ಅಭಿಪ್ರಾಯ / ಸಲಹೆಗಳು

ಹಣ ದುರುಪಯೋಗ ಪ್ರಕರಣ

ಕುಟ್ಟ ಗ್ರಾಮ ಪಂಚಾಯಿತಿ ಕಚೇರಿಯ ಬಿಲ್‌ ಕಲೆಕ್ಟರ್‌ ಬಿ.ಎನ್‌ ಮಹೇಶ್‌ ಹಾಗೂ ಕಚೇರಿಯ ಅಟೆಂಡರ್‌ ಸಿ.ಕೆ.ರಾಜನ್‌ ಎಂಬವರಿಬ್ಬರು ಸೇರಿಕೊಂಡು 2017-18 ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಪಂಚಾಯಿತಿ ಕಚೇರಿಯಲ್ಲಿ ವಿವಿಧ ಬಾಬ್ತುಗಳಲ್ಲಿ ಸಂಗ್ರಹಿಸಲಾದ ಹಣದ ರಶೀತಿ ಪುಸ್ತಕಗಳಲ್ಲಿನ ರಸೀತಿಗಳಲ್ಲಿ ನಮೂದಿಸಲಾದ ಹಣದ ಮೊತ್ತವನ್ನು ತಿದ್ದುಪಡಿ ಮಾಡಿ ಸುಮಾರು ರೂ.255489/- ಗಳಷ್ಟು ಹಣವನ್ನು ದುರುಪಯೋಗಪಡಿಸಿಕೊಡಿರುವುದಾಗಿ ಪಂಚಾಯಿತಿ ಆಭಿವೃದ್ದಿ ಅಧಿಕಾರಿ ಅನಿಲ್‌ ಕುಮಾರ್‌ರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 01/01/2022ರಂದು ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಿವಾಸಿ ಜೀವನ್‌ಕುಮಾರ್‌ ಎಂಬವರು ಅವರ ಬೈಕಿನಲ್ಲಿ ಅವರ ಪತ್ನಿಯೊಂದಿಗೆ ಮಡಿಕೇರಿ ಬಳಿಯ ಕಡಗದಾಳಿಗೆ ಬರುತ್ತಿರುವಾಗ ಕಾಟಕೇರಿ ಬಳಿ ಮಡಿಕೇರಿ ಕಡೆಯಿಂದ ಒಂದು ಬೈಕನ್ನು ಅದರ ಸವಾರ  ಮದೆನಾಡಿನ ಯತೀಶ್‌ ಎಂಬವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೀವನ್‌ ಕುಮಾರ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಜೀವನ್‌ ಕುಮಾರ್‌ ಹಾಗೂ ಅವರ ಪತ್ನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 31/12/2021ರಂದು ವಿರಾಜಪೇಟೆ ಬಳಿಯ ಕೆದಮುಳ್ಳೂರು ನಿವಾಸಿ ಕೆ.ಆರ್‌.ಪೊನ್ನಪ್ಪ ಎಂಬವರು ಮನೆಗೆ ನಿತ್ಯ ಸಾಮಾನುಗಳನ್ನು ತರಲು ಅಂಗಡಿಗೆ ಹೋಗಿದ್ದಾಗ ದಾರಿಯಲ್ಲಿ ಪೊನ್ನಪ್ಪನವರ ತಮ್ಮ ಗಣೇಶ್‌ ಹಾಗೂ ಅವರ ಪತ್ನಿ ಪುಷ್ಪಾರವರು ಹಳೆ ವೈಷಮ್ಯದಿಂದ ಪೊನ್ನಪ್ಪನವರ ಮೇಲೆ ಹಲ್ಲೆ ಮಾಡಿದ್ದು ಪೊನ್ನಪ್ಪನವರ ಕಿರುಚಾಟ ಕೇಳಿ ತಡೆಯಲು ಹೋದ ಪೊನ್ನಪ್ಪನವರ ಪತ್ನಿ ಲೀಲಾವತಿಯವರ ಮೇಲೂ ಪುಷ್ಪಾರವರು ಕಲ್ಲಿನಿಂದ ಕೈಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 01/01/2022ರಂದು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಕಟ್ಟೇಂಗಡ ದೀಪಕ್‌ ಎಂಬವರು ಅವರ ಕಾರಿನಲ್ಲಿ ಕುಟ್ಟ ನಗರದಿಂದ ಮನೆಗೆ ಹೋಗುತ್ತಿರುವಾಗ ಕೇಂಬುಕೊಲ್ಲಿ ಎಂಬಲ್ಲಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಹಿಂದಿನಿಂದ ಒಂದು ಬೈಕನ್ನು ಅದರ ಚಾಲಕ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 02-01-2022 12:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080