ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

ದಿನಾಂಕ 25/11/2021 ರಂದು ನಾಪೋಕ್ಲು ಪಟ್ಟಣದ ನಂದಿ ಜ್ಯುವೆಲರ್ಸ್‌ ಅಂಗಡಿಯ ಮಾಲೀಕ ನರೇಂದ್ರ ಎಂಬವರು ಅಂಗಡಿಯಲ್ಲಿರುವಾಗ ಅಲ್ಲಿಗೆ ಅವರ ಪರಿಚಯದ ಕೊಳಕೇರಿ ನಿವಾಸಿ ಅಬ್ದುಲ್ ಜಬ್ಬಾರ್‌ ಎಂಬವರು ಇಬ್ಬರು ವ್ಯಕ್ತಿಗಳೊಂದಿಗೆ ಬಂದು ಒಂದು ಚಿನ್ನದ ಸರವನ್ನು ನೀಡಿ ಅದನ್ನು ಗಿರವಿ ಇಟ್ಟುಕೊಂಡು ಹಣ ನೀಡುವಂತೆ ಕೇಳಿದ ಮೇರೆಗೆ ನರೇಂದ್ರರವರು ರೂ.20,000/- ಮುಂಗಡ ನೀಡಿದ್ದು ನಂತರ ಅಲ್ಲಿಗೆ ಬಂದ ಹತ್ತಿರದ ಆಭರಣದಂಗಡಿಯ ಗಿರೀಶ್‌ರವರು ಸಂಶಯಗೊಂಡು ಸರವನ್ನು ಕತ್ತರಿಸಿ ಪರಿಶೀಲಿಸಿ ನೋಡುವಂತೆ ಹೇಳಿದ ಮೇರೆಗೆ ನರೇಂದ್ರರವರು ಸರವನ್ನು ಕತ್ತರಿಸಿ ಪರಿಶೀಲಿಸಿದಾಗ ಅದು ತಾಮ್ರದ ಗಟ್ಟಿಯಾಗಿದ್ದು ತಮಗೆ ನಕಲಿ ಚಿನ್ನದ ಸರವನ್ನು ನೀಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 25/11/2021ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ನಿವಾಸಿ ಪಿ.ಸಿ.ಮಾದಯ್ಯ ಎಂಬವರು ಬೈಕಿನಲ್ಲಿ ಪೊನ್ನಂಪೇಟೆಯಿಂದ ಬಿಟ್ಟಂಗಾಲಕ್ಕೆ ಬರುತ್ತಿರುವಾಗ ಕೊಳತ್ತೋಡು ಬೈಗೋಡು ಬಳಿ ಮುಂದೆ ಹೋಗುತ್ತಿದ್ದ ಒಂದು ಗೂಡ್ಸ್‌ ವಾಹನವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ರಸ್ತೆ ಮಧ್ಯೆ ನಿಲ್ಲಿಸಿದ ಪರಿಣಾಮ ಮಾದಯ್ಯನವರ ಬೈಕು ಹಿಂದಿನಿಂದ ಗೂಡ್ಸ್‌ ವಾಹನಕ್ಕೆ ಡಿಕ್ಕಿಯಾಗಿ ಮಾದಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 26-11-2021 04:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080