ಅಭಿಪ್ರಾಯ / ಸಲಹೆಗಳು

ಹಣ ವಂಚನೆ ಪ್ರಕರಣ

ಮಡಿಕೇರಿ ನಗರದ ಹೊಸ ಬಡಾವಣೆ ನಿವಾಸಿ ಅಮಿತ್‌ ಮುತ್ತಪ್ಪ ಎಂಬವರ ಎಸ್‌ಬಿಐ ಮಡಿಕೇರಿ ಶಾಖೆಯ ಖಾತೆಯಿಂದ ದಿನಾಂಕ 10/06/2021ರಂದು ಸುಮಾರು ರೂ. 65,000/- ಹಣವನ್ನು ಯಾರೋ ಅಪರಿಚಿತರು ಅಮಿತ್‌ ಮುತ್ತಪ್ಪನವರ ಅರಿವಿಗೆ ಬಾರದಂತೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾನೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 12/06/2021ರಂದು ಕುಶಾಲನಗರ ಬಳಿಯ ಕೂಡಿಗೆಕೊಪ್ಪಲು ನಿವಾಸಿ ಬಾಬು ಎಂಬವರು ಅಂಗಡಿಯಿಂದ ದಿನಸಿ ಸಾಮಗ್ರ ಖರೀದಿಸಿ ಮನೆಗೆ ಹೋಗುತ್ತಿರುವಾಗ  ಸೋಮವಾರಪೇಟೆ ಕಡೆಯಿಂದ ಕೆಎ-12-ಎಲ್-9704ರ ಭಯಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಾಬುರವರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಬಾಬುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಲಾರಿ ಅಪಘಾತ

ದಿನಾಂಕ 12/06/2021ರಂದು ಮಡಿಕೇರಿ ಬಳಿಯ ಬೆಟ್ಟಗೇರಿಯಲ್ಲಿ ಮಡಿಕೇರಿ ನಗರದ ಬಾಬು ಮತ್ತು ಸಹ ಕೆಲಸಗಾರರು ಬೆಟ್ಟಗೇರಿಯಲ್ಲಿ ವಿದ್ಯುತ್‌ ಕಂಬದ ಕೆಲಸ ಮಾಡಿಕೊಂಡಿರುವ ಸಮಯದಲ್ಲಿ ಮೈಸೂರಿನ ಚಂದ್ರಶೇಖರ್‌ ಎಂಬವರು ಒಂದು ಲಾರಿಯನ್ನು ಚಾಲಿಸಿಕೊಂಡು ಚೇರಂಬಾಣೆ ಕಡೆಯಿಂದ ಬರುತ್ತಿದ್ದು ರಸ್ತೆಯಲ್ಲಿ ನಿಂತಿದ್ದ ಬಾಬುರವರು ಲಾರಿಯನ್ನು ಮುಂದಕ್ಕೆ ಬರದಂತೆ ಕೈಯಲ್ಲಿ ಸೂಚನೆ ನೀಡಿದರೂ ಲಾರಿ ಚಾಲಕ ಚಂದ್ರಶೇಖರ್‌ ಲಾರಿಯನ್ನು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದಿದ್ದು ಆ ಸಮಯದಲ್ಲಿ ರಸ್ತೆಯಲ್ಲಿದ್ದ ವಿದ್ಯುತ್‌ ತಂತಿಗಳು ಲಾರಿಗೆ ಸಿಲುಕಿಕೊಂಡು ಎಳೆದ ರಭಸಕ್ಕೆ ಸುಮಾರು ಮೂರು ವಿದ್ಯುತ್‌ ಕಂಬಗಳು ಕೆಳಗೆ ಬಿದ್ದು ಕಂಬಗಳ ಮೇಲೆ ಹತ್ತಿ ಕೆಲಸ ಮಾಡಿಕೊಂಡಿದ್ದ ಚೆನ್ನಪ್ಪ, ಅಯ್ಯಪ್ಪ ಮತ್ತು ಧನೇಶ್‌ ಕುಮಾರ್‌ ಎಂಬವರುಗಳು ಕೆಳಗೆ ಬಿದ್ದು ಅವರುಗಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 13-06-2021 11:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ