ಅಭಿಪ್ರಾಯ / ಸಲಹೆಗಳು

ಮಹಿಳೆ ಕಾಣೆ ಪ್ರಕರಣ

ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದ ರಾಜಪ್ರಭ ಪೈಸಾರಿ ನಿವಾಸಿ ಸುಮಿ ಎಂಬ ಮಹಿಳೆಯು ದಿನಾಂಕ 13/01/2022ರಿಂದ ಮನೆಯಿಂದ ಎಲ್ಲಿಗೋ ಹೋಗಿ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ  ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 20/01/2022ರಂದು ಭಾಗಮಂಡಲ ಬಳಿಯ ಚೆತ್ತುಕಾಯದ ತೋಟವೊಂದರ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಪಾಣತ್ತೂರಿನ ನಿವಾಸಿ ಸಾಬು ಎಂಬವರು ಕೆಲಸ ಮಾಡಿಕೊಂಡಿರುವಾಗ  ಅವರ ಮೇಲೆ ಪಾಣತ್ತೂರಿನ ಲಾವೋ ಮಂಗಲತ್‌, ಅಸ್ಕರ್‌ ಮತ್ತು ಇನ್ನಿತರ ಮೂವರು ತೋಟದ ಮರ ಕಡಿಯುವ ವಿಚಾರದಲ್ಲಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಫಿಗಿಡ ಕಡಿದು ಹಾನಿ

ಸೋಮವಾರಪೇಟೆ ಬಳಿಯ ನಗರೂರು ತೋಟವನ್ನು ಹಾನಗಲ್ಲು ಗ್ರಾಮದ ಸ್ಟ್ಯಾನಿ ರೊಜಾರಿಯೋ ಎಂಬವರು ನಿರ್ವಹಿಸುತ್ತಿದ್ದು ದಿನಾಂಕ 13/01/202೨ರಿಂದ 16/01/2022ರ ನಡುವೆ ಬಳಗುಂದ ಗ್ರಾಮದ ಲೋಕೇಶ್‌ ಎಂಬವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿದ್ದ ಸುಮಾರು 400 ಕಾಫಿ ಗಿಡಗಳನ್ನು ಕಡಿದು ನಷ್ಟಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 21/01/2022ರಂದು ಕಾಲೂರು ನಿವಾಸಿ ಸತೀಶ್‌ ಎಂಬವರು ಮಡಿಕೇರಿಗೆ ಬಂದು ಮನೆಗೆ ಮರಳಿದಾಗ ಅವರ ಅಣ್ಣ ಪುರುಷ ಎಂಬವರು ಮನೆಗೆ ಬೀಗ ಹಾಕದ ವಿಚಾರಕ್ಕೆ ಜಗಳವಾಡಿ ದೊಣ್ಣೆಯಿಂದ ಸತೀಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-01-2022 11:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080