ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ, ಸಾವು

ದಿನಾಂಕ 27/02/2021ರಂದು ಮಡಿಕೇರಿಯ ರಾಣಿಪೇಟೆ ನಿವಾಸಿ ಅಫ್ಸಲ್‌ ಎಂಬವರು ಗಣಪತಿ ಬೀದಿ ನಿವಾಸಿಯಾದ ಶಾಹಿದ್‌ ಎಂಬವರೊಡನೆ ಮಡಿಕೇರಿಯಿಂದ ಕುಶಾಲನಗರಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಕಾರಿನ ಚಾಲಕ ಶಾಹಿದ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಇಬ್ನಿವಳವಾಡಿ ಗ್ರಾಮದ ಸಿಂಕೋನ ತೋಟದ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಓರ್ವ ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿಯು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 02/03/2021ರಂದು ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಕುಶಾಲಪ್ಪ ಎಂಬವರ ಮೇಲೆ ಕುಂಬೂರು ಗ್ರಾಮದ ಸುರೇಂದ್ರ, ರತನ್‌ ಮತ್ತು ಸುರೇಂದ್ರರವರ ಮಗ ಸೇರಿಕೊಂಡು ಆಸ್ತಿ ವಿಚಾರವಾಗಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 02/03/2021ರ ರಾತ್ರಿ ವೇಳೆ ಕುಟ್ಟ ಬಳಿಯ ಮಂಚಳ್ಳಿ ನಿವಾಸಿ ಮಚ್ಚಮಾಡ ಎಂ  ಸುಬ್ಬಯ ಎಂಬವರು ಅವರ ಸ್ಕೂಟರಿನಲ್ಲಿ ಕುಟ್ಟ ಪಟ್ಟಣದಿಂದ ಅವರ ಮನೆಗೆ ಹೋಗುತ್ತಿರುವಾಗ ಪೂಜೆಕಲ್‌ ಬಳಿಯ ಆನೆಪಾರೆ ಎಸ್ಟೇಟಿನ ಬಳಿ ಯಾರೋ ಅಪರಿಚಿತ ನಾಲ್ವರು ಸ್ಕೂಟರನ್ನು ತಡೆದು ನಿಲ್ಲಿಸಿದ್ದು ಸುಬ್ಬಯ್ಯನವರು ವಿಚಾರಿಸುವಾಗ ಏಕಾ ಏಕಿ ಸುಬ್ಬಯ್ಯನವರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಣ ವಂಚನೆ ಪ್ರಕರಣ

ಮಡಿಕೇರಿ ನಗರದ ಡೈರಿ ಫಾರಂ ಬಳಿಯ ನಿವಾಸಿ ಯು.ಎನ್.ನಳಿನಿ ಎಂಬವರ ಬೆಂಗಳೂರಿನ ಜಯನಗರದ ಇಂಡಸ್‌ ಇಂಡ್‌ ಬ್ಯಾಂಕ್‌ ಖಾತೆಯಿಂದ ಯಾರೋ ನಳಿನಿಯವರ ಅರಿವಿಗೆ ಬಾರದಂತೆ ಸುಮಾರು ರೂ. 14,000/- ಹಣವನ್ನು ಎಟಿಎಂ ಮೂಲಕ ದಿನಾಂಕ 01/03/2021ರಂದು ತೆಗೆದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷಾಹಾರ ಸೇವನೆ ಹಸು ಸಾವು

ಕುಶಾಲನಗರ ಬಳಿಯ ಸುಂದರ ನಗರ ನಿವಾಸಿ ಪೌಲೋಸ್‌ ಎಂಬವರಿಗೆ ಸೇರಿದ ಸುಮಾರು ರೂ.50,000/- ಮೌಲ್ಯದ ಹಸುವೊಂದನ್ನು ದಿನಾಂಕ 01/03/2021ರಂದು ಮೇಯಲು ಬಿಟ್ಟಿದ್ದು ರಾತ್ರಿಯಾದರೂ ಮನೆಗೆ ಬಾರದ ಕಾರಣ ಹುಡುಕಾಡಿದಾಗ ಹಸುವು ಸುಂದರ ನಗರದ ಗೊಬ್ಬರ ಗೋದಾಮಿನ ಬಳಿ ಸತ್ತು ಬಿದ್ದಿದ್ದು, ಗೊಬ್ಬರ ಗೋದಾಮಿನವರ ನಿರ್ಲಕ್ಷ್ಯತನದಿಂದ ಹೊರಗೆ ಹಾಕಿದ್ದ ವಿಷಪೂರಿತ ಗೊಬ್ಬರ ಹಾಗೂ ಭತ್ತದ ಹೊಟ್ಟನ್ನು ತಿಂದು ಹಸು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 02/03/2021ರಂದು ತಿತಿಮತಿ ಗ್ರಾಮದ ಚೀನಿಹಡ್ಲು ನಿವಾಸಿ ಸೀತೆ ಎಂಬವರಿಗೆ ಅವರ ಮಗ ಅಶೋಕ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋನಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 01/03/2021ರಂದು ಗೋಣಿಕೊಪ್ಪ ಬಳಿಯ ದೇವರಪುರ ನಿವಾಸಿ ಜೇನು ಕುರುಬರ ತಿಮ್ಮ ಎಂಬವರಿಗೆ ಅದೇ ಗ್ರಾಮದ ಜೇನು ಕುರುಬರ ಸಾಮಿ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಇತ್ತೀಚಿನ ನವೀಕರಣ​ : 03-03-2021 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ