ಅಭಿಪ್ರಾಯ / ಸಲಹೆಗಳು

ಮಡಿಕೇರಿ ಪೊಲೀಸರ ಯಶಸ್ವಿಕಾರ್ಯಾಚರಣೆ:  ಬೈಕ್ ಕಳ್ಳತನ  ಆರೋಪಿಗಳ ಬಂಧನ:

ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಜಾಗದಲ್ಲಿ ಸಿ.ಆರ್.ತಿಮ್ಮಯ್ಯ ಎಂಬುವವರು ದಿನಾಂಕ 30-10-2020 ರಂದು ತಮ್ಮ ಬಾಪ್ತು ಟಿವಿಎಸ್ ಅಪಾಚೆ ಮೋಟಾರು ಸೈಕಲನ್ನು ನಿಲ್ಲಿಸಿದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು. ಈ ಸಂಬಂಧ ಸಿ.ಆರ್.ತಿಮ್ಮಯ್ಯರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆಗಾಗಿ ಮಡಿಕೇರಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಮಡಿಕೇರಿಯ ಜಿ.ಟಿ.ವೃತ್ತದ ಬಳಿಯಿರುವ ಪ್ರವಾಸಿ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಕಳ್ಳತನವಾಗಿದ್ದ ಟಿ.ವಿ.ಎಸ್. ಆಪಾಚೆ ಮೋಟಾರು ಸೈಕಲನ್ನು ಸೇರಿದಂತೆ ರಾಜ್ಯದ ಬೆಂಗಳೂರು ಹಾಗೂ ಮಂಡ್ಯ ನಗರದಲ್ಲಿ ಮತ್ತು ಆಂತರ್ ರಾಜ್ಯವಾದ ಕೇರಳದ ಕಣ್ಣೂರಿನಲ್ಲಿ ಕಳುವಾಗಿದ್ದ ಒಟ್ಟು 5 ವಿವಿಧ ಸಂಸ್ಥೆಯ ಮೋಟಾರು ಸೈಕಲ್ ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದು, ವಶಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ 2,25,000/- ರೂ.ಗಳಾಗಿರುತ್ತದೆ. ಸದರಿ ಮೊಟಾರು ಸೈಕಲ್ ಗಳನ್ನು ಕಳ್ಳತನ ಮಾಡಿದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದುಕೊಂಡು ಬಾಲ ಅಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಕಾರ್ಯಾಚರಣೆಯನ್ನು ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ದಿನೇಶ್ ಕುಮಾರ್ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಕಾರ್ಯಾಚರಣೆ ಯಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಮಡಿಕೇರಿ ನಗರ ಪೊಲೀಸ್ ಠಾಣಾ ಎಎಸ್ಐರವರಾದ ಗೋವಿಂದ ರಾಜು, ಕೆ.ಜಿ. ಹೊನ್ನಪ್ಪ, ಮೊಹಮ್ಮದ್ ಅಕ್ಮಲ್, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ. ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ. ನಂದಕುಮಾರ್, ಎ.ಆರ್. ಮನು ಮತ್ತು ಭವಾನಿ ರವರುಗಗಳು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯವನ್ನು ಪ್ರಶಂಶಿಸಲಾಗಿದೆ.

ಇತ್ತೀಚೆಗೆ ವಾಹನ ಕಳ್ಳರು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಯಾವುದೇ ದ್ವಿ ಚಕ್ರ ವಾಹನದ ಲಾಕನ್ನು ನಕಲಿ ಕೀ ಬಳಸಿ ವಾಹನಗಳನ್ನು ಕಳವು ಮಾಡುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಲು ಕೋರಲಾಗಿದೆ.

ಹಲ್ಲೆ ಪ್ರಕರಣ

        ದಿನಾಂಕ: 02-11-2020 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ-ಬಾಣಾವಾರ ರಸ್ತೆಯ ಗಾಡಿರೋಡ್ ಬಳಿ ಅರೆಗಲ್ಲು ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಮೂರ್ತಿ ಮತ್ತು ಸಚಿನ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ವೆಂಕಟೇಶ್,ರವಿ, ಕುಮಾರ, ರಾಕೇಶ್‍ ಎಂಬುವವರು ಹಣಕಾಸಿನ ವಿಚಾರದಲ್ಲಿ ವೈಷಮ್ಯದಿಂದ ದಾರಿ ತಡೆದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 02-11-2020 ರಂದು ಸೋಮವಾರಪೇಟೆ ತಾಲ್ಲೂಕು ಮುವತ್ತೊಕ್ಲು ಗ್ರಾಮದ ನಿವಾಸಿ ಗಣೇಶ್ ಎಂಬುವವರು ಅವರ ಕಾರಿನಲ್ಲಿ ಕುಶಾಲನಗರದಿಂದ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಯೆಡವಾರೆ ಗ್ರಾಮದ ಬಳಿ ಅವರ ಕಾರನ್ನು ಸಚಿ ಮತ್ತು ಇತರರು ಕೆಎ-12-4453 ರ ಪಿಕ ಅಕ್ ವಾಹನದಲ್ಲಿ ಬಂದು ತಡೆದು ನಿಲ್ಲಿಸಿ ಹಳೆ ವೈಷಮ್ಯದಿಂದ ಹಲ್ಲೆ ಮಾಡಿಕ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 03-11-2020 ರಂದು ಸೋಮವಾರಪೇಟೆ ತಾಲ್ಲೂಕು ಕಂಬಿಬಾಣೆ ಗ್ರಾಮದ ನಿವಾಸಿ ಸುಮೇಶ್ ಎಂಬುವವರು ಮನೆಯಲ್ಲಿರುವಾಗ ಸಾಲದ ಹಣ ವಾಪಾಸ್ಸು ಕೊಡವುದಾಗಿ ಮನೆಗೆ ಬಂದ 7ನೇ ಹೊಸಕೋಟೆ ಉಪ್ಪುತೋಡು ನಿವಾಸಿ ರಾಜೇಶ ಎಂಬುವವರು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಶ್ರೀಗಂಧ ಮರ ಕಳವು ಪ್ರಕರಣ

        ದಿನಾಂಕ: 03-11-2020 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ಚೌಡೇಶ್ವರಿ ಕಾಲೋನಿ ಸ್ಮಶಾನದಲ್ಲಿದ್ದ ಶ್ರೀಗಂಧದ ಮರವನ್ನು ಕುಯ್ದು ಕಳ್ಳತನ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕುಮಾರ ಎಂಬುವವರನ್ನು ದಸ್ತಗಿರಿ ಮಾಡಿ ಪಡೆದು ಅಂದಾಜು 28,700 ರೂ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

        ದಿನಾಂಕ: 03-11-2020 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿ ಸಿದ್ದಿಕ್ ಎಂಬುವವರು ಕಾರಿನಲ್ಲಿ ಹೋಗುತ್ತಿರುವಾಗ ಕೃಷ್ಣೇಗೌಡ ಎಂಬುವವರು ಅವರ ಬೈಕನ್ನು ಏಕಾಏಕಿ ಬದಿಯಿಂದ ರಸ್ತೆಗೆ ಚಾಲನೆ ಮಾಡಿದ್ದನ್ನು ಕೇಳಿದಾಗ ಕೈಯಲ್ಲಿದ್ದ ಕಟಿಂಗ್‍ ಪ್ಲೇಯರ್ ನಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 04-11-2020 05:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080