ಅಭಿಪ್ರಾಯ / ಸಲಹೆಗಳು

ತೇಗದ ಮರ ಕಳ್ಳಸಾಗಣಿಕೆ, ಆರೋಪಿಗಳ ಬಂಧನ

ದಿನಾಂಕ 14-06-2021 ರಂದು ಕಾಫೀ ತೋಟವೊಂದರಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಮಾರುತಿ ಒಮ್ನಿ ವ್ಯಾನಿನಲ್ಲಿ ತುಂಬಿ ಕಳ್ಳ ಸಾಗಾಣಿಕೆ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೋಕು ವಾಲ್ನೂರು-ತ್ಯಾಗತ್ತೂರು ಜಂಕ್ಷನ್ ನಲ್ಲಿ ಒಮ್ನಿ ವ್ಯಾನನ್ನು ಪತ್ತೆಹಚ್ಚಿದ ಜಿಲ್ಲಾ ಡಿಸಿಐಬಿ ತಂಡ ಮಾಲು ಸಮೇತ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಸಿದ್ದಾಪುರ ಠಾಣಾ ಸರಹದ್ದಿನ ಚೆಟ್ಟಳ್ಳಿ ಕಾನನಕಾಡು ವ್ಯಾಪ್ತಿಯ ಕಾಫೀ ತೋಟವೊಂದರಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಒಮ್ನಿ ವ್ಯಾನಿನಲ್ಲಿ ಸುತ್ತಲೂ ಟೀ-ಶರ್ಟ್ಸ್ ಹಾಗೂ ಆಫ್-ಪ್ಯಾಂಟ್ ಗಳನ್ನು ನೇತು ಹಾಕಿ ಬಟ್ಟೆವ್ಯಾಪಾರ ಮಾಡುವ ಸೋಗಿನಲ್ಲಿ ವಿವಿಧ ಅಳತೆಯ 6 ತೇಗದ ಮರದ ನಾಟಾಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದವರನ್ನು ಪತ್ತೆಹಚ್ಚಿ ದಾಳಿ ನಡೆಸಿದ ಜಿಲ್ಲಾ ಡಿಸಿಐಬಿ ನಿರೀಕ್ಷಕರವರ ತಂಡ ಆರೋಪಿಗಳಾದ ಟಿ.ವಿ ಲೊಹಿತ್, ತಂದೆ ಲೇಟ್ ವಾಸು, ಪ್ರಾಯ 26 ವರ್ಷ, ಚಾಲಕ ವೃತ್ತಿ, ವಾಸ ಅಂಗನವಾಡಿ ಹತ್ತಿರ ನೀರುಕೊಲ್ಲಿ, ಮಡಿಕೇರಿ ಹಾಗೂ ಟಿ.ಎಸ್ ಕೀರ್ತಿ, ತಂದೆ ಶ್ರೀಧರ್, ಪ್ರಾಯ 28ವರ್ಷ, ಕೂಲಿ ಕೆಲಸ, ವಾಸ ಮೆಕೇರಿ ಗ್ರಾಮ, ಮಡಿಕೇರಿ ಇವರನ್ನು ಬಂಧಿಸಿ ಆರೋಪಿತರಿಂದ ರೂ.1.5 ಲಕ್ಷ ಮೌಲ್ಯದ 6 ತೇಗದ ಮರದ ನಾಟಾಗಳು ಒಮ್ನಿ ವ್ಯಾನ್ ಸೇರಿದಂತೆ ಒಟ್ಟು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯು ಜಿಲ್ಲಾ ಡಿಸಿಐಬಿ ವಿಭಾಗದ ಪಿ.ಐ. ಕುಮಾರ್ ಆರಾಧ್ಯರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗಳಾದ ಬಿ.ಎಲ್. ಯೊಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್.ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಜಿ.ಶರತ್ ರೈ, ಸುರೇಶ್ ಮತ್ತು ಶಶಿಕುಮಾರ್ ರವರು ಭಾಗಿಯಾಗಿದ್ದು ಇವರ ಕಾರ್ಯವನ್ನು ಪ್ರಶಂಸಿಸಲಾಗಿದೆ.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರಿಗೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿರುತ್ತದೆ. ಸಾರ್ವಜನಿಕರು ಇಂತಹ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೋರಿದೆ.

 

ರಸ್ತೆ ಅಪಘಾತ

ದಿನಾಂಕ 14/06/2021ರಂದು ಭಾಗಮಂಡಲ ಬಳಿಯ ಚೇರಂಬಾಣೆ ನಿವಾಸಿ ಪುರ್ಸಿನ್‌ ಸೋಮಣ್ಣ ಮತ್ತು ಪೂಣಚ್ಚ ಎಂಬವರು ಅವರ ಕಾರಿನಲ್ಲಿ ಮಡಿಕೇರಿಯಿಂದ ಮನೆಗೆ ಬರುತ್ತಿರುವಾಗ  ಕೋಪಟ್ಟಿ ಬಳಿ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಚೆಟ್ಟಿಮಾನಿಯ ರಿಯಾಝ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪುರ್ಸಿನ್‌ ಸೋಮಣ್ಣರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 14/06/2021ರಂದು ಶ್ರೀಮಂಗಲ ಬಳಿಯ ತಾವಳಗೇರಿ ಗ್ರಾಮದ ಬಣ್ಣಿಗೆರೆ ಎಂಬಲ್ಲಿನ ನಿವಾಸಿ ಕಾವ್ಯ ಎಂಬವರು ಅವರ ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ಸಂಬಂಧಿಕ ಚೋಮ ಎಂಬವರು ಮದ್ಯಪಾನ ಮಾಡಲು ಹಣ ನೀಡುವಂತೆ ಕೇಳಿದ್ದು ಕಾವ್ಯರವರು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಚೋಮರವರು ದೊಣ್ಣೆಯಿಂದ ಕಾವ್ಯರವರ ಮೇಲೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಕಾಣೆ ಪ್ರಕರಣ

ನಾಪೋಕ್ಲು ಬಳಿಯ ಕಿರುಂದಾಡು ಗ್ರಾಮದಲ್ಲಿ ವಾಸವಿದ್ದ ಅಡಿಯರ ರವಿ ಎಂಬವರು ದಿನಾಂಕ 24/05/2021ರಂದು ಮನೆಯಿಂದ ಅಂಗಡಿಗೆಂದು ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಕಾಣೆ ಪ್ರಕರಣ

ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ರಾಜೇಂದ್ರ ಎಂಬವರ ತಂಗಿಯ ಮಗ ಧನುಷ್‌ ಎಂಬವನು ದಿನಾಂಕ 10/06/2021ರಂದು ಮನೆಯಿಂದ ಎಲ್ಲಿಗೋ ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 14/06/2021ರಂದು ಮಡಿಕೇರಿ ಬಳಿಯ ನೀರುಕೊಲ್ಲಿ ನಿವಾಸಿ ವೀರೇಶ್‌ ಸುವರ್ಣ ಎಂಬವರಿಗೆ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರಿದಾಸ್‌ ಎಂಬಾತನು ಮದ್ಯಪಾನ ಮಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 13/06/2021ರಂದು ಬೆಂಗಳೂರಿನ ಸಮಾಜ ಸೇವಾ ಸಂಸ್ಥೆಯೊಂದರಲ್ಲಿ ಆಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡಿಕೊಂಡಿರುವ ಮಂಜುನಾಥ್‌ ಎಂಬವರು ಬೆಂಗಳೂರಿನಿಂದ ಓರ್ವ ರೋಗಿಯನ್ನು ವಿರಾಜಪೇಟೆ ಬಳಿಯ ಮಾಕುಟ್ಟಕ್ಕೆ ಬಿಟ್ಟು ಮರಳಿ ಬೆಂಗಳೂರಿಗೆ ಹೋಗುತ್ತಿರುವಾಗ ಮಾಕುಟ್ಟದಿಂದ ಸ್ವಲ್ಪ ದೂರದಲ್ಲಿ ಒಂದು ಕಂಟೈನರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಥರವರು ಚಾಲಿಸುತ್ತಿದ್ದ ಆಂಬುಲೆನ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಅದರಲ್ಲಿದ್ದ ಮಂಜುನಾಥ್‌ ಮತ್ತು ಇಬ್ಬರು ದಾದಿಯರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 15-06-2021 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080