Feedback / Suggestions

ಹಲ್ಲೆ ಪ್ರಕರಣ

ದಿನಾಂಕ 13/06/2021ರಂದು ವಿರಾಜಪೇಟೆ ಬಳಿಯ ಮಾಪಿಳ್ಳೆತೋಡು ನಿವಾಸಿ ರಾಬಿಯಾ ಎಂಬವರ ಮನೆಗೆ ಅವರ ತಮ್ಮ ಶಮೀರ್‌ ಹೋಗಿದ್ದು ಶಮೀರ್‌ನ ಅಕ್ಕ ರಾಬಿಯಾಳಿಗೆ ಆಕೆಯ ಪತಿ ರಶೀದ್‌ ತೊಂದರೆ ನೀಡುತ್ತಿರುವ ವಿಚಾರಕ್ಕೆ ಶಮೀರ್‌ ರಶೀದ್‌ನ ಅಣ್ಣ ಹಸೈನಾರ್‌ರವರ ಬಳಿ ಮಾತನಾಡುತ್ತಿರುವಾಗ ಹಸೈನಾರ್‌ ಮತ್ತು ಆತನ ಅಕ್ಕ ಸುಲೈಕಾ ಎಂಬವರು ಸೇರಿಕೊಂಡು ರಾಬಿಯಾ ಮತ್ತು ಶಮೀರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸುಲೈಕಾರವರ ಮೇಲೆ ಶಮೀರ್‌, ರಸಿಯಾ ಮತ್ತು ಅಲೀಮಾರವರು ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಗಾಂಜಾ ವಶ; ಓರ್ವನ ಬಂಧನ

ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲೆಯ ಬಳಿ ವ್ಯಕ್ತಿಯೋರ್ವ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆಯುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.

 

ಖಚಿತ ಮಾಹಿತಿ ಆದಾರದ ಮೇರೆಗೆ ನಾಪೋಕ್ಲು ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲಾ ಮೈದಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಉಸ್ಮಾನ್ ಹಾಜಿಯವರ ಮಗ ಕೆ.ಯು. ಅಶ್ರಫ್ ಎಂಬ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪನವರ ನೇತೃತ್ವದಲ್ಲಿ ನಾಪೋಕ್ಲು ಠಾಣಾಧಿಕಾರಿಯವರ ತಂಡ ಬಂಧಿಸಿ ಆರೋಪಿತನಿಂದ 1 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ. ತೂಕದ ಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ಉಪಾಧೀಕ್ಷಕ ಬಿ.ಪಿ.ದಿನೇಶ್‌ಕುಮಾರ್‌ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾ ಪಿ.ಎಸ್.ಐ ಕಿರಣ್, ಎಎಸ್ಐ ಕುಶಾಲಪ್ಪ, ಸಿಬ್ಬಂದಿಗಳಾದ ಜ್ಯೋತಿ ಕುಮಾರ್, ಸಾಜನ್, ನವೀನ್, ಮಹೇಶ್, ಹರ್ಷ, ಮಹದೇವ ನಾಯಕ್, ರಾಜೇಶ್, ಗಿರೀಶ್, ಶಿವಪ್ರಸಾದ್, ಶರತ್, ಸಮೀಲ್ ಹಾಗು ಶರೀಫ್ ರವರು ಭಾಗಿಯಾಗಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.

Last Updated: 14-06-2021 05:13 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080