ಅಭಿಪ್ರಾಯ / ಸಲಹೆಗಳು

ನಕಲಿ ನೇಮಕಾತಿ ಆದೇಶ ನೀಡಿ ವಂಚಿಸಿದ ಆರೋಪಿಗಳ ಬಂಧನ 

ಕೊಡಗು ಜಿಲ್ಲೆ ಹಾಗೂ ಹೊರ ಜಿಲ್ಲೆಯ  ವ್ಯಕ್ತಿಗಳಿಗೆ  ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ ನಕಲಿ ನೇಮಕಾತಿ ಆದೇಶ ನೀಡಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಕುಖ್ಯಾತ ವ್ಯಕ್ತಿಯೊಬ್ಬನನ್ನು  ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಪೊಲೀಸ್ ಇಲಾಖೆಯಲ್ಲಿ ಉಪ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ರೂಪಾಯಿ  ವಂಚಿಸಿರುವ ಬಗ್ಗೆ ಮಡಿಕೇರಿ ನಗರದ ನಿವಾಸಿಯೊಬ್ಬರು  ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿ ನಂತರ ಪ್ರಕರಣ ಸಿಐಡಿ ಬೆಂಗಳೂರು ಘಟಕಕ್ಕೆ ವರ್ಗಾವಣೆಯಾಗಿ ತನಿಖೆಯಲ್ಲಿತ್ತು.

 

ಪ್ರಕರಣಕ್ಕೆ ಸಂಬಂಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರು ನಿವಾಸಿ ಪುನೀತ್‌ ಕುಮಾರ್‌ ಮತ್ತು ಮೈಸೂರಿನ ಜ್ಯೋತಿನಗರದ ಗಾಯಿತ್ರಿಪುರದ ನಿವಾಸಿ ಅರುಣ್‌ ಕುಮಾರ್‌ ಯಾನೆ ಮಾರ ಎಂಬಿಬ್ಬರು ಆರೋಪಿಗಳನ್ನು  ಕೊಡಗು ಡಿಸಿಬಿಐ ಘಟಕದ ಪೊಲೀಸರು ಪತ್ತೆಹಚ್ಚಿ  ಪ್ರಕರಣದ ತನಿಖೆಯ ಬಗ್ಗೆ ಜಿಲ್ಲೆಗೆ ಬಂದ ಸಿಐಡಿ ಘಟಕದ  ಡಿವೈಎಸ್ಪಿ ಅಬ್ದುಲ್ ಕರೀಂ ರಾವ್‌ತರ್‌ರವರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಸಮಯದಲ್ಲಿ ಈ ಆರೋಪಿಗಳು ಜಿಲ್ಲೆ ಹಾಗೂ ಹೊರ ಜಿಲ್ಲೆಯ ವ್ಯಕ್ತಿಗಳಿಂದ  ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ  ನಕಲಿ ನೇಮಕಾತಿ ಆದೇಶ ನೀಡಿ ಕೋಟ್ಯಾಂತರ ರೂಪಾಯಿ  ಹಣ ಪಡೆದು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.

 

ಬಂಧಿತ ಆರೋಪಿ ಪುನಿತ್ ಕುಮಾರ್ ನಿಂದ 5.50 ಲಕ್ಷ  ನಗದು ಹಣ ಹಾಗೂ ಸುಮಾರು 03 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ಆರೋಪಿಗಳ ಸಂಪರ್ಕದಂತೆ  ಕಳೆದ 15 ದಿನಗಳ ಹಿಂದೆ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರ ಹುದ್ದೆ ಕೊಡಿಸುವುದಾಗಿ ನಕಲಿ ನೇಮಕಾತಿ ಆದೇಶ ನೀಡಿ ಲಕ್ಷಾಂತರ ಹಣ ಪಡೆದು ವಂಚಿಸಿರುವ  ಇಲ್ಲಿನ ಸ್ಥಳೀಯ ಆರೋಪಿಗಳಾದ  ಶಭರೀಶ್ , ರಾಜಮಣಿ ಮತ್ತು  ಚಂದ್ರ ಶೇಖರ್ ಎಂಬವರುಗಳನ್ನು ಡಿಸಿಐಬಿ ಪೊಲೀಸರು ಬಂಧಿಸಿರುವುದನ್ನು ಸ್ಮರಿಸಬಹುದು.

 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಸಿಐಡಿ ಡಿವೈಎಸ್ಪಿ  ಅಬ್ದುಲ್ ಕರೀಂ ರಾವ್ ತರ್, ಜಿಲ್ಲಾ ಗುಪ್ತ ದಳದ ಪಿಐ ಐ.ಪಿ ಮೇದಪ್ಪ, ಡಿಸಿಐಬಿ ಘಟಕದ ಎಎಸ್ಐ ಹಮೀದ್ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್,ವಸಂತ, ವೆಂಕಟೇಶ್, ಶರತ್ ರೈ, ಸುರೇಶ್, ಅನಿಲ್ ಕುಮಾರ್ ಮತ್ತು ಸಿಡಿಆರ್ ಘಟಕದ  ರಾಜೇಶ್ ಮತ್ತು ಗಿರೀಶ್ ರವರು ಭಾಗವಹಿಸಿದ್ದು , ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 06/10/2021ರಂದು ನಾಪೋಕ್ಲು ಬಳಿಯ ಕೊಳಕೇರಿ ನಿವಾಸಿ ಪಿಡಿಯಲ್‌ ಐಸಮ್ಮ ಎಂಬ ವೃದ್ದ ಮಹಿಳೆಯು ನಾಪೋಕ್ಲುವಿನಿಂದ ಕೊಳಕೇರಿಗೆ ಶಿವ ಲೈನ್ಸ್‌ ಎಂಬ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಕೊಳಕೇರಿ ಗ್ರಾಮದ ವಸಂತ ಎಂಬವರ ಮನೆಯ ಬಳಿ ಬಸ್ಸಿನ ಚಾಲಕ ಜಾನ್ಸನ್‌ ಎಂಬವರು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್ಸಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಪಿಡಿಯಲ್‌ ಐಸಮ್ಮರವರು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟ ಪರಿಣಾಮ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 06/10/2021ರಂದು ನಾಪೋಕ್ಲು ಬಳಿಯ ಅಜ್ಜಿಮುಟ್ಟ ನಿವಾಸಿ ಶಿಯಾಬುದ್ದೀನ್‌ ಎಂಬವರು ಅವರ ಕಾರಿನಲ್ಲಿ ನಾಪೋಕ್ಲಿನಿಂದ ಕುರುಳಿ ಪರಂಬು ಎಂಬಲ್ಲಿಗೆ ಹೋಗುತ್ತಿರುವಾಗ ಹಳೆ ತಾಲೂಕಿನ ಎಬಿಸಿ ಮಾರ್ಟ್‌ ಬಳಿ ಹಿಂದಿನಿಂದ ಒಂದು ಬೈಕನ್ನು ಅದರ ಸವಾರ ಪ್ರವೀಣ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ಮುಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿ ಬೈಕ್‌ ಸವಾರನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ವಿರಾಜಪೇಟೆ ನಗರದ ಸಿಲ್ವಾನಗರ ನಿವಾಸಿ ಕುಮಾರ್‌ ಎಂಬವರು ದಿನಾಂಕ 06/10/2021ರಂದು ಧಾರ್ಮಿಕ ಕಾರ್ಯದ ನಿಮಿತ್ತ ಕುಟುಂಬದೊಂದಿಗೆ ಅವರ ತಂಗಿಯ ಊರಾದ ಅರಕಲಗೂಡಿಗೆ ಹೋಗಿ ದಿನಾಂಕ 07/10/2021ರಂದು ಸಂಜೆ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮೀಟಿ ತೆರೆದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ. 15,000/- ಮೌಲ್ಯದ ಒಂದು ಟಿವಿ ಹಾಗೂ ರೂ.1500/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 08-10-2021 03:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080