ಅಭಿಪ್ರಾಯ / ಸಲಹೆಗಳು

ವಿಷ ಸೇವಿಸಿ ವ್ಯಕ್ತಿ ಸಾವು

ದಿನಾಂಕ 11/11/2020ರಂದು ಭಾಗಮಂಡಲ ಬಳಿಯ ಕುಂದಚೇರಿ ಗ್ರಾಮದ ತಾಪಿಕಾಡು ನಿವಾಸಿ ರಾಮಣ್ಣ ಎಂಬವರು ವಿಪರೀತ ಮದ್ಯಪಾನ ಮಾಡಿ ನೀರೆಂದು ಭ್ರಮಿಸಿ ಬಾಟಲಿಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರು ದಿನಾಂಕ 12/11/2020ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಂಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬಸ್‌ ಅವಘಢ

ದಿನಾಂಕ 12/11/2020ರಂದು ಮಡಿಕೇರಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದನ್ನು ಅದರ ಚಾಲಕ ಮಡಿಕೇರಿಯ ಹೈದರ್‌ ಆಲಿ ಎಂಬವರು ಮಂಗಳೂರು ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಚರಂಡಿಯೊಳಗೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಂಚನೆ ಪ್ರಕರಣ

ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ಹೊಲಮಾಳ ನಿವಾಸಿ ಜಮುನಾ ಎಂಬವರು 2013ನೇ ಇಸವಿಯಲ್ಲಿ ಖರೀದಿಸಿದ್ದ ಸ್ಕೂಟರೊಂದನ್ನು ನೋಂದಣಿ ಮಾಡದೇ ಇದ್ದು ಅದನ್ನು ಹಣದ ವಿಚಾರದಲ್ಲಿ ಜಮೀಲಾ ಎಂಬವರು ಪಡೆದುಕೊಂಡಿದ್ದು ನೋಂದಣಿಯಾಗದ ಸ್ಕೂಟರನ್ನು ರಶಾದ್‌ ಎಂಬವರಿಗೆ ಮಾರಾಟ ಮಾಡಿ ಅದನ್ನು ಬೇರೆ ಯಾವುದೋ ವಾಹನದ ನೋಂದಣಿ ಸಂಖ್ಯೆಯನ್ನು ಹಾಕಿಕೊಂಡು ಓಡಿಸುತ್ತಾ ಸರ್ಕಾರಕ್ಕೆ ವಂಚಿಸಿರುವುದು ವಿರಾಜಪೇಟೆ ನಗರ ಪಿಎಸ್‌ಐ ಜಗದೀಶ್‌ ಧೂಳಶೆಟ್ಟಿಯವರು ದಿನಾಂಕ 13/11/2020ರಂದು ವಿರಾಜಪೇಟೆ ನಗರದಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದಾಗ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ಹೊಡೆದಾಟ ಪ್ರಕರಣ

ದಿನಾಂಕ 13/11/2020ರಂದು ವಿರಾಜಪೇಟೆ ನಗರ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಗೋವಿಂದ ಲಮಾಣಿ ಎಂಬವರು ವಿರಾಜಪೇಟೆ ನಗರದ ಶಿವಾಸ್‌ ಜಂಕ್ಷನ್‌ ಬಳಿ ಕರ್ತವ್ಯದಲ್ಲಿರುವಾಗ ವಿರಾಜಪೇಟೆ ನಗರದ ಎ.ಸಿ. ಅಜಿತ್‌ ಕುಮಾರ್‌ ಮತ್ತು ಶಫೀರ್‌ ಎಂಬವರು ಪರಸ್ಪರ ಹೊಡೆದಾಡುತ್ತಾ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ಅಕ್ರಮ ಪ್ರವೇಶ, ಹಲ್ಲೆ

ದಿನಾಂಕ 13/11/2020ರಂದು ಕುಟ್ಟ ಬಳಿಯ ನಾಣಚಿ ಗ್ರಾಮದ ನಿವಾಸಿ ಎಂ.ಎ.ಪೊನ್ನಣ್ಣ ಎಂಬವರ ಮನೆಗೆ ಅದೇ ಗ್ರಾಮದ ನಿವಾಸಿಗಳಾದ ಪೂವಣ್ಣ, ಟೋಯ್ಸಿ ಮತ್ತು ಶರಣ್‌ ಎಂಬವರು ಅಕ್ರಮವಾಗಿ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ್ದು ಅದನ್ನು ಪ್ರಶ್ನಿಸಿದ ಪೊನ್ನಣ್ಣ ಹಾಗೂ ಅವರ ಪತ್ನಿ ನೇತ್ರಾರವರ ಮೇಲೆ ಕೈಯಿಂದ ತಳ್ಳಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 14-11-2020 12:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080