ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

ದಿನಾಂಕ 23/06/2021ರಂದು ಶ್ರೀಮಂಗಲ ಬಳಿಯ ಚೀಪೆಕೊಲ್ಲಿ ವಾಸಿ ಸಂಜು ಎಂಬಾತನು ಕುಮಟೂರು ಗ್ರಾಮದ ಕೆಲವು ನಿವಾಸಿಗಳ ಮನೆಗೆ ಸೆಸ್ಕ್‌ ಸಂಸ್ಥೆಯ ವಿದ್ಯುತ್‌ ಬಿಲ್‌ ಕಲೆಕ್ಟರ್‌ ಎಂಬುದಾಗಿ ಹೇಳಿಕೊಂಡು ಹೋಗಿ ಸುಮಾರು ರೂ.2320/- ಹಣವನ್ನು ವಿದ್ಯುತ್‌ ಬಿಲ್‌ ರೂಪದಲ್ಲಿ ಸಂಗ್ರಹಿಸಿ ಯಾವುದೇ ಬಿಲ್‌ ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೋವಿಡ್‌ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ 26/06/2021ರಂದು ಮಡಿಕೇರಿ ನಗರದ ನಗರ ಸಭಾ ಆರೋಗ್ಯ ನಿರೀಕ್ಷಕರಾದ ಹರಿಣಿ ಎಂಬವರು ಕೋವಿಡ್‌ – 19 ಮಾರ್ಗಸೂಚಿಗಳ ಉಲ್ಲಂಘನೆಯ ಕುರಿತು ತಪಾಸಣೆ ನಡೆಸುತ್ತಿರುವಾಗ ಮಡಿಕೇರಿ ನಗರದ ದಾಸವಾಳ ರಸ್ತೆಯಲ್ಲಿರುವ ವೈವಸ್‌ ಆಸ್ಪತ್ರೆಯ ಹಿಂಭಾಗದ ಝೂಂ ಹೋಂ ಸ್ಟೇಯನ್ನು ಅದರ ಮಾಲೀಕ ಮಹಮದ್‌ ಫಿರೋಜ಼್ ಎಂಬವರು ಕೋವಿಡ್‌ – 19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ತಂಗಲು ಬಾಡಿಗೆಗೆ ನೀಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಕರು ಸಾಗಾಟ

ದಿನಾಂಕ 26/06/2021ರಂದು ಪೊನ್ನಂಪೇಟೆ ಬಳಿಯ ಬಾಳೆಲೆ ಪೊಲೀಸ್‌ ಉಪ ಠಾಣೆಯಲ್ಲಿ ಎಎಸ್‌ಐ ಬಸವರಾಜು ಶೆಟ್ಟಿರವರು ಕರ್ತವ್ಯದಲ್ಲಿರುವಾಗ ಬೆಳಗಿನ ಜಾವ ಕಾನೂರು ರಸ್ತೆಯಲ್ಲಿ ಒಂದು ಕರುವನ್ನು ಗೂಡ್ಸ್‌ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಒಂದು ಗೂಡ್ಸ್‌ ರಿಕ್ಷಾದಲ್ಲಿ ವಿರಾಜಪೇಟೆಯ ಮಗ್ಗುಲ ಗ್ರಾಮದ ಗಣೇಶ ಮತ್ತು ಸುರೇಶ ಹಾಗೂ ಬಾಳೆಲೆಯ ಕೊಪ್ಪಲು ಗ್ರಾಮದ ಸಮೀರ್‌ ಎಂಬವರು ಒಂದು ಕರುವನ್ನು ಸರ್ಕಾರದ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಆರೋಪಿಗಳ ವಿರುದ್ದ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಬೈಕ್‌ ಪತ್ತೆ

ದಿನಾಂಕ 26/06/2021ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಸಿದ್ದಲಿಂಗ ಬಾನಸೆಯವರು ಸಿಬ್ಬಂದಿಯವರೊಂದಿಗೆ ಅಮ್ಮತ್ತಿ ಪಟ್ಟಣದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಅಲ್ಲಿಗೆ ಒಂದು ಬೈಕಿನಲ್ಲಿ ಸಿದ್ದಾಪುರ ವ್ಯಾಪ್ತಿಯ ರಂಜಿತ್‌ ಮತ್ತು ಶರಣು ಎಂಬಿಬ್ಬರು ಬಂದಿದ್ದು ಅವರನ್ನು ಬೈಕಿನ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದೇ ಇದ್ದು ಪುನಃ ವಿಚಾರಿಸಿದಾಗ ಅವರುಗಳು ಆ ಬೈಕನ್ನು ನೆಲ್ಲಿ ಹುದಿಕೇರಿಯ ದೇವಾಸಿ ಕಟ್ಟಡದ ಬಳಿಯಿಂದ ಕಳವು ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 27-06-2021 11:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ