ಅಭಿಪ್ರಾಯ / ಸಲಹೆಗಳು

ಕೋವಿಡ್-19‌ ಆದೇಶ ಉಲ್ಲಂಘನೆ ಪ್ರಕರಣ

ದಿನಾಂಕ 08/08/2021 ರಂದು ಮಡಿಕೇರಿ ನಗರ ಸಭೆಯ ಸಹಾಐಕ ಆರೋಗ್ಯ  ನಿರೀಕ್ಷಕರಾದ ಹರಿಣಿರವರು ಮಡಿಕೇರಿನಗರದಲ್ಲಿ ಕೋವಿಡ್‌ ಮಾರ್ಗಸೂಚಿಯ ಪಾಲನೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗ ನಗರದ ಜಿ.ಟಿ.ವೃತ್ತದ ಬಳಿ ಇರುವ ಡೊಮಿನೋಸ್‌ ಪಿಜ್ಜಾ ಅಂಗಡಿಯಲ್ಲಿ ಅದರ ವ್ಯವಸ್ಥಾಪಕರಾದ ನವೀನ್‌ರವರು ಕೋವಿಡ್‌ ಮಾರ್ಗಸೂಚಿಯಲ್ಲಿ ಆದೇಶಿಸಲಾದಂತೆ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ಪಾರ್ಸೆಲ್‌ ಮೂಲಕ ಕೊಡದೆ ಅಂಗಡಿಯೊಳಗೆ ಗ್ರಾಹಕರನ್ನು ಕೂರಿಸಿ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಸುಳ್ಳು ದಾಖಲೆ ಸೃಷ್ಟಿಸಿ ಮೋಸ

ಗಾಳಿಬೀಡು ಗ್ರಾಮದಲ್ಲಿರುವ ಸುಮಾರು ೨೩೦ ಏಕರೆ ಜಾದ ವಿಚಾರವಾಗಿ ಮಡಿಕೇರಿಯ ನಗರಸಭೆಯ ಹಿಂಭಾಗದ ನಿವಾಸಿಗಳಾದ ವೈ.ಎಂ.ಕೆಂಚಪ್ಪ, ವೈ.ಕೆ.ಟೀನಾ ಇವರುಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿರುವುದಾಗಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಬಳಿಯ ನಿವಾಸಿ ವೈ.ಎಂ.ಯಾದವ ಮತ್ತು ಇತರರು ನ್ಯಾಯಾಲಯಕ್ಕೆ ನೀಡಿದ ದೂರನ್ನು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಇತ್ತೀಚಿನ ನವೀಕರಣ​ : 10-08-2021 03:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ