ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 23/01/2022ರಂದು ಮಡಿಕೇರಿಯ ದೇಚೂರು ನಿವಾಸಿ ರಂಜಿತ್‌ ಎಂಬವರು ನಗರದ ಮಂಗಳೂರು ರಸ್ತೆಯ ವರ್ಕ್‌ ಷಾಪ್‌ ಒಂದರ ಮುಂದೆ ಅವರ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಜಿ.ಟಿ.ವೃತ್ತದ ಕಡೆಯಿಂದ ಒಂದು ಸ್ಕೂಟರನ್ನು ಅದರ ಸವಾರ ಪುತ್ತೂರಿನ ಷರೀಫ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡಬದಿ ನಿಲ್ಲಿಸಿದ್ದ ಒಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಹಿಂಬದಿಗೆ ಹಾನಿಯುಂಟಾಗಿದ್ದು ಸ್ಕೂಟರ್‌ ಸವಾರ ಷರೀಫ್‌ರವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 18/01/2022ರಂದು ಶನಿವಾರಸಂತೆ ಬಳಿಯ ಕಣಗಾಲು ನಿವಾಸಿ ಶಾಂತಮ್ಮ ಎಂಬವರು ನಾಕಲಗೋಡು ಗ್ರಾಮದ ಶಿವಣ್ಣ ಎಂಬವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅದೇ ಗ್ರಾಮದ ನಿವಾಸಿ ಯಶವಂತ್‌ ಕುಮಾರ್‌ ಮ್ತು ಅವರ ಮಗ ಅರುಣ್‌ ಎಂಬವರು ಮನೆಯಿಂದ ಹೊರಬಂದು ಶಾಂತಮ್ಮನವರನ್ನು ಕುರಿತು ಅಶ್ಲೀಲ ಪದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು ಕೇಳಲು ಬಂದ ಶಾಂತಮ್ಮನವರ ಮಗ ಸಂಪತ್‌ ಕುಮಾರ್‌ರವರಿಗೂ ಸಹಾ ಕಬ್ಬಿಣದ ಸಲಾಕೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 23/01/2022ರಂದು ಗೋಣಿಕೊಪ್ಪ ನಗರದ ಗಣೇಶ್‌ ಎಂಬವರು ಅವರ ನೆರೆಮನೆಯ ಸೂರ್ಯ ಎಂಬವರೊಂದಿಗೆ ಸೂರ್ಯರವರ ಸ್ಕೂಟರಿನಲ್ಲಿ ಗೋಣಿಕೊಪ್ಪ ನಗರಕ್ಕೆ ಹೋಗುತ್ತಿರುವಾಗ ನಗರದ ಸ್ಟೇಟ್‌ ಬ್ಯಾಂಕ್‌ ಬಳಿ ರಸ್ತೆಯ ಎಡಬದಿ ನಿಲ್ಲಿಸಿದ್ದ ಒಂದು ಕಾರನ್ನು ಅದರ ಚಾಲಕ ಏಕಾ ಏಕಿ ಹಿಂದಕ್ಕೆ ಚಾಲಿಸಿದ ಪರಿಣಾಮ ಸ್ಕೂಟರಿಗೆ ಕಾರು ಡಿಕ್ಕಿಯಾಗಿ ಸ್ಕೂಟರಿನಲ್ಲಿದ್ದ ಗಣೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗುಂಡು ಹಾರಿಸಿ ಕೊಲೆ ಯತ್ನ

ದಿನಾಂಕ 22/01/2022ರಂದು ರಾತ್ರಿ ವೇಳೆ ವಿರಾಜಪೇಟೆ ಬಳಿಯ ಪೆರುಂಬಾಡಿ ಗ್ರಾಮದ ಕೆ.ಬಿ.ಹರೀಶ ಎಂಬವರಿಗೂ ಅಲ್ಲಿಗೆ ಒಂದು ಬೊಲೆರೋ ಜೀಪಿನಲ್ಲಿ ಬಂದಿದ್ದ ವಿನಯ್‌ ಅಯ್ಯಪ್ಪ ಎಂಬವರಿಗೆ ಜಗಳವಾಗುತ್ತಿದ್ದು ಜಗಳದ ನಡುವೆ ವಿನಯ್‌ ಅಯ್ಯಪ್ಪ ಏಕಾ ಏಕಿ ಸೊಂಟದಲ್ಲಿದ್ದ ಪಿಸ್ತೂಲಿನಿಂದ ಹರೀಶ್‌ರವರ ಮೇಲೆ ಗುಂಡು ಹಾರಿಸಿದ್ದು ಗುಂಡು ಗುರಿ ತಪ್ಪಿ ಸ್ಥಳದಲ್ಲಿದ್ದ ಹರೀಶ್‌ರವರ ಮಾವ ಬಾಲಕೃಷ್ಣರವರ ಕೈಗೆ ತಗುಲಿದ್ದು ತಡೆಯಲು ಬಂದ ಹರೀಶ್‌ರವರ ಮೇಲೂ ಪುನಃ ಗುಂಡು ಹಾರಿಸಿದ ಪರಿಣಾಮ ಹರೀಶರವರ ಕಾಲಿಗೆ ಗುಂಡು ತಗುಲಿ ಗಾಯಗಳಾಗಿರುವುದಾಗಿ ದೂರು ನೀಡಿದ್ದು ಅದೇ ರೀತಿ ವಿನಯ್‌ ಅಯ್ಯಪ್ಪನವರು ತಾನು ಅಲ್ಲಿ ಮೂತ್ರ ವಿಸರ್ಜನೆಗೆಂದು ನಿಂತಿದ್ದು ಆಗ ಕೆಲವು ಅಪರಿಚಿತರು ಬಂದು ತಾನು ಆ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಆಕ್ಷೇಪಿಸಿ ತನ್ನ ಮೇಲೆ ತೀವ್ರ ಹಲ್ಲೆ ಮಾಡಿದ್ದು ಆಗ ತಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದು ಅದು ಇಬ್ಬರಿಗೆ ತಗುಲಿ ಗಾಯಗಳಾಗಿದ್ದು ತನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರತಿ ದೂರು ನೀಡಿದ್ದು ವಿರಾಜಪೇಟೆ ನಗರ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 24-01-2022 04:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080