ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 18/04/2021ರಂದು ಮಡಿಕೇರಿ ನಗರದ ವಿದ್ಯಾನಗರದ ನಿವಾಸಿ ಮಂಜುನಾಥ ಎಂಬವರು ಅವರ ಕಾರಿನಲ್ಲಿ ನಗರದ ಅಶ್ವಿನಿ ಆಸ್ಪತ್ರೆಯ ರಸ್ತೆಯಲ್ಲಿ ಅಶ್ವಿನಿ ಆಸ್ಪತ್ರೆಗೆ ಹೋಗುತ್ತಿರುವಾಗ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅಸ್ಗರ್‌ ಆಲಿ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ಮಂಜುನಾಥರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಥರವರ ಕಾರು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಕಾಣೆ ಪ್ರಕರಣ

ನಾಪೋಕ್ಲು ಬಳಿಯ ಬೇತು ಗ್ರಾಮದ ನಿವಾಸಿ ಕುಟ್ಟಂಜೆಟ್ಟಿರ ಅಭಿ ಕುಶಾಲಪ್ಪ ಎಂಬವರ ಲೈನು ಮನೆಯಲ್ಲಿ ಪಾಲೂರು ಗ್ರಾಮದ ಬಾಲಕೃಷ್ಣ ಎಂಬವರು ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದು ದಿನಾಂಕ 17/04/2021ರಂದು ಬಾಲಕೃಷ್ಣರವರು ಅವರ ಲೈನು ಮನೆಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದು ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 18/04/2021ರಂದು ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ ನಿವಾಸಿ ಶಿವನ್‌ ಎಂಬವರು ನೆಲ್ಲಿಹುದಿಕೇರಿಯ ಬಸ್‌ ನಿಲ್ದಾಣದ ಬಳಿ ಅವರ ರಿಕ್ಷಾದಲ್ಲಿ ಹೋಗುತ್ತಿರುವಾಗ ಅಲ್ಲಿಗೆ ಬಂದ ಅನ್ಸಾರ್‌ ಎಂಬವರು ಕ್ಷುಲ್ಲಕ ಕಾರಣಕ್ಕೆ ಶಿವನ್‌ರವರ ಮೇಲೆ ಹಲ್ಲೆ ಮಾಡಿ ಸ್ಕೂಟರಿನಲ್ಲಿದ್ದ ಕಬ್ಬಿಣದ ರಾಡಿನಿಂದ ಹೊಟ್ಟೆಗೆ ಚುಚ್ಚಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಿದ್ಯುತ್‌ ಕಂಬಕ್ಕೆ ವ್ಯಾನು ಡಿಕ್ಕಿ

ದಿನಾಂಕ 18/04/2021ರಂದು ವಿರಾಜಪೇಟೆ ನಗರದ ಚಿಕ್ಕಪೇಟೆ ಬಳಿಯ ಮಡಿಕೇರಿ ರಸ್ತೆಯ ಬಳಿ ಕೆಎ-12-ಝೆಡ್-0384ರ ಮಾರುತಿ ಒಮಿನಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿದ್ಯುತ್‌ ಕಂಬವು ಹಾನಿಗೊಳಗಾಗಿ ಸುಮಾರು ರೂ.20,000/- ನಷ್ಟವುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 18/04/2021ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಮಂಜುನಾಥ ಎಂಬವರು ಹೆಬ್ಬಾಲೆ ಗ್ರಾಮದ ಅವರ ಅಂಗಡಿಯಲ್ಲಿರುವಾಗ ಅಲ್ಲಿಗೆ ರವಿಚಾರಿ ಎಂಬವರು ನಾಲ್ಕೈದು ಹುಡುಗರೊಂದಿಗೆ ಬಂದು ಸಂಬಳದ ವಿಚಾರದಲ್ಲಿ ಜಗಳವಾಡಿ ಬ್ಲೇಡಿನಿಂದ ಮಂಜುನಾಥರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ದಿನಾಂಕ 18/04/2021ರಂದು ಗೋಣಿಕೊಪ್ಪ ನಗರದ ಮೈಸೂರಮ್ಮ ಕಾಲೋನಿ ನಿವಾಸಿ ಹೆಚ್‌.ಎಸ್.ಮುರುಗೇಶ್‌ ಎಂಬವರು ಕುಟುಂಬ ಸಮೇತರಾಗಿ ಮೈಸೂರಿಗೆ ಕಾರ್ಯನಿಮಿತ್ತ ಹೋಗಿ ಮರಳಿ ಸಂಜೆ ಮನೆಗೆ ಬಂದಾಗ ಯಾರೋ ಕಳ್ಳರು ಅವರ ಮನೆಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯಲ್ಲಿದ್ದ ಬೀರುವನ್ನು ಒಡೆದು ತೆರೆದು ಅದರಲ್ಲಿದ್ದ ಸುಮಾರು ರೂ.52,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 19-04-2021 03:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ