ಅಭಿಪ್ರಾಯ / ಸಲಹೆಗಳು

ಆನ್ ಲೈನ್‍ ವಂಚನೆ ಪ್ರಕರಣ

                ದಿನಾಂಕ: 20-10-2020 ರಂದು ಸೋಮವಾರಪೇಟೆ ತಾಲ್ಲೂಕು ಮಾದಾಪಟ್ಟಣ ನಿವಾಸಿ ಶ್ರೀಮತಿ ವಿಶಾಲಾಕ್ಷಿ ಎಂಬುವವರು ಫೋನ್ ಪೇ ಮೂಲಕ ತನ್ನ ಸಂಬಂದಿಕರಿಗೆ 45,000 ಹಣವನ್ನು ಸಂದಾಯ ಮಾಡಿದ ನಂತರ ಅವರ ಖಾತೆಗೆ ಸಂದಾಯವಾಗದೇ ಇದ್ದುದರಿಂದ  ನಂತರ ಫೋನ್ ಪೇ ಗ್ರಾಹಕ ಸೇವಾ ಕೇಂದ್ರದ ಸಂಖ‍್ಯೆ 18004127680 ಕ್ಕೆ ಕರೆ ಮಾಡಿದಾಗ ಕರೆ ಸ್ಥಗಿತಗೊಳಿಸಿರುತ್ತದೆ. ಸ್ವಲ್ಪ ಸಮಯದ ನಂತರ 9450082384 ರಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಫೋನ್‍ ಪೇ ಯಿಂದ ಕರೆ ಮಾಡುತ್ತಿದ್ದು ಹಣ ಹಿಂದಿರುಗಿಸುವುದಾಗಿ ಹೇಳಿದ್ದು ಆತ ಹೇಳಿದಂತೆ ಫೋನ್‍ ಪೇ ಆ್ಯಪ್‍ ಓಪನ್‍ ಮಾಡಿ ಆತನು ಹೇಳಿದಂತೆ ಕೋಡ್ ಗಳನ್ನು ನಮೂದಿಸಿದ್ದು ಕೂಡಲೇ ವಿಶಾಲಾಕ್ಷಿಯವರ  ಬ್ಯಾಂಕ್‍ ಖಾತೆಯಿಂದ ಹಂತ ಹಂತವಾಗಿ ಒಟ್ಟು 94,837 ರೂ ಹಣ ಕಡಿತಗೊಂಡಿರುತ್ತದೆ. ಈ ರೀತಿ ಆನ್‍ ಲೈನ್‍ ವ್ಯವಹಾರ ಮಾಡುವಾಗ ವಂಚನೆ ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್ ನ ಅಧಿಕೃತ ಅಪ್ಲಿಕೇಶನ್ ಗಳನ್ನು ಬಳಸುವುದು. ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಆನ್ ಲೈನ್‍ ಹಣ ವರ್ಗಾವಣೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ  ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ತೊಡಕುಂಟಾದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವುದು. ಹಣಕಾಸು ಸಂಸ್ಥೆಗಳ ಅಥವಾ ಯು.ಪಿ.ಐ ಆಧಾರಿತ ಆನ್ ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್ ಪೇ, ಇತರೆ ಯು.ಪಿ.ಐ ಆಧಾರಿತ ಆನ್ ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್ ಗಳ ಕ್ಯೂ.ಆರ್ ಕೋಡ್‍ ಸ್ಕ್ಯಾನ್‍ ಮಾಡಲು ಹೇಳಿ ಹಾಗೂ ಕೋಡ್ ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡದಂತೆ ಸೂಚಸಲಾಗಿದೆ.

ಕಳವು ಪ್ರಕರಣ

            ದಿನಾಂಕ: 12-10-2020 ರಂದು ವಿರಾಜಪೇಟೆ ಪಟ್ಟಣದ ವಿಜಯನಗರ ನಿವಾಸಿ ಅಯ್ಯೂಬ್‍ ಎಂಬುವವರು ಅಂಬೇಡ್ಕರ್‍ ಭವನದ ಬಳಿ 20 ಪ್ಲೈವುಡ್‍ ಶೀಟ್‍ಗಳನ್ನು ಇಟ್ಟಿದ್ದರು. ದಿನಾಂಕ: 27-10-2020 ರಂದು ಹೋಗಿ ನೋಡಿದಾಗ ಯಾರೋ ಕಳ್ಳರು 45,000 ರೂ ಬೆಲೆಯ 15 ಪ್ಲೈವುಡ್‍ ಶೀಟ್‍ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

            ದಿನಾಂಕ: 27-10-2020 ರಂದು ಸೋಮವಾರಪೇಟೆ ತಾಲ್ಲೂಕು ಬಿಳಿಕಿಕೊಪ್ಪ ಗ್ರಾಮದ ನಿವಾಸಿ ನತೀಶ್‍ ಮಂದಣ್ಣ ಎಂಬುವವರು ಮನೆಯ ಮೇಲ್ಛಾವಣಿ ಹಂಚನ್ನು ಯಾರೋ ಕಳ್ಳರು ತೆಗೆದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿಟ್ಟಿದ್ದ 1,45,000 ರೂ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 27-10-2020 ರಂದು ವಿರಾಜಪೇಟೆ ಪಟ್ಟಣದ ಪಂಜರಪೇಟೆಯಲ್ಲಿ ಖಾಲಿ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಪಟ್ಟಣ ಠಾಣೆ ಪಿಎಸ್‍ಐ ಅಭಿಜಿತ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ನವೀಕರಣ​ : 28-10-2020 04:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080