೊಡಗಿಗೆ ಬರುತ್ತಿರುವಾಗ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದ ಇಬ್ಬನಿ ರೆಸಾರ್ಟ್‌ ಬಳಿಯ ರಸ್ತೆಯಲ್ಲಿ ಎದುರಿನಿಂದ ಒಂದು ಬೈಕನ್ನು ಅದರ ಸವಾರ ಕುಂಜಿಲ ಗ್ರಾಮದ ನಿಜಾಮುದ್ದೀನ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಂಕರ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಚಾಲಕ ಶಂಕರ್‌, ಮತ್ತು ಬೈಕಿನ ಸವಾರರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 28-11-2020 11:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ