ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

ದಿನಾಂಕ 12/04/2021ರಂದು ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ನಿವಾಸಿ ಗೀತಾ ಎಂಬವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ರವಿ ಯಾನೆ ಮುರಳಿ ಎಂಬವರು ಮನೆಗೆ ಬಂದು ಗೀತಾರವರ ಪತಿ ರಾಜಪ್ಪನವರೊಡನೆ ಜೋರಾಗಿ ಮಾತನಾಡುತ್ತಿದ್ದುದನ್ನು ಗೀತಾರವರ ಮಾವ ಜಯಪ್ಪನವರು ಆಕ್ಷೇಪಿಸಿದ ಕಾರಣಕ್ಕೆ ರವಿಯವರು ಅಲ್ಲೇ ಬಿದ್ದಿದ್ದ ಮರದ ತುಂಡಿನಿಂದ ಜಯಪ್ಪನವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಯತ್ನ

ದಿನಾಂಕ 11/04/2021ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಮೈತಾಡಿ ಗ್ರಾಮದ ಐಚೆಟ್ಟಿರ ಕುಟುಂಬದ ಐನ್‌ ಮನೆಗೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲು ತೆರೆದು ಒಳಗಿನ ಉಗ್ರಾಣ ಕೊಠಡಿಯ ಬೀಗ ಒಡೆದು ಒಳ ಪ್ರವೇಶಿಸಿ ಕಳವು ಮಾಡಲು ಯತ್ನಿಸಿದ್ದು ಸಮೀಪದ ವೇಣು ಎಂಬವರ ಮನೆಗೂ ಪ್ರವೇಶಿಸಿ ಕಳ್ಳತನ ಮಾಡಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಎಸ್ಮಾ ಕಾಯ್ದೆಯಡಿ ಪ್ರಕರಣ

ದಿನಾಂಕ 12/04/2021ರಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಪುತ್ತೂರು ವಿಭಾಗದ ಚಾಲಕ ಆಲ್ವಿನ್‌ ವಿಲ್ಸನ್‌ ಥಾರೋ ಎಂಬವರು ರುದ್ರಪ್ಪ ಎಂಬ ನಿರ್ವಾಹಕರೊಂದಿಗೆ ಬಸ್ಸನ್ನು ಮೈಸೂರಿನಿಂದ ಪುತ್ತೂರು ಕಡೆಗೆ ಚಾಲಿಸಿಕೊಂಡು ಹೋಗುತ್ತಿರುವಾಗ ಕುಶಾಲನಗರದ ಮಾದಾಪಟ್ನದ ಬಳಿ ಮಡಿಕೇರಿ ಘಟಕದ ಸಿಬ್ಬಂದಿಗಳಾದ ವೀರೇಂದ್ರ ಕುಮಾರ್‌, ಮಧು ಮತ್ತು ಇನ್ನಿತರೆ 8 ಜನ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಬಸ್ಸನ್ನು ತಡೆದು ಚಾಲಕ ಆಲ್ವಿನ್‌ರ ಮೇಲೆ ಹಲ್ಲೆ ಮಾಡಿ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಲ್ಲಿ ಭಾಗವಹಿಸುವಂತೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಎಸ್ಮಾ ಕಾಯ್ದೆಯಡಿ ಸುಮಾರು ಹತ್ತು ಜನ ಕೆಎಸ್‌ಆರ್‌ಟಿಸಿ ನೌಕರರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ ಪ್ರಕರಣ

ಕುಶಾಲನಗರ ಬಳಿಯ ಗಂಧದಕೋಟೆ ನಿವಾಸಿ ಶೋಭಾ ಎಂಬವರಿಗೆ ವಾಟ್ಸ್‌ ಆಪ್‌ ಮೂಲಕ ಪರಿಚಯವಾದ ಸ್ಟ್ಯಾನ್ಲಿ ಮಾರ್ಕ್‌ ಎಂಬ ವ್ಯಕ್ತಿಯು ಶೋಭಾರವರಿಗೆ ಸುಗಂಧ ದ್ರವ್ಯಗಳು, ಲ್ಯಾಪ್‌ಟಾಪ್‌, ಫೋನ್‌ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ಕಳಿಸುವುದಾಗಿ ನಂಬಿಸಿ ಸುಮಾರು ರೂ.11,000/- ಹಣವನ್ನು ಶೋಭಾರವರ ಬ್ಯಾಂಕ್‌ ಖಾತೆಯಿಂದ ಜಮಾ ಮಾಡಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ ಪ್ರಕರಣ

ದಿನಾಂಕ 11/04/2021ರ ರಾತ್ರಿ ವೇಳೆ ಕುಶಾಲನಗರ ಬಳಿಯ ಬೊಳ್ಳೂರು ಗ್ರಾಮದ ನಿವಾಸಿ ಶಾರದಾ ಎಂಬವರ ಮಗ ರಾಜೇಶ ಎಂಬವರು ಬೊಳ್ಳೂರು ಗ್ರಾಮದ ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 12/04/2021ರಂದು ಶನಿವಾರಸಂತೆ ವ್ಯಾಪ್ತಿಯ ಒಡೆಯನಪುರ ನಿವಾಸಿ ಸುರೇಶ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ದೀರ್ಘ ಸಮಯದಿಂದ ಸೊಂಟ ನೋವಿನಿಂದ ಬಳಲುತ್ತಿದ್ದ ನೋವು ವಾಸಿಯಾಗದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 13-04-2021 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ