ಅಭಿಪ್ರಾಯ / ಸಲಹೆಗಳು

ಧಾರ್ಮಿಕ ನಂಬಿಕೆಗೆ ಭಂಗ ಪ್ರಕರಣ

ಮಡಿಕೇರಿಯಿಂದ ಪ್ರಕಟವಾಗುತ್ತಿರುವ ಶಕ್ತಿ ದಿನಪತ್ರಿಕೆಯಲ್ಲಿ ತಲಕಾವೇರಿಯಲ್ಲಿನ ಅಗಸ್ತ್ಯೇಶ್ವರ ಶಿವಲಿಂಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಙೆ ಇದ್ದರೂ ಪತ್ರಿಕೆಯಲ್ಲಿ ಜನರ ಧಾರ್ಮಿಕ ಭಾವನೆಗೆಳಿಗೆ ಧಕ್ಕೆ ಬರುವ ರೀತಿಯ ವರದಿಗಳನ್ನು ಪ್ರಕಟಸಿರುವುದಾಗಿ ಪತ್ರಿಕೆಯ ಸಂಪಾದಕ ಮಂಡಳಿಯ ವಿರುದ್ದ ಜಿಲ್ಲೆಯ ಕಾವೇರಿ ಸೇನೆ ಸಂಘಟನೆಯ ಸಂಚಾಲಕ ರವಿ ಚಂಗಪ್ಪ ಎಂಬವರು ದೂರು ನೀಡಿದ್ದು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 13/08/2021ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಸುಮತಿ ಮತ್ತು ಅವರ ಪತಿ ಪೂಣಚ್ಚರವರು ತೋಟದಿಂದ ಮನೆಗೆ ಸೌದೆ ತರುತ್ತಿರುವಾಗ ದಾರಿಯಲ್ಲಿ ಅದೇ ಗ್ರಾಮದ ನಿವಾಸಿಗಳಾದ ಮನ್ನಕಮನೆ ಸತೀಶ ಮತ್ತು ಅವರ ಮಗ ಅಶ್ವಥ್‌ರವರು ಸೇರಿಕೊಂಡು ದನ ಬಿಡುವ ವಿಚಾರದಲ್ಲಿ ಜಗಳವಾಡಿ ಕೈ ಹಾಗೂ ಕತ್ತಿಯಿಂದ ಸುಮತಿ ಮತ್ತು ಪೂಣಚ್ಚರವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ, ವ್ಯಕ್ತಿ ಸಾವು

ದಿನಾಂಕ 13/08/2021ರಂದು ಶನಿವಾರಸಂತೆ ಬಳಿಯ ಬಡುಬನಹಳ್ಳಿ ಗ್ರಾಮದ ಬಳಿ ಅನಿಲ್‌ ಎಂಬವರು ಅವರ ಬೈಕಿನಲ್ಲಿ ಅಂಜಲಿ ಎಂಬವರನ್ನು ಕೂರಿಸಿಕೊಂಡು ಬರುತ್ತಿರುವಾಗ ಎದುರಿನಿಂದ ಒಂದು ಗೂಡ್ಸ್‌ ವಾಹನವನ್ನು ಅದರ  ಚಾಲಕ ನವೀನ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅನಿಲ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅನಿಲ್‌ರವರು ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿಯಲ್ಲಿದ್ದ ಅಂಜಲಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 14-08-2021 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ