ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ

ದಿನಾಂಕ 07/04/2021ರಂದು ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಲಕ್ಷ್ಮಿ ಎಂಬವರು ಅವರ ಮಗ ಮೋಹನ್‌ ಕುಮಾರ್‌ ಮತ್ತು ಧರಣಿ ಎಂಬವರೊಡನೆ ಜೀಪಿನಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಮೂರ್ನಾಡು ಬಳಿಯ ಎಂ.ಬಾಡಗ ಗ್ರಾಮದ ಬಳಿ ಎದುರಿನಿಂದ ಒಂದು ಖಾಸಗಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಹನ್‌ ಕುಮಾರ್‌ರವರು ಚಾಲಿಸುತ್ತಿದ್ದ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪಿನಲ್ಲಿದ್ದ ಲಕ್ಷ್ಮಿಯವರು ಮೃತರಾಗಿದ್ದು ಗಂಭೀರ ಗಾಯಗೊಂಡ ಮೋಹನ್‌ ಕುಮಾರ್‌ ಮತ್ತು ಧರಣಿರವರನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿರುವುದಾಗಿ ದೂರು ನೀಡಿದ್ದು ಅದೇ ರೀತಿ ಜೀಪನ್ನು ಚಾಲಿಸುತ್ತಿದ್ದ ಮೋಹನ್‌ ಕುಮಾರ್‌ರವರು ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಜೀಪನ್ನು ಚಾಲಿಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿಗೆ ಹಾನಿಯುಂಟಾಗಿದ್ದು ಜೀಪಿನಲ್ಲಿದ್ದ ಮೂವರಿಗೆ ಗಾಯಗಳಾಗಿರುವುದಾಗಿ ಬಸ್‌ ಚಾಲಕ ರವಿ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣಕ್ಕಾಗಿ ಕೊಲೆ ಬೆದರಿಕೆ

ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿ ಬಿ.ಕೆ.ಗಣೇಶ್‌ ಕುಮಾರ್‌ ಎಂಬವರಿಗೆ ಹಲವು ದಿನಗಳಿಂದ ಅವರ ಸಂಬಂಧಿಕರಾದ ವಿ.ಕೆ.ಗುರುಪ್ರಸಾದ್‌ ಎಂಬವರು ಸುಮಾರು ರೂ. 30 ಲಕ್ಷ ಹಣ ನೀಡುವಂತೆ ದೂರವಾಣಿ ಮೂಲಕ ಒತ್ತಾಯಿಸುತ್ತಿದ್ದು ಹಣ ನೀಡದಿದ್ದರೆ ಗಣೇಶ್‌ ಕುಮಾರ್‌ರವರ ಪತ್ನಿ ಹಾಗೂ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಗಣೇಶ್‌ ಕುಮಾರ್‌ರವರ ಮಗನನ್ನು ಹತ್ಯೆ ಮಾಡುವುದುಆಗಿ ಬೆದರಿಸಿದ್ದು ಇದಕ್ಕೆ ವಿ.ಕೆ.ಗುರು ಪ್ರಸಾದ್‌ರವರ ತಾಯಿ ಚಂದ್ರಿಕಾ ಹಾಗೂ ತಮ್ಮ ಪ್ರವೀಣ್‌ ಕುಮ್ಮಕ್ಕು ನೀಡುತ್ತಿರುವದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ , ಕೊಲೆ ಬೆದರಿಕೆ

ದಿನಾಂಕ 07/04/2021ರಂದು ಶ್ರೀಮಂಗಲ ಬಳಿಯ ತಾವಳಗೇರಿ ನಿವಾಸಿ ಮಚ್ಚಮಾಡ ಸುಜಾತ ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ಯಾರೋ ಅಪರಿಚಿತ ವ್ಯಕ್ತಿ ಅವರ ಮನೆಯ ಕಾಫಿ ಕಣಕ್ಕೆ ಪ್ರವೇಶಿಸಿದ್ದು ಅಲ್ಲಿಗೆ ಹೋದ ಸುಜಾತರವರನ್ನು ಆ ವ್ಯಕ್ತಿಯು ಹಿಡಿದು ದೂಡಿ ಗಾಯಗೊಳಿಸಿದ್ದು ಸುಜಾತರವರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ಸುಂಟಿಕೊಪ್ಪ ಬಳಿಯ ಹೊರೂರು ಗ್ರಾಮದ ತೈಕಪ್ಪ ಎಸ್ಟೇಟಿನಲ್ಲಿ ಕೆಲಸ ಮಾಡಿಕೊಂಡಿರುವ ಪಿ.ವೆಂಕಟಾಚಲಂ ಎಂಬವರು ದಿನಾಂಕ 06/04/2021ರ ಸಂಜೆ ವೇಳೆ ಅವರ ವಸತಿ ಗೃಹಕ್ಕೆ ಬೀಗ ಹಾಕಿಕೊಂಡು ಕೆದಕಲ್‌ ಬಳಿಯ ದೇವಸ್ಥಾನಕ್ಕೆ ಹೋಗಿದ್ದು ಮರಳಿ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಗಾಜನ್ನು ಒಡೆದು ಒಳ ಪ್ರವೇಶಿಸಿ ಮನೆಯ ಕೋಣೆಯೊಳಗೆ ಬೀರುವಿನಲ್ಲಿಟ್ಟಿದ್ದ ಸುಮಾರು ರೂ.7,000 ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 06/04/2021ರ ಸಂಜೆ ವೇಳೆ ಕುಶಾಲನಗರ ಬಳಿಯ ಸಿದ್ದಲಿಂಗಪುರದ ಅರಸಿನಗುಪ್ಪೆ ನಿವಾಸಿ ಹೆಚ್‌.ಬಿ.ತಿಮ್ಮಯ್ಯ ಎಂಬವರು ದೇವಸ್ಥನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ರವಿ ಕುಮಾರ್‌ ಎಂಬವರು ತಿಮ್ಮಯ್ಯನವರನ್ನು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದೇ ರೀತಿ ಅರಸಿನಗುಪ್ಪೆ ಗ್ರಾಮದ ಚೌಡೇಶ್ವರಿ ದೇವಸ್ಥಾನದ ವಂತಿಗೆ  ವಿಚಾರದಲ್ಲಿ ಮಾತನಾಡಲು ರವಿ ಕುಮಾರ್‌ವರು ತಿಮ್ಮಯ್ಯನವರ ಮನೆಗೆ ಹೋದಾಗ ಅಲ್ಲಿ ಮಾತಿಗೆ ಮಾತು ಬೆಳೆದು ಹೊರಗಡೆ ಇದ್ದ ಚಂದ್ರಶೇಖರ್‌, ಸತೀಶ, ಮಿಲನ್‌, ಶ್ರೀಧರ್‌, ಅನಂತ, ವಿಠಲ, ತಿಮ್ಮಯ್ಯ ಮತ್ತಿತರರು ಸೇರಿಕೊಂಡು ಕೈ ಹಾಗೂ ದೊಣ್ಣೆಯಿಂದ ರವಿ ಕುಮಾರ್‌ರವರ ಮೇಲೆ ಹೊಡೆದು ಹಲ್ಲೆ ಮಾಡಿರುವುದಾಗಿ ರವಿ ಕುಮಾರ್‌ರವರು ಪ್ರತಿ ದೂರು ನೀಡಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 07/04/2021ರಂದು ಕೂಡಿಗೆ ಗ್ರಾಮದ ನಿವಾಸಿ ಪ್ರವೀಣ್‌ ಎಂಬವರು ಅವರ ಅಂಗಡಿಯಲ್ಲಿರುವಾಗ ಅಲ್ಲಿ ಬಂದ ಕೂಡಿಗೆಯ ನಿವಾಸಿಗಳಾದ ಅಮಿತ್‌ ಮತ್ತು ಕಾಮಾಕ್ಷಿ ಎಂಬವರು ಪ್ರವೀಣ್‌ರವರ ಅಣ್ಣ ವೆಂಕಟೇಶರವರೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡುತ್ತಿದ್ದು ಪ್ರವೀಣ್‌ರವರು ಅಂಗಡಿಯಿಂದ ಹೊರಗೆ ಹೋಗುವಂತೆ ತಿಳಿಸಿದ ಕಾರಣಕ್ಕೆ ಅಮಿತ್‌ ಮತ್ತು ಕಾಮಾಕ್ಷಿರವರು ಸೇರಿಕೊಂಡು ಪ್ರವೀಣ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ವೆಂಕಟೇಶರವರು ಚೀಟಿಯ ವಿಚಾರ ಮಾತನಾಡಲು ಬರುವಂತೆ ಅಮಿತ್‌ ಮತ್ತು ಅವರ ತಾಯಿ ಕಾಮಾಕ್ಷಿಯನ್ನು ಅಂಗಡಿಗೆ ಕರೆಸಿ ಅಲ್ಲಿ ಮದುವೆಯ ವಿಚಾರದಲ್ಲಿ ಜಗಳವಾಡಿ ವೆಂಕಟೇಶ, ಪ್ರವೀಣ ಮತ್ತು ಗೌರಮ್ಮ ಎಂಬವರು ಸೇರಿಕೊಂಡು ಚಾಕುವಿನಿಂದ ಅಮಿತ್‌ರವರ ಕಣ್ಣಿನ ಭಾಗಕ್ಕೆ ತಿವಿದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 08-04-2021 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080