ಅಭಿಪ್ರಾಯ / ಸಲಹೆಗಳು

ಮನೆಯ ಕಾಮಗಾರಿ ವಿಚಾರದಲ್ಲಿ ಜಗಳ, ಹಲ್ಲೆ.

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕುಂದ ಗ್ರಾಮದ ನಿವಾಸಿ ಗಿರೀಶ ಎಂಬವರ ವಾಸದ ಮನೆಯ ಕಾಮಗಾರಿ ಕೆಲಸವನ್ನು ಪೊನ್ನಂಪೇಟೆ ನಿವಾಸಿ ಜಿ. ಕುಮಾರ ರವರು ಮಾಡಿಕೊಟ್ಟಿದ್ದು, ದಿನಾಂಕ 3-12-2021 ರಂದು ಸಂಜೆ 5-30 ಗಂಟೆಯ ಸಮಯದಲ್ಲಿ  ಗಿರೀಶ ಹಾಗು ಮತ್ತೊಬ್ಬ ವ್ಯಕ್ತಿ  ಜಿ.ಕುಮಾರ ರವರ ಮನೆಗೆ ಬಂದು ಅವರನ್ನುಕಾರಿನಲ್ಲಿ ಗಿರೀಶರವರ ಮನೆಗೆ ಕರೆದುಕೊಂಡು ಹೋಗಿ ಮನೆಯ ಕಾಮಗಾರಿ ಕೆಲಸ ಸರಿಯಾಗಿಲ್ಲ ವೆಂದು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು 60 ಸಾವಿರ ಹಣವನ್ನು ಹಿಂದಕ್ಕೆ ಕೊಡುವಂತೆ ಹೇಳಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಂಗನವಾಡಿ ಕೇಂದ್ರದಿಂದ ಆಹಾರ ಸಾಮಾಗ್ರಿ ಕಳವು.

ಗೋಣಿಕೊಪ್ಪ ಠಾಣಾ ಸರಹದ್ದಿನ ಧನುಗಾಲ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿನಾಂಕ 3-12-2021ರ ಅಪರಾಹ್ನ 1-45 ಗಂಟೆಯಿಂದ ದಿನಾಂಕ 4-12-2021ರ ಬೆಳಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬಾಗಿಲನ್ನು ಒಡೆದು ಒಳನುಗ್ಗಿ ಒಟ್ಟು 4,000/- ರೂ ಬೆಲೆಬಾಳುವ ಆಹಾರದ ಕಿಟ್, ಅಡುಗೆ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂಗನವಾಡಿ ಕೇಂದ್ರದ ಶಿಕ್ಷಕಿ ಸಿ.ಕೆ. ಲಲಿತಮ್ಮರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಟೋ ರಿಕ್ಷಾ ಅವಗಡ, ನಾಲ್ವರಿಗೆ ಗಾಯ

ದಿನಾಂಕ 4-12-2021 ರಂದು ಕೆದಮುಳ್ಳೂರಿನ ಕೆ.ಎಸ್. ವಿನೋದ ಎಂಬವರು ತನ್ನ ಬಾಪ್ತು ಆಟೋ ರಿಕ್ಷಾದಲ್ಲಿ ತನ್ನ ಮೂವರು ಮಕ್ಕಳನ್ನು ಕೂರಿಸಿಕೊಂಡು ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ ಬೋಯಿಕೇರಿ ಗೌಡ ಸಮಾಜದ ಹತ್ತಿರ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಕಾರಣ ಅದನ್ನು ತಪ್ಪಿಸಲು ಪ್ರಯತ್ನಿಸಿದಾಗ ಆಟೋ ರಿಕ್ಷಾವು ರಸ್ತೆಮೇಲೆ ಮಗುಚಿ ಬಿದ್ದ ಕಾರಣ ಆಟೋದಲ್ಲಿದ್ದ ದಿನೇಶ, ದಿವಿತ, ದಿವ್ಯ ರವರುಗಳಿಗೆ ಗಾಯಗಳಾಗಿದ್ದು ಆಟೋವನ್ನು ಚಾಲನೆ ಮಾಡುತ್ತಿದ್ದ ಕೆ.ಎಸ್. ವಿನೋದರವರಿಗೂ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 05-12-2021 11:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080