ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

ದಿನಾಂಕ 14/10/2021ರಂದು ಕುಶಾಲನಗರ ಬಳಿಯ ಇಂದಿರಾ ಬಡಾವಣೆ ನಿವಾಸಿ ರಫೀಕ್‌ ಎಂಬವರು ಅವರ ಸಂಬಂಧಿಯ ಮನೆಯಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆಂದು ಜನತಾ ಕಾಲೋನಿಗೆ ಹೋಗಿದ್ದು ರಾತ್ರಿ ವೇಳೆ ಅಂಗಡಿಯಿಂದ ಪಾನೀಯ ತರಲೆಂದು ತೆರಳಿದ್ದ ಅವರ ನೆಂಟರ ಮಕ್ಕಳಾದ ಅಬೀಬ್‌ ರೆಹಮಾನ್‌ ಮತ್ತು ಇನ್ನಿತರರು ಅಂಗಡಿಗೆ ಹೋಗಿದ್ದು ಸುಮಾರು ಹೊತ್ತಾದರೂ ಬಾರದೆ ಇದ್ದು ರಾತ್ರಿ ವೇಳೆ ಅಬೀಬ್‌ ರೆಹಮಾನ್‌ ರಫೀಕ್‌ರವರಿಗೆ ಕರೆ ಮಾಡಿ ಅಂಗಡಿಯ ಬಳಿ ಬರುವಂತೆ ತಿಳಿಸಿದ ಮೇರೆಗೆ ರಫೀಕ್‌ರವರು ಅಂಗಡಿಯ ಬಳಿ ಹೋದಾಗ ಅಲ್ಲಿ ಕೆಲವರು ತಳ್ಳಾಟ ನೂಕಾಟ ಮಾಡುತ್ತಿದ್ದು ಗಲಾಟೆಯನ್ನು ತಡೆಯಲು ಹೋದ ರಫೀಕ್‌ರವರ ಮೇಲೆ ಸಂತೋಷ್‌ ಕುಮಾರ್‌, ಹರೀಶ, ಕಣ್ಣ, ಸಿದ್ದ, ತೀರ್ಥ ಮತ್ತು ಸಚಿನ್‌ ಎಂಬವರು ಸೇರಿಕೊಂಡು ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 14/10/2021ರಂದು ಕುಶಾಲನಗರದ ಮಹರಾಜ ಲಾಡ್ಜಿನಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರಿನ ನಿವಾಸಿ ಹರೀಶ್‌ ಎಂಬವರು ಸಂಜೆ ವೇಳೆ ಮಹರಾಜ ಲಾಡ್ಜಿನ ಸಿಬ್ಬಂದಿ ಜಯಕುಮಾರ್‌ ಎಂಬವರೊಂದಿಗೆ ಮಹರಾಜ ಲಾಡ್ಜಿನ ಬಳಿ ಮಾರ್ಕೆಟ್‌ ರಸ್ತೆಯಲ್ಲಿನ ಟೀ ಅಂಗಡಿಯಲ್ಲಿ ಟೀ ಕುಡಿದು ಮಹರಾಜ ಲಾಡ್ಜಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಒಂದು ಬೈಕನ್ನು ಅದರ ಸವಾರ ಭಾನು ಪ್ರಕಾಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹರೀಶ್‌ ಮತ್ತು ಜಯಕುಮಾರ್‌ವರಿಗೆ ಡಿಕ್ಕಿಪಡಿಸಿದ ಪರಿಣಾಮ ಹರೀಶ್‌ ಮತ್ತು ಜಯಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಸರ ಅಪಹರಣ

ಮಡಿಕೇರಿ ನಗರದ ಮೂರ್ನಾಡು ರಸ್ತೆಯ ನಿವಾಸಿ ಮೀನಾಕ್ಷಿ ಎಂಬವರು ದಿನಾಂಕ 15/10/2021ರಂದು ನಗರದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಹೋಗಿದ್ದು ಮಂಗಳಾರತಿ ಸಮಯದಲ್ಲಿ ಯಾರೋ ಅವರ ತಲೆಗೆ ಚೂಡಿದಾರ್‌ ವೇಲನ್ನು ಹಾಕಿದ್ದು ಅದನ್ನು ತೆಗೆದು ಪೂಜೆ ಮುಗಿಸಿದ್ದು ನಂತರ ನೋಡೊದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು 1,25,000/- ಮೌಲ್ಯದ 28 ಗ್ರಾಂ ನ ಚಿನ್ನದ ಸರವನ್ನು ಯಾರೋ ಅಪಹರಿಸಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗುಂಡು ಹೊಡೆದು ವ್ಯಕ್ತಿ ಹತ್ಯೆ, ಆರೋಪಿ ಆತ್ನಹತ್ಯೆ

ದಿನಾಂಕ 15/10/2021ರಂದು ಪೊನ್ನಂಪೇಟೆ ಬಳಿಯ ಕಿರುಗೂರು ನಿವಾಸಿ ಆಲೆಮಾಡ ಚಂಗಪ್ಪ ಎಂಬವರ ಮಗ ಮಧು ಯಾನೆ ಮುತ್ತಪ್ಪ ಎಂಬವರು ಅಡಿಕೆ ತುಂಬಿಸಲು ಅವರ ಚಂಗಪ್ಪನವರ ಅಣ್ಣನ ಮನೆ ಬಳಿ ಹೋಗಿದ್ದಾಗ ಅಲ್ಲಿ ಚಂಗಪ್ಪನವರ ಅಣ್ಣನ ಮಗ ಸೋಮಯ್ಯ ಎಂಬಾತನು ಕೋವಿಯಿಂದ ಗುಂಡು ಹೊಡೆದು ಮಧು ಯಾನೆ ಮುತ್ತಪ್ಪರವರನ್ನು ಹತ್ಯೆ ಮಾಡಿದ್ದು ನಂತರ ಸೋಮಯ್ಯನವರ ಎರಡನೇ ಪತ್ನಿ ಯಶೋದ ಎಂಬಾಕೆಗೂ ಗುಂಡು ಹೊಡೆದು ತದನಂತರ ತಾನೂ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಢಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 14/10/2021ರಂದು ಸೋಮವಾರಪೇಟೆ ಬಳಿಯ ಬಾಣಾವಾರ ನಿವಾಸಿ ನಂದ ಕುಮಾರ್‌ ಎಂಬವರ ಮನೆಗೆ ಅವರ ತಂದೆಯ ತಮ್ಮ ಬಸವರಾಜು ಮತ್ತು ಬಸವರಾಜುರವರ ಪತ್ನಿ ಇಂದಿರಾರವರು ಬಂದು ಬ್ಯಾಂಕ್‌ ಸಾಲ ಕಟ್ಟುವ ವಿಚಾರದಲ್ಲಿ ನಂದ ಕುಮಾರ್‌ರವರ ತಂದೆಯೊಂದಿಗೆ ಜಗಳವಾಡಿ ನಂದ ಕುಮಾರ್‌ರವರ ತಂದೆಗೆ ಕಾಡು ಮರದ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 16-10-2021 01:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080