ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 14/05/2021ರಂದು ಅರಕಲಗೂಡಿನ ಕೊಪ್ಪಲು ಗ್ರಾಮದ ನಿವಾಸಿ ಸ್ವಾಮಿ ಎಂಬವರ ತಾಯಿ ಗಿರಿಜಮ್ಮ ಎಂಬವರು ಗೋವಿಂದ ಎಂಬವರೊಡನೆ ಕುಶಾಲನಗರದ ಮುಳ್ಳುಸೋಗೆ ಬಳಿ ಗೋವಿಂದರವರು ಚಾಲಿಸುತ್ತಿದ್ದ ಬೈಕಿನಲ್ಲಿ ಹೋಗುತ್ತಿರುವಾಗ ಗೋವಿಂದರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಮುಳ್ಳುಸೋಗೆ ರಸ್ತೆಯಲ್ಲಿ ಬೈಕು ಅಪಘಾತಕ್ಕೀಡಾಗಿ ಗಿರಿಜಮ್ಮನವರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೊಲೆ ಬೆದರಿಕೆ ಪ್ರಕರಣ

ದಿನಾಂಕ 14/05/2021ರಂದು ವಿರಾಜಪೇಟೆ ನಗರದ ಮಲಬಾರ್‌ ರಸ್ತೆಯ ನಿವಾಸಿ ಕೃಷ್ಮಾ ಎಂಬವರು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅವರ ಸಹೋದರ ರಿನ್‌ ಕಾಳಪ್ಪ ಎಂಬವರು ಹಳೆ ವೈಷಮ್ಯದಿಂದ ಕೃಷ್ಮ ಮತ್ತು ಅವರ ತಾಯಿಯನ್ನು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಸಿ ಮನೆಯ ಗಾಜುಗಳನ್ನು ಒಡೆದು ಹಾನಿ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 15/05/2021ರಂದು ವಿರಾಜಪೇಟೆ ಬಳಿಯ ನಲ್ವತೊಕ್ಲು ನಿವಾಸಿ ಎಂ.ಎ.ರಫೀಕ್‌ ಎಂಬವರು ಮನೆಯ ಮುಂದಿನ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿಗಳಾದ ಹಂಸ ಮತ್ತು ರಫೀಕ್‌ ಎಂಬವರು ಹಳೆ ದ್ವೇಷದಿಂದ ಎಂ.ಎ.ರಫೀಕ್‌ರವರ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೋವಿಡ್‌ – 19 ನಿಯಮ ಉಲ್ಲಂಘನೆ ಪ್ರಕರಣ

ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೋವಿಡ್‌ – 19ರ ನಿಯಮಗಳು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿ ದಿನಾಂಕ 14/05/2021ರಂದು ಬಿಳಿಗೇರಿ ಸಮೀಪದ ಶ್ರೀನಿಧಿ ಎಸ್ಟೇಟ್‌ ಸ್ಟೇಯಲ್ಲಿ ಗುಂಪು ಸೇರಿದ್ದ ಮಡಿಕೇರಿ ನಗರದ ಸುಮಾರು ಏಳು ಜನರನ್ನು ಮಡಿಕೇರಿ ಗ್ರಾಮಾಂತರ ಠಾಣೆಯ ನಿರೀಕ್ಷಕರಾದ ಎಸ್‌.ಎಸ್‌.ರವಿಕಿರಣ್‌ರವರು ಪತ್ತೆ ಹಚ್ಚಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 16-05-2021 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ