ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 22/04/2022ರಂದು ಮಡಿಕೇರಿಯ ಗಾಳಿಬೀಡು ನಿವಾಸಿ ಮೋಕ್ಷಿತ್‌ ಎಂಬವರು ಅವರ ಕಾರನ್ನು ಭಾಗಮಂಡಲ ಬಳಿಯ ಚೆಟ್ಟಿಮಾನಿ ಗ್ರಾಮದ ಪದಕಲ್ಲು ಭಗವತಿ ದೇವಸ್ಥಾನದ ಬಳಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಕಾರನ್ನು ಪದಕಲ್ಲು ಭಗವತಿ ದೇವಸ್ಥಾನದ ಆವರಣ ಗೋಡೆಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿ ದೇವಸ್ಥಾನದ ಆವರಣ ಗೋಡೆಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ಕಳವು ಪ್ರಕರಣ

ದಿನಾಂಕ 22/04/20222ರಂದು ಶ್ರೀಮಂಗಲ ಬಳಿಯ ಹೈಸೊಡ್ಲೂರು ನಿವಾಸಿ ಬೊಜ್ಜಂಗಡ ನಾಚಪ್ಪ ಎಂಬವರು ಹುದಿಕೇರಿಯಲ್ಲಿನ ಅವರ ಕಾಫಿ ವ್ಯಾಪಾರದ ಅಂಗಡಿಯ ಹಣದ ಡ್ರಾಯರಿನಲ್ಲಿ ಸುಮಾರು ರೂ. 30,000/- ಹಣವನ್ನು ಇಟ್ಟು ಮದ್ಯಾಹ್ನ ಊಟಕ್ಕೆಂದು ಹೋಗಿ ಮರಳಿ ಬರುವಾಗ ಯಾರೋ ಕಳ್ಳರು ಡ್ರಾಯರನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗಿದ್ದ ರೂ 30,000/- ಹಣವನ್ನು ಕಳವುಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೊಲೆ ಪ್ರಕರಣ

ಶನಿವಾರಸಂತೆ ಬಳಿಯ ಕೊಡ್ಲಿಪೇಟೆ ನಿವಾಸಿ ಹಾಲೇಶ್‌ ಎಂಬವರು ಅವರ ವ್ಯವಸಾಯ ಕೆಲಸಕ್ಕಾಗಿ ಶಾಂತಪುರ ಗ್ರಾಮದ ನಿವಾಸಿಗಳಾದ ಕುಮಾರ, ಶೇಖರ ಮತ್ತು ನಾಗರಾಜು ಎಂಬವರಿಗೆ ಮುಂಗಡ ಹಣ ನೀಡಿದ್ದು ಅವರುಗಳು ಕೆಲಸಕ್ಕೆ ಬಾರದ ಕಾರಣ ವಿಚಾರಿಸಲೆಂದು ದಿನಾಂಕ 22/04/2022ರಂದು ಮನೆಯಿಂದ ಹೋದವರನ್ನು ಕಾರ್ಮಿಕರಾದ ಕುಮಾರ, ಶೇಖರ ಮತ್ತು ನಾಗರಾಜುರವರು ಹಾಲೇಶ್‌ರವರೊಂದಿಗೆ ಜಗಳವಾಡಿ ಹೊಡೆದು ತುಳಿದು ಗಾಯಗೊಳಿಸಿದ ಪರಿಣಾಮ ಹಾಲೇಶ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 22/04/2022ರಂದು ಸೋಮವಾರಪೇಟೆ ಬಳಿಯ ಕುಮಾರಳ್ಳಿ ಗ್ರಾಮದ ಹೆಗ್ಗಡಮನೆ ನಿವಾಸಿ ನಿಶಾನ್‌ ಎಂಬವರು ಅವರ ಕಾರಿನಲ್ಲಿ ಸೋಮವಾರಪೇಟೆಯಿಂದ ಶಾಂತಳ್ಳಿ ಕಡೆಗೆ ಹೋಗುತ್ತಿರುವಾಗ ಅಬ್ಬಿಮಠ ಬಾಚಳ್ಳಿಯ ಬಜೆಗುಂಡಿ ಎಂಬಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಚಿಕ್ಕತೋಳೂರು ಗ್ರಾಮದ ವಿಜಯಕುಮಾರ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಶಾನ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಹೊನ್ನಪ್ಪ ಮತ್ತು ರುದ್ರಪ್ಪ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 23-04-2022 12:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080