ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

ದಿನಾಂಕ 05/03/2022ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಕಳಕಂಡ ಪಾರ್ವತಿ ಎಂಬವರು ಅವರ ಮನೆ ಕೆಲಸದ ಲಲಿತಾ ಎಂಬವರೊಂದಿಗೆ ಇಬ್ಬರೇ ಮನೆಯಲ್ಲಿದ್ದಾಗ ರಾತ್ರಿ ಹತ್ತು ಗಂಟೆ ವೇಳೆಗೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಏಕಾ ಏಕಿ ಮನೆಗೆ ನುಗ್ಗಿ ಪಾರ್ವತಿ ಹಾಗೂ ಲಲಿತಾರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 05/03/2022ರಂದು ಪೊನ್ನಂಪೇಟೆ ಬಳಿಯ ಕಾನೂರು ನಿವಾಸಿ ಲಿಂಗಪ್ಪ ನಾಯಕ ಎಂಬವರು ಅವರು ಕೆಲಸ ಮಾಡುತ್ತಿದ್ದ ಪೊನ್ನಂಪೇಟೆಯ ಬಾರ್‌ನಲ್ಲಿ ಕೆಲಸ ಮುಗಿಸಿ ಬಾರ್‌ ಮ್ಯಾನೇಜರ್‌ ಸಂತೋಷ್‌ ಎಂಬವರೊಂದಿಗೆ ರಾತ್ರಿ ವೇಳೆ ಬಾರ್‌ ಮುಚ್ಚಿ ಮನೆಗೆ ಹೋಗುತ್ತಿರುವಾಗ ಬಾರ್‌ ಮುಂಭಾಗ ಕಾನೂರು ನಿವಾಸಿ ಮಲೆಯಾಳಿ ಚಂಗು ಎಂಬವರು ಅಡ್ಡಗಟ್ಟಿ ಕುಡಿಯಲು ಮದ್ಯವನ್ನು ಸಾಲವಾಗಿ ಕೊಡದ ಕಾರಣಕ್ಕೆ ಜಗಳವಾಡಿ ಲಿಂಗಪ್ಪನಾಯಕರವರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 05/03/2022ರಂದು ಸೋಮವಾರಪೇಟೆ ನಗರದ ನಿವಾಸಿ ವರುಣ್‌ ಎಂಬವರು ಅವರ ಸ್ನೇಹಿತ ವಿನಯ್‌ ಚೌಹಾಣ್‌ ಎಂಬವರೊಡನೆ ವಿನಯ್‌ ಚೌಹಾಣ್‌ ಚಾಲಿಸುತ್ತಿದ್ದ ಕಾರಿನಲ್ಲಿ ಕುಶಾಲನಗರದಿಂದ ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ ಕುಸುಬೂರು ಬಳಿ ವಿನಯ್‌ ಚೌಹಾಣ್‌ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಅಪಘಾತ ಕ್ಕೀಡಾಗಿ ಕಾರಿನಲ್ಲಿದ್ದ ವಿನಯ್‌ ಚೌಹಾಣ್‌ ಮತ್ತು ವರುಣ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 06/03/2022ರಂದು ಮೈಸೂರಿನ ಗಾಯತ್ರಿ ಪುರಂ ನಿವಾಸಿ ಸಫೀರಾ ಎಂಬವರು ಅವರ ಪತಿ ಮತ್ತು ಕುಟುಂಬದವರೊಂದಿಗೆ ಕಾಸರಗೋಡಿನಿಂದ ಮೈಸೂರಿಗೆ ಹೋಗುತ್ತಿರುವಾಗ ಮಡಿಕೇರಿ – ಮಂಗಳೂರು ರಸ್ತೆಯ ಕೊಯನಾಡು ಗಣಪತಿ ದೇವಸ್ಥಾನದ ಬಳಿ ಮಡಿಕೇರಿ ಕಡೆಯಿಂದ ಒಂದು ಥಾರ್‌ ಜೀಪನ್ನು ಅದರ ಚಾಲಕ ಪೊನ್ನಪ್ಪ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಫೀರಾರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

ಇತ್ತೀಚಿನ ನವೀಕರಣ​ : 07-03-2022 04:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080