ಅಭಿಪ್ರಾಯ / ಸಲಹೆಗಳು

ಪೊಲೀಸ್‌ ಹುತಾತ್ಮರ ದಿನಾಚರಣೆ

 

ಪ್ರತಿ ವರ್ಷ ಅಕ್ಟೋಬರ್‌ 21ರಂದು ಆಚರಿಸಲಾಗುವ ಪೊಲೀಸ್‌ ಹುತಾತ್ಮರ ದಿನವನ್ನು ಇಂದು ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಆಚರಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಐಪಿಎಸ್‌ರವರು ಪ್ರಾಸ್ತಾವಿಕ ಭಾಷಣ ಮಾಡಿ 2020-21ನೇ ಸಾಲಿನಲ್ಲಿ ಕರ್ತವ್ಯದ ಸಮಯದಲ್ಲಿ ಹುತಾತ್ಮರಾದ ದೇಶದ ಎಲ್ಲಾ ರಾಜ್ಯಗಳ ಮತ್ತು ಇತರೆ ಕೇಂದ್ರೀಯ ಪೊಲೀಸ್‌ ಪಡೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರುಗಳನ್ನು ಓದುವ ಮೂಲಕ ಸ್ಮರಿಸಿದರು.

 

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಜಿ.ಬಿ.ಲಗಮಪ್ಪರವರು ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸುವ ಮೂಲಕ ಈ  ವರ್ಷ ಕರ್ತವ್ಯದಲ್ಲಿ ಹುತಾತ್ಮರಾದ ಪೊಲೀಸರಿಗೆ ಶಾಂತಿಯನ್ನು ಕೋರಿದರು. ಅಲ್ಲದೆ ಇತರ ಗಣ್ಯರು ಪೊಲೀಸ್‌ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛವನ್ನು ಸಮರ್ಪಿಸಿದರು.

 

ವಾಹನ ಡಿಕ್ಕಿ, ವಿದ್ಯುತ್‌ ಕಂಬಕ್ಕೆ ಹಾನಿ

ದಿನಾಂಕ 19/10/2021 ರಿಂದ 20/10/2021ರ ನಡುವೆ ಮಡಿಕೇರಿ ನಗರದ ಎಫ್‌.ಎಂ.ಸಿ.ಕಾಲೇಜು ಹಿಂಭಾಗ ಗಾಳಿಬೀಡು ರಸ್ತೆಯಲ್ಲಿರುವ ವಿಠಲ್‌ ಕಾರ್ಯಪ್ಪರವರ ಮನೆಯ ಬಳಿ ಯಾವುದೋ ಅಪರಿಚಿತ ವಾಹನವೊಂದನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿ ರಸ್ತೆ ಬದಿಯಲ್ಲಿನ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿದ್ಯುತ್‌ ಕಂಬವು ಮುರಿದು ಬಿದ್ದು ಸುಮಾರು ರೂ.32,000/- ಹಾನಿಯುಂಟಾಗಿರುವುದಾಗಿ ಚೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಸಂಪತ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 19/10/2021ರಂದು ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ನಿವಾಸಿ ಪ್ರಸನ್ನ ಎಂಬವರು ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್‌ ನಿಲ್ದಾನದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಪಾಪಯ್ಯ ಎಂಬವರು ಅವರ ಮಾರುತಿ ಓಮಿನಿ ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಸನ್ನರವರಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಸನ್ನರವರ ಕಾಲಿನ ಮೇಲೆ ವ್ಯಾನಿನ ಚಕ್ರ ಹರಿದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 19/10/2021ರಂದು ಅಮ್ಮತ್ತಿ ಬಳಿಯ ಕಾರ್ಮಾಡು ನಿವಾಸಿ ಚಂದ್ರಮೌಳಿ ಎಂಬವರ ಅಣ್ಣ ವಿಷಕಂಠರವರು ಅವರ ಕಾರನ್ನು ಕಾರ್ಮಾಡು ಗ್ರಾಮದ ಪಾಲಿಬೆಟ್ಟ ರಸ್ತೆಯ ಬದಿ ನಿಲ್ಲಿಸಿದ್ದು ರಾತ್ರಿ ವೇಳೆ ಇಂದಿರಾ ಎಂಬವರು ಅವರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಲ್ಲಿಸಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 21-10-2021 04:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080