ಅಭಿಪ್ರಾಯ / ಸಲಹೆಗಳು

ಮೂರು ಪ್ರತ್ಯೇಕ ಕಳವು ಪ್ರಕರಣ ಪತ್ತೆ

 ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2020ನೇ ಸಾಲಿನಲ್ಲಿ ನಡೆದ ಮೂರು ಪ್ರತ್ಯೇಕ ಮನೆ ಕನ್ನ ಕಳವು ಪ್ರಕರಣಗಳನ್ನು ಬೇಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

 

2020ನೇ ಸಾಲಿನಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕರ್ಣಂಗೇರಿ ಗ್ರಾಮ, ಬಿಳಿಗೇರಿ ಗ್ರಾಮ ಮತ್ತು ಮಡಿಕೇರಿ ಬಳಿಯ ಕೆ.ಬಾಡಗ ಗ್ರಾಮಗಳ ಮನೆಗಳಲ್ಲಿ ಯಾರೋ ಕಳ್ಳರು ಮನೆ ಕಳ್ಳತನ ನಡೆಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ತನಿಖೆಯನ್ನು ಕೈಗೊಳ್ಳಲಾಗಿತ್ತು.  

 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾರವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ನಡೆಸಿದ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ರವಿಕಿರಣ್‌ರವರ ನೇತೃತ್ವದ ತಂಡವು ಮೂರೂ ಪ್ರಕರಣಗಳನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರೂ ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು ರೂ. 10,20,000/- ಮೌಲ್ಯದ ಹಳೆಯ ಪಂಚಲೋಹದ  ವಿಗ್ರಹಗಳು, ವಿವಿಧ ಕೃಷಿ ಸಲಕರಣೆಗಳು ಮತ್ತು ಮೂರು ಚೀಲ ಕಾಫಿಯನ್ನು ವಶಪಡಿಸಿಕೊಂಡಿದ್ದಾರೆ.

 

ಮಡಿಕೇರಿ ಗ್ರಾಮಾಂತರ ಪಿಐ ರವಿಕಿರಣ್‌ರವರ ನೇತ್ರತ್ವದಲ್ಲಿ ನಡೆದ ಪತ್ತೆ ಕಾರ್ಯದ ತಂಡದಲ್ಲಿ ಪಿಎಸ್‌ಐ ಎಂ.ಕೆ.ಸದಾಶಿವ, ಸಿಬ್ಬಂದಿಗಳಾದ ಕೆ.ಜೆ.ರವಿ ಕುಮಾರ್‌, ಎನ್‌.ಎಂ.ಮಂಜುನಾಥ್‌, ಎಂ.ಆರ್.ಸತೀಶ್‌ ಕುಮಾರ್‌, ಹೆಚ್‌.ಡಿ.ಪ್ರಸನ್ನ ಕುಮಾರ್‌, ಕೆ.ಡಿ.ದಿನೇಶ್‌, ಸಿ.ಎನ್‌. ನವೀನ್‌ ಕುಮಾರ್‌, ಕರಬಸಪ್ಪ ಚಕ್ರಸಾಲಿ, ಹರೀಶ್‌ ನಾಯ್ಕ್‌, ಶರಣ ಬಸು, ಎಸ್‌.ಆರ್.ಶಿಲ್ಪ, ದಿಲೀಪ್‌, ರಮೇಶ್‌, ಆರ್‌.ವೈ.ಪ್ರವೀಣ್‌ ಕುಮಾರ್‌ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ರಾಜೇಶ್‌ ಮತು ಗಿರೀಶ್‌ರವರು ಪಾಲ್ಗೊಂಡಿದ್ದು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.

 

ರಸ್ತೆ ಅಪಘಾತ

ದಿನಾಂಕ 02/10/2021ರಂದು ಕುಶಾಲನಗರ ಬಳಿಯ ಗುಡ್ಡೆಹೊಸೂರು ನಿವಾಸಿ ಕಾಂತರಾಜು ಎಂಬವರು ಅವರ ಸ್ನೇಹಿತ ಪಿರಿಯಾಪಟ್ನ ಬಳಿಯ ನಿವಾಸಿ ಗುರುಸ್ವಾಮಿ ಎಂಬವರ ಜೊತೆ ಗುರುಸ್ವಾಮಿರವರ ಬೈಕಿನಲ್ಲಿ ಕೆಲಸದ ನಿಮಿತ್ತ ಪಿರಿಯಾಪಟ್ನ ಬಳಿಯ ಕೆಸುವಿನ ಕೆರೆ ಎಂಬಲ್ಲಿಗೆ ಹೋಗುತ್ತಿರುವಾಗ ಕುಶಾಲನಗರದ ಬ್ಲೂಮೂನ್‌ ಪೆಟ್ರೋಲ್‌ ಬಂಕ್‌ ಬಳಿ ಎದುರಿನಿಂದ ಒಂದು ಓಮಿನಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗುರುಸ್ವಾಮಿರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಗುರುಸ್ವಾಮಿ ಮತ್ತು ಕಾಂತರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ

ಸೋಮವಾರಪೇಟೆ ನಗರದ ರೇಂಜರ್‌ ಬ್ಲಾಕ್‌ ನಿವಾಸಿ ಮದನ್‌ ಕುಮಾರ್‌ ಎಂಬವರು ಅವರ ಮನೆಯ ಮುಂದೆ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಪಾನ ಮಾಡಲು ಅವಕಾಶ ನೀಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಪಿಎಸ್‌ಐ ವಿರೂಪಾಕ್ಷರವರು ಸಿಬ್ಬಂದಿಗಳೊಂದಿಗೆ ದಿನಾಂಕ 02/10/2021ರಂದು ಸ್ಥಳಕ್ಕೆ ದಾಳಿ ನಡೆಸಿ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ

ಕುಶಾಲನಗರದ  ಸುಂದರನಗರ ನಿವಾಸಿ ದಿನೇಶ್ ಎಂಬವರು ಅವರ ಮನೆಯ ಮುಂದೆ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಪಾನ ಮಾಡಲು ಅವಕಾಶ ನೀಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ಶಿವಶಂಕರ್‌ರವರುದಿನಾಂಕ 02/10/2021ರಂದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ

ವಿರಾಜಪೇಟೆ ನಗರದ ಮುಖ್ಯ ರಸ್ತೆಯ ಶಾಂತಿನಗರಕ್ಕೆ ಹೋಗುವ ರಸ್ತೆಯ ಬಳಿ ಭರತನ್‌ ಎಂಬವರು ಅವರ ಅಂಗಡಿಯಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯ  ಪಿಎಸ್‌ಐ ಜಗದೀಶ್‌ ಧೂಳಶೆಟ್ಟಿರವರು ದಿನಾಂಕ 02/10/2021ರಂದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 03-10-2021 01:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080