ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 12/04/2022ರಂದು ಪೊನ್ನಂಪೇಟೆ ಬಳಿಯ ಕಾನೂರು ನಿವಾಸಿ ಲಿಂಗರಾಜು ಎಂಬವರು ಶಿವು ಎಂಬವರೊಂದಿಗೆ ಶಿವುರವರು ಚಾಲಿಸುತ್ತಿದ್ದ ಅಶೋಕ್‌ ಲೇಲ್ಯಾಂಡ್‌ ಗೂಡ್ಸ್‌ ವಾಹನದಲ್ಲಿ ಶಾಮಿಯಾನಗಳನ್ನು ಹೇರ್ಮಾಡು ದೇವಸ್ಥಾನಕ್ಕೆ ಸಾಗಿಸುತ್ತಿರುವಾಗ ತಾವಳಗೇರಿ ಗ್ರಾಮದ ಪೊಕ್ಕಳತೋಡು ಎಂಬಲ್ಲಿ ಚಾಲಕ ಶಿವುರವರು ಗೂಡ್ಸ್‌ ವಾಹನವನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಸ್ತೆಯ ತಿರುವಿನಲ್ಲಿ ವಾಹನವು ಶಿವುರವರ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಕೊಂಡ ಪರಿಣಾಮ ಲಿಂಗರಾಜರವರ ಎಡಗೈಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ ಮಹಿಳೆ ಸಾವು

ದಿನಾಂಕ 13/04/2022ರಂದು ನಾಪೋಕ್ಲು ಬಳಿಯ ಎಮ್ಮೆಮಾಡು ನಿವಾಸಿ ಅಬ್ದುಲ್‌ ರಹಿಮಾನ್‌ ಎಂಬವರ ಪತ್ನಿ ಪತ್ನಿ ರುಕಿಯಾ ಎಂಬವರು ಮಗ ಜಬ್ಬಾರ್‌ರವರೊಂದಿಗೆ ಸ್ಕೂಟರಿನಲ್ಲಿ ನಾಫೋಕ್ಲಿನಿಂದ ಎಮ್ಮೆಮಾಡು ಗ್ರಾಮಕ್ಕೆ ಹೋಗುತ್ತಿರುವಾಗ ಹಳೆ ತಾಲೂಕು ಬಳಿ ಜಬ್ಬಾರ್‌ರವರು ಚಾಲಿಸುತ್ತಿದ್ದ ಸ್ಕೂಟರ್‌ ರಸ್ತೆಯಲ್ಲಿ ಜಾರಿ ಮಗುಚಿಕೊಂಡ ಪರಿಣಾಮ ಸ್ಕೂಟರಿನಲ್ಲಿದ್ದ ರುಕಿಯಾರವರಿಗೆ ಗಂಭೀರ ಗಾಯಗಳಾಗಿದ್ದು ಮಡಿಕೇರಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ರುಕಿಯಾರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 11/04/2022ರಂದು ಸೋಮವಾರಪೇಟೆ ಬಳಿಯ ನಗರಳ್ಳಿ ಗ್ರಾಮದ ನಿವಾಸಿ ವೀರೇಶ್‌ ಎಂಬವರು ಗ್ರಾಮದಲ್ಲಿ ದೈವ ಕೋಲದ ಸಮಾರಂಭದ ಕೆಲಸದಲ್ಲಿರುವಾಗ ಊಟದ ಮೇಜುಗಳನ್ನು ರಸ್ತೆಯಲ್ಲಿ ಇರಿಸಿದ ಕಾರಣಕ್ಕೆ ನಗರಳ್ಳಿ ಗ್ರಾಮದ ಮಹೇಶ್‌ ಮತ್ತು ಇತರೆ ಸುಮಾರು ಎಂಟು ಜನರು ಸೇರಿಕೊಂಡು ಜಗಳವಾಡಿ ಕತ್ತಿ, ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ ವೀರೇಶ್‌ರವರ ಮೇಲೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 15-04-2022 12:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080