ಅಭಿಪ್ರಾಯ / ಸಲಹೆಗಳು

 ರಸ್ತೆ ಅಪಘಾತ

ದಿನಾಂಕ 18/09/2021ರಂದು ಮಂಗಳೂರಿನ ಕೊಟ್ಟಾರ ಚೌಕಿ ನಿವಾಸಿ ನಿತ್ಯಾನಂದ ಎಂಬವರು ಅವರ ಲಾರಿಯಲ್ಲಿ ಕುಶಾಲನಗರದಿಂದ ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಹಿಂದಿನಿಂದ ಒಂದು ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿತ್ಯಾನಂದರವರು ಚಾಲಿಸುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿಯ ಹಿಂಭಾಗಕ್ಕೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 18/09/2021ರಂದು ವಿರಾಜಪೇಟೆ ಬಳಿಯ ಅರಮೇರಿ ನಿವಾಸಿ ಅಬ್ದುಲ್‌ ಖಾದರ್‌ ಎಂಬವರು ವಿರಾಜಪೇಟೆಯ ತಾಲೂಕು ಕಚೇರಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅವರ ಬೈಕನ್ನು ರಸ್ತೆಗೆ ತೆಗೆಯುತ್ತಿದ್ದಾಗ ಟಿಎಂಸಿ ವೃತ್ತ ಕಡೆಯಿಂದ ಒಂದು ಬೈಕನ್ನು ಅದರ ಚಾಲಕ ವಿಜು ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಬ್ದುಲ್‌ ಖಾದರ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಬ್ದುಲ್‌ ಖಾದರ್‌ರವರು ಕೆಳಗೆ ಬಿದ್ದು ಬಲಗೈ ತೋರು ಬೆರಳಿನ ಮುಂಭಾಗ ತುಂಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ವಿರಾಜಪೇಟೆಯ ಇಂದಿರಾನಗರ ನಿವಾಸಿ ಬಿ.ಎಸ್.ಯೋಗೇಶ್‌ ಎಂಬವರು ಅರಣ್ಯಾ ಇಲಾಖೆಯ ಮಾಕುಟ್ಟ ವಲಯದಲ್ಲಿ ವಾಚರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 17/09/2021ರಂದು ಇಂದಿರಾನಗರದ ಮನೆಯಲ್ಲಿದ್ದ ಅವರ ತಾಯಿಯವರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದು ಮದ್ಯಾಹ್ನ 2 ಗಂಟೆಗೆ ಮನೆಗೆ ಮರಳಿ ಬಂದಾಗ ಯಾರೋ ಕಳ್ಳರು ಮನೆಯ ಮೂಮದಿನ ಬಾಗಿಲನ್ನು ಒಳ ಪ್ರವೇಶಿಸಿ ಮನೆಯಲ್ಲಿದ್ದ   ಸುಮಾರು ರೂ. 2500 ಮೌಲ್ಯದ ಅಲ್ಯುಮಿನಿಯಂ ಪಾತ್ರೆ ಹಾಗೂ ಬಟ್ಟೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 18/09/2021ರಂದು ಸಂಜೆ ವೇಳೆ ಗೋಣಿಕೊಪ್ಪ ನಿವಾಸಿ ಕೃಷ್ಣ ಎಂಬವರು ಗೋಣಿಕೊಪ್ಪ ನಗರದ 2ನೇ ವಿಭಾಗದ ಅಂಗಡಿಯೊಂದರ ಮುಂದೆ ನಿಂತಿರುವಾಗ ಅಲ್ಲಿಗೆ ಬಂದ ಗೋಣಿಕೊಪ್ಪ ನಗರದ ಕಿರಣ ಮತ್ತು ದೇವರಾಜು ಎಂಬವರು ಹಳೇ ವೈಷಮ್ಯದಿಂದ ಜಗಳವಾಡಿ ಕೈಯಿಂದ ಹಾಗೂ ಹಾಕಿ ಸ್ಟಿಕ್‌ನಿಂದ ಕೃಷ್ಣರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 19-09-2021 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ