ಅಭಿಪ್ರಾಯ / ಸಲಹೆಗಳು

ಆನ್‌ಲೈನ್‌ ವಂಚನೆ

ಸೋಮವಾರಪೇಟೆ ಬಳಿಯ ಐಗೂರು ನಿವಾಸಿ ಹರೀಶ್‌ ಎಂ.ಎ. ಎಂಬವರಿಗೆ ಸುಮಾರು ನಾಲ್ಕು ತಿಂಗಳ ಹಿಂದೆ ರೆಬೆಕಾ ಎಂಬಾಕೆಯು ಒಂದು ವಾಟ್ಸಾಪ್‌ ಸಂದೇಶ ಕಳುಹಿಸಿ ಹರೀಶ್‌ರವರ ಪರಿಚಯ ಮಾಡಿಕೊಂಡು ನಂತರ ವಜ್ರದ ವ್ಯಾಪಾರದಲ್ಲಿ ಹಣ ಹೂಡುವಂತೆ ನಂಬಿಸಿ ಯಾವುದೋ ಒಂದು ವೆಬ್‌ ಲಿಂಕ್‌ ಅನ್ನು ಕಳುಹಿಸಿ ಅದರ ಮೂಲಕ ಮತ್ತು ಹರೀಶ್‌ರವರ ಬ್ಯಾಂಕ್‌ ಖಾತೆಯ ಮೂಲಕ ಹರೀಶ್‌ರವರು ಸುಮಾರು ರೂ. 9,23,013/- ಹಣವನ್ನು ಆಕೆಯ ಖಾತೆಗೆ ವರ್ಗಾಯಿಸುವಂತೆ ಮಾಡಿ ನಂತರ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 22/10/2021ರಂದು ಭಾಗಮಂಡಲದ ಬಿ.ಎಸ್.ಮನೋಹರ ಆಳ್ವ ಎಂಬವರು ಅವರ ಟಿಪ್ಪರ್‌ ಲಾರಿಯಲ್ಲಿ ಕಲ್ಲು ತುಂಬಿಸಿಕೊಂಡು ಲಾರಿ ಚಾಲಕ ಶ್ರೀನಿಧಿಯವರೊಂದಿಗೆ ಕುಶಾಲನಗರದಿಂದ ಭಾಗಮಂಡಲಕ್ಕೆ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಕೆದಕಲ್‌ ಗ್ರಾಮದ ಪಂಚಾಯಿತಿ ಕಚೇರಿ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಹಿತೇಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಟಿಪ್ಪರ್‌ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಟಿಪ್ಪರ್‌ ಲಾರಿ ಮಗುಚಿಕೊಂಡು ಚಾಲಕ ಶ್ರೀನಿಧಿ ಹಾಗೂ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನೆ ಕಳವು ಪ್ರಕರಣ

ವಿರಾಜಪೇಟೆ ಬಳಿಯ ಕುಕ್ಲೂರು ನಿವಾಸಿ ಕಾವೇರಮ್ಮ ಕಿರಣ್‌ ಎಂಬವರು ಮಂಗಳೂರಿನಲ್ಲಿ ವಾಸಿವಾಗಿದ್ದು ದಿನಾಂಕ 01/07/2021 ರಿಂದ 30/08/2021ರ ನಡುವೆ ಯಾರೋ ಕಳ್ಳರು ಅವರ ಕುಕ್ಲೂರಿನ ಮನೆಯ ಕಿಟಕಿಯನ್ನು ಬೇರ್ಪಡಿಸಿ ತೆಗೆದು ಒಳ ನುಗ್ಗಿ ಮನೆಯೊಳಗಿದ್ದ ಸುಮಾರು ರೂ. 14,000/- ಮೌಲ್ಯದ ಇನ್ವರ್ಟರ್‌, ಒಂದು ಏರ್‌ ಗನ್‌ ಮತ್ತು ಒಂದು ಟಿ,ವಿ.ಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 23-10-2021 04:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080