ಅಭಿಪ್ರಾಯ / ಸಲಹೆಗಳು

ವಾಹನ ಕಳವು ಪ್ರಕರಣ

ದಿನಾಂಕ 01/04/2021ರಂದು ವಿರಾಜಪೇಟೆ ಬಳಿಯ ನಾಂಗಾಲ ಗ್ರಾಮದ ನಿವಾಸಿ ಕೆ.ಡಿ.ಜಗನ್‌ ಎಂಬವರು ಅವರ ಸ್ನೇಹಿತ ಗುಡ್ಡಂಡ ಮಾಚಯ್ಯ ಎಂಬವರ ಮಾರುತಿ ಓಮಿನಿ ವ್ಯಾನು ಸಂಖ್ಯೆ ಕೆಎ-03-ಎಂ-3167ನ್ನು ಕೇಳಿ ಪಡೆದುಕೊಂಡು ಕೆಲಸದ ನಿಮಿತ್ತ ವಿರಾಜಪೇಟೆಗೆ ಹೋಗಿ ಮರಳಿ ಬಂದು ನಾಂಗಾಲ ಗ್ರಾಮದ ಅವರ ಮನೆಯ ಮುಂದೆ ನಿಲ್ಲಿಸಿ ಮನೆಗೆ ಹೋಗಿದ್ದು ನಂತರ ಕೆಲ ಸಮಯದ ಬಳಿಕ ವಿರಾಜಪೇಟೆಗೆ ಹೋಗಲೆಂದು ವ್ಯಾನನ್ನು ನೋಡಿದಾಗ ವ್ಯಾನು ನಿಲ್ಲಿಸಿದ ಸ್ಥಳದಲ್ಲಿರದೇ ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 31/03/2021ರಂದು ಕುಶಾಲನಗರದ ಮುಳ್ಳುಸೋಗೆ ನಿವಾಸಿ ಸೂರಪ್ಪ ಎಂಬವರು ಕೂಡಿಗೆಯ ಬಳಿ ರಸ್ತೆ ದಾಟುತ್ತಿರುವಾಗ ಆಕಾಶ್‌ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೂರಪ್ಪರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸೂರಪ್ಪರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಿದ್ಯುತ್‌ ಅವಘಢ, ವ್ಯಕ್ತಿ ಸಾವು

ದಿನಾಂಕ 01/04/2021ರಂದು ಸೋಮವಾರಪೇಟೆ ಬಳಿಯ ಕುಂಬೂರು ಗ್ರಾಮದ ಲಕ್ಷ್ಮೀಜಾಲ ತೋಟದಲ್ಲಿ ರಾಶೀದ್‌ ಎಂಬವರು ಕರಿಮೆಣಸು ಕುಯ್ಯಲು ಅಲ್ಯುಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿರುವಾಗ ಏಣಿಯು ಆಕಸ್ಮಿಕವಾಗಿ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿಗೆ ತಗಲಿ ರಾಶೀದ್‌ರವರಿಗೆ ವಿದ್ಯುದಾಘಾತವಾಗಿದ್ದು ರಾಶೀದ್‌ರವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಪರಿಚಿತ ಶವ ಪತ್ತೆ

ದಿನಾಂಕ 01/04/2021ರಂದು ಕುಶಾಲನಗರ ಬಳಿಯ ಶಿರಂಗಾಲದ ಮೂಡಲುಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವವೊಂದು ನೀರಿನಲ್ಲಿ ತೇಲುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 02-04-2021 12:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ