ಅಭಿಪ್ರಾಯ / ಸಲಹೆಗಳು

ಲಾರಿ ಕಳವು ಪ್ರಕರಣ

ಕೂಡಿಗೆ ಗ್ರಾಮದ ನಿವಾಸಿ ದಿನೇಶ್‌ ಕೆ.ಅರ್.‌ ಎಂಬವರಿಗೆ ಸೇರಿದ ಲಾರಿಯೊಂದನ್ನು ಅವರ ಚಾಲಕ ಹರೀಶ್‌ ಎಂಬವರು ದಿನಾಂಕ 29/04/2022ರಂದು ಎಂದಿನಂತೆ ಕೂಡುಮಂಗಳೂರಿನ ಹರೀಶನ ಮನೆಯ ಮುಂದೆ ನಿಲ್ಲಿಸಿದ್ದು 30/04/2022ರಂದು ಬೆಳಿಗ್ಗೆ ಎದ್ದು ನೋಡುವಾಗ ಲಾರಿಯು ಕಾಣದೇ ಇದ್ದು ಯಾರೋ ಕಳ್ಳರು ಲಾರಿಯನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ಮಡಿಕೇರಿ ಬಳಿಯ ಹಾಕತ್ತೂರಿನ ತೊಂಬತ್ತುಮನೆಯ ನಿವಾಸಿ ಶರೀಫ್‌ ಎಂಬವರು ಬಿಳಿಗೇರಿ ಗ್ರಾಮದ ತೆಕ್ಕಡೆ ಚೇತನ್‌ ಎಂಬವರ ಹೆಸರಿನಲ್ಲಿರುವ ಹಾಕತ್ತೂರು ಪಂಚಾಯಿತಿಯ ಮಳಿಗೆಯೊಂದರಲ್ಲಿ ಜ್ಯೂಸ್‌ ವ್ಯಾಪಾರ ಮಾಡುತ್ತಿದ್ದು ದಿನಾಂಕ 30/04/2022ರಂದು ಆ ಅಂಗಡಿಗೆ ಚೇತನ್‌ರವರು ಬಂದು ಹಣಕಾಸಿನ ವಿಷಯದಲ್ಲಿ ಜಗಳವಾಡಿ ಶರೀಫ್‌ರವರ ಕೆನ್ನೆಗೆ ಹೊಡೆದು ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 01-05-2022 01:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080