ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

ದಿನಾಂಕ 12/01/2021ರಂದು ರಾತ್ರಿ ವೇಳೆ ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಕೋಟೇರಿ ನಿವಾಸಿ ಚಂದ್ರ ಎಂಬವರ ಮೇಲೆ ಅವರ ಮಗ ಸುರೇಶನು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ಭಾಗಮಂಡಲ ಬಳಿಯ ಚೇರಂಗಾಲ ನಿವಾಸಿ ಸುಂದರೇಶ ಎಂಬವರು ಅದೇ ಗ್ರಾಮದ ನಿವಾಸಿ ಮತ್ತಾರಿ ಅಶೋಕನಿಗೆ ನೀಡಿದ್ದ ಸಾಲದ ಹಣವನ್ನು ಕೇಳಿದ ಕಾರಣಕ್ಕೆ ದಿನಾಂಕ 12/01/2021ರಂದು ಅಶೋಕನು ಸುಂದರೇಶರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ ಪ್ರಕರಣ

ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಶರತ್‌ ಕುಮಾರ್‌ ಎಂಬವರು ಅವರ ಮಾವನವರ ಬ್ಯಾಂಕ್‌ ಖಾತೆಗೆ ಫೋನ್‌ ಪೇ ಮೂಲಕ ರೂ.500/- ಜಮಾ ಮಾಡಿದ್ದು ಹಣವು ಮಾವನವರ ಖಾತೆಗೆ ಜಮಾ ಆಗದ ಕಾರಣ ಫೋನ್‌ ಪೇ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ವಿಚಾರಿಸಿದಾಗ ಅವರು ಹೇಳಿದಂತೆ ಮಾಡಿದಾಗ ಶರತ್‌ ಕುಮಾರ್‌ರವರ ಖಾತೆಯಿಂದ ಸುಮಾರು ರೂ. 40,000/- ಹಣವು ಕಡಿತಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಡಿದ್ದಾರೆ.

 

ಬೈಕ್‌ ಕಳವು ಪ್ರಕರಣ

ಹಾಶನ ಜಿಲ್ಲೆಯ ಕೊಣನೂರಿನ ರಂಗನಾಥಪುರ ಗ್ರಾಮದ ನಿವಾಸಿ ರವಿ ಎಂಬವರು ದಿನಾಂಕ 06/01/2021ರಂದು ಕುಶಾಲನಗರ ಬಳಿಯ ಹೆಬ್ಬಾಲೆಯ ಕೆನರಾ ಬ್ಯಾಂಕಿಗೆ ಕಾರ್ಯ ನಿಮಿತ್ತ ಬಂದು ಅವರ ಬೈಕನ್ನು ಬ್ಯಾಂಕಿನ ಹೊರ ಭಾಗದಲ್ಲಿ ನಿಲ್ಲಿಸಿ ಬ್ಯಾಂಕಿಗೆ ಹೋಗಿ ಕೆಲಸ ಮುಗಿಸಿ ಹೊರಗೆ ಬಂದು ನೋಡಿದಾಗ ಅವರ ಬೈಕನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 13/01/2021ರಂದು ವಿರಾಜಪೇಟೆ ಬಳಿಯ ಕೆದಮುಳ್ಳೂರು ನಿವಾಸಿ ಎಂ.ಯು.ಜಗದೀಶ್‌ ಎಂಬವರು ವಿರಾಜಪೇಟೆಯ ಗಣಪತಿ ದೇವಸ್ಥಾನದ ಬಳಿಯ ಜೇನು ಸೊಸೈಟಿಯ ಕಟ್ಟಡದ ಅವರ ಕಚೇರಿಯಿಂದ ಹೊರಗೆ ಬರುತ್ತಿರುವಾಗ ಕುಟ್ಟಂದಿ ಗ್ರಾಮದ ನಿವಾಸಿ ಎಂ.ಡಿ.ಕಾರ್ಯಪ್ಪ ಎಂಬವರು ಬಂದು ನ್ಯಾಯಾಲಯದ ವ್ಯಾಜ್ಯದ ವಿಚಾರದಲ್ಲಿ ಜಗಳವಾಡಿ ಗುದ್ದಲಿ ಕಾವಿನಿಂದ ಎಂ.ಯು.ಜಗದೀಶ್‌ರವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಆರೋಪಿ ಪರಾರಿ

ದಿನಾಂಕ 13/01/2021ರಂದು ವಿರಾಜಪೇಟೆ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ಬಿ.ಎಸ್.ಪ್ರಕಾಶ್‌ ಎಂಬವರು ಪ್ರಕರಣವೊಂದರ ಆರೋಪಿ ಪೆರುಂಬಾಡಿಯ ನಿವಾಸಿ ಅಮೃತ್‌ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಲುವಾಗಿ ಕರೆದುಕೊಂಡು ಹೋಗುತ್ತಿರುವಾಗ ಆರೋಪಿ ಅಮೃತ್‌ ನ್ಯಾಯಾಲಯದ ಗೇಟಿನ ಬಳಿ ಪೊಲೀಸ್‌ ಸಿಬ್ಬಂದಿ ಬಿ.ಎಸ್.ಪ್ರಕಾಶ್‌ರವರನ್ನು ತಳ್ಳಿ ಬೀಳಿಸಿ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮರಳು ಕಳವು ; ಸಾಗಾಟ

ದಿನಾಂಕ 13/01/2021ರಂದು ವಿರಾಜಪೇಟೆ ಬಳಿಯ ಬೊಳ್ಳುಮಾಡು ಗ್ರಾಮದಿಂದ ಕಡಂಗ ಗ್ರಾಮದ ಕಡೆಗೆ ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಸಿದ್ದಲಿಂಗ ಭಾನಸೆರವರ ಸಿಬ್ಬಂದಿಗಳೊಂದಿಗೆ ಬೊಳ್ಳುಮಾಡು ಗ್ರಾಮದ ಜಂಕ್ಷನ್‌ ಬಳಿ ಕಾದು ಕೆಎ-19-ಸಿ-7856ರ ಪಿಕ್‌ಅಪ್‌ ವಾಹನದಲ್ಲಿ ಎಡಪಾಲ ಗ್ರಾಮದ ಸಿಯಾಬುದ್ದೀನ್‌ ಮತ್ತು ವಿ.ಎಂ.ಅಸ್ಲಾಂ ಎಂಬವರು ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮರಳು ಸಮೇತ ಆರೋಪಿಗಳನ್ನು ಬಂಧಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 13/01/2021ರಂದು ಗೋಣಿಕೊಪ್ಪದ ಮೂರನೇ ವಿಭಾಗದ ನಿವಾಸಿ ಹೆಚ್‌.ಎಂ.ಸುಂದರ ಎಂಬವರು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ

ದಿನಾಂಕ 13/01/2021ರಂದು ಗೋಣಿಕೊಪ್ಪ ಬಳಿಯ ಮಾಯಮುಡಿ ಗ್ರಾಮದ ನಿವಾಸಿ ಎಸ್‌.ಎಂ.ಮಲ್ಲಿಕಾರ್ಜುನ ಎಂಬವರು ಅವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಜನರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ದೊರೆತ ಸುಳಿವಿನ ಮೇರೆಗೆ ಗೋಣಿಕೊಪ್ಪ ಪಿಎಸ್‌ಐ ಹೆಚ್‌.ಸುಬ್ಬಯ್ಯನವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿ ಮಲ್ಲಿಕಾರ್ಜುನರವರಿಂದ 8 ಟೆಟ್ರಾ ಪ್ಯಾಕ್‌ ಮದ್ಯವನ್ನು ವಶಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 14-01-2021 11:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080