ಅಭಿಪ್ರಾಯ / ಸಲಹೆಗಳು

ಹಣ ವಂಚನೆ ಪ್ರಕರಣ

ಗೋಣಿಕೊಪ್ಪ ನಗರದ ಎರಡನೇ ವಿಭಾಗದ ನಿವಾಸಿ ವಿನೀತಾ ಎಂಬವರಿಗೆ ದಿನಾಂಕ 29/11/2021ರಂದು ಯಾರೋ ಅಪರಿಚಿತರು ವಿನಿತಾ ರವರ ಮೊಬೈಲಿಗೆ ಕರೆ ಮಾಡಿ ತಾವು ಕಸ್ಟಮ್ಸ್‌ ಇಲಾಖೆಯಿಂದ ಕರೆ ಮಾಡುತ್ತಿದ್ದು ವಿನೀತಾರವರಿಗೆ ಪಾರ್ಸೆಲ್‌ ಒಂದು ಬಂದಿದ್ದು ಅದರ ಕಸ್ಟಮ್ಸ್‌ ಶುಲ್ಕ ಮತ್ತು ತೆರಿಗೆ ಇತ್ಯಾದಿಯನ್ನು ಪಾವತಿಸುವಂತೆ ನಂಬಿಸಿದ್ದು ಅದರಂತೆ ವಿನೀತಾರವರು ಹಂತ ಹಂತವಾಗಿ ಮೊಬೈಲ್‌ ಕರೆ ಮಾಡಿದ ವ್ಯಕ್ತಿಗಳು ತಿಳಿಸಿದ ಖಾತೆಗೆ ವಿನೀತಾರವರ ಬ್ಯಾಂಕ್‌ ಖಾತೆಯಿಂದ ಸುಮಾರು ರೂ.1,55,000/- ಹಣವನ್ನು ವರ್ಗಾಯಿಸಿದ್ದು ನಂತರ ಯಾವುದೇ ಪಾರ್ಸೆಲ್‌ ಅನ್ನು ಕಳಿಸದೆ ವಿನೀತಾರವರನ್ನು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ದರೋಡೆ ಪ್ರಕರಣ

ದಿನಾಂಕ 01/02/2022ರಂದು ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಮೂಟೇರಿ ನಿವಾಸಿ ವಿ.ಜಿ.ಜಾನಕಿ ಮತ್ತು ಅವರ ತಂಗಿ ಮನೆಯಲ್ಲಿರುವಾಗ ಮನೆಗೆ ನಾಲ್ವರು ಅಪರಿಚಿತರು ನುಗ್ಗಿ ಕೈಯಲ್ಲಿ ಚಾಕು ಹಿಡಿದುಕೊಂಡು ಮನೆಯಲ್ಲಿರುವ ಹಣ ಮತ್ತು ಆಭರಣಗಳನ್ನು ಕೊಡುವಂತೆ ಬೆದರಿಸಿದ್ದು ನಂತರ ಜಾನಕಿರವರ ಕೈಯಿಂದ ಬಲವಂತವಾಗಿ ಬೀರುವಿನ ಬೀಗದ ಕೀಲಿ ಪಡೆದು ಜಾನಕಿ ಹಾಗೂ ಅವರ ತಂಗಿಯನ್ನು ಕುರ್ಚಿಗೆ ಕಟ್ಟಿ ಹಾಕಿ ಬೀರುವಿನಲ್ಲಿದ್ದ ಸುಮಾರು ರೂ.3,32,000/- ಮೌಲ್ಯದ ಚಿನ್ನಾಭರಣ ಹಾಗೂ ರೂ.2,50,000/- ನಗದು ಹಣವನ್ನು ದೋಚಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ, ಸಾವು

ದಿನಾಂಕ 01/02/2022ರಂದು ವಿರಾಜಪೇಟೆ ಬಳಿಯ ಪೆರುಂಬಾಡಿ ನಿವಾಸಿ ಸರ್ಫುದ್ದೀನ್‌ ಎಂಬವರ ತಂದೆ ಅಬ್ದುಲ್ಲಾ ಎಂಬವರು ಸರ್ಫುದ್ದೀನ್‌ರವರ ಅಕ್ಕನ ಮಗಳು ನಸ್ಲಾ ಎಂಬವರೊಂದಿಗೆ ಕಾರನ್ನು ಚಾಲಿಸಿಕೊಂಡು ಪೆರುಂಬಾಡಿ ಮುಖ್ಯ ರಸ್ತೆ ಕಡೆಗೆ ಹೋಗಿದ್ದು ಆ ಸಮಯದಲ್ಲಿ ಅಬ್ದುಲ್ಲಾರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಅಬ್ದುಲ್ಲಾ ಮತ್ತು ನಸ್ಲಾರವರು ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಬ್ದುಲ್ಲಾರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 02-02-2022 03:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080