ಅಭಿಪ್ರಾಯ / ಸಲಹೆಗಳು

ಅಕ್ರಮ ಮರಳು ಸಾಗಾಟ ಪತ್ತೆ

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪೂಕಳತೋಡು ಗ್ರಾಮದ ಮುರುಗೇಶ್‌ರವರ ತೋಟದಲ್ಲಿ ಹರಿಯುವ ಕಿರುಹೊಳೆಯಿಂದ ಮರಳು ತೆಗೆದು ಮಿನಿಲಾರಿಯಲ್ಲಿ ತುಂಬಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚುವಲ್ಲಿ  ಡಿಸಿಐಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

 

ದಿನಾಂಕ 27-10-2020ರಂದು ಖಚಿತ ವರ್ತಮಾನದ ಮೇರೆ ರಾತ್ರಿ ಸಮಯದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿದ್ದು ಮುರುಗೇಶ್‌ರವರ ತೋಟದಲ್ಲಿ ಹರಿಯುವ ಕಿರುಹೊಳೆಯ ದಡದಲ್ಲಿ ಮರಳು ತುಂಬಿಸಿ ನಿಲ್ಲಿಸಲಾಗಿದ್ದ ಈಚರ್ ಮಿನಿ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ 7576 ವಾಹನವನ್ನು ಮತ್ತು ಸ್ಥಳದಲ್ಲಿ ದೊರೆತ ಮರಳು, ಜಾಗದ ಮಾಲಿಕ ಮುರುಗೇಶರವರನ್ನು ವಶಕ್ಕೆ ಪಡೆಯಲಾಗಿದ್ದು. ಮಿನಿ ಲಾರಿ ಮಾಲೀಕರಾದ ನೆಲ್ಲಿರ ಉಮೇಶ್ ವಿರುದ್ದ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ವಿ.ಜಿ ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್ ವಸಂತ, ಎಂ.ಎನ್ ನಿರಂಜನ್ ಮತ್ತು ಶ್ರೀಮಂಗಲ ಪೊಲೀಸ್ ಠಾಣೆಯ ಪಿ.ಎಸ್.ಐ. ಕರಿಬಸಪ್ಪರವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.

 

ಮಹಿಳೆ ಕಾಣೆ ಪ್ರಕರಣ

ಕುಟ್ಟ ಬಳಿಯ ನಾಲ್ಕೇರಿ ಗ್ರಾಮದ ಬಣ್ಣಮೊಟ್ಟೆ ನಿವಾಸಿ ಪಿ.ಎಂ.ರಾಜು ಎಂಬವರ ತಾಯಿ ೬೦ ವರದಷ ಪ್ರಾಯದ ಮುತ್ತಮ್ಮ ಎಂಬವರು ದಿನಾಂಕ ೨೧/೧೦/೨೦೨೦ರಂದು ಬಾಳೆಲೆಯಲ್ಲಿರುವ ಪಿ.ಎಂ.ರಾಜುರವರ ಚಿಕ್ಕಪ್ಪನ ಮಗಳು ಕಾಳಿರವರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಕಾಳಿಯ ಮನೆಗೂ ಹೋಗದೆ ಮರಳಿ ಬಾರದೆ ಎಲ್ಲಿಯೋ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಆನ್‌ಲೈನ್‌ ಹಣ ವಂಚನೆ

ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ವಿ.ವಿ.ರಾಕೇಶ್‌ ಎಂಬವರು ೩೦/೦೯/೨೦೨೦ರಂದು ಫೇಸ್‌ಬುಕ್‌ನಿಂದ FX World ಎಂಬ ಸಂಸ್ಥೆಯ ಮಾಹಿತಿಯನ್ನು ಅವರ ಮೊಬೈಲಿನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿದ್ದು ನಂತರ FX World ಸಂಸ್ಥೆಯ ಹೆಸರಿನಲ್ಲಿ ಸತೀಶ್‌ ಎಂಬಾತ ಕರೆಮಾಡಿ ಸಂಸ್ಥೆಯ ಬಗ್ಗೆ ತಿಳಿಸಿ ರಾಕೇಶ್‌ರವರು ಆರಂಭದಲ್ಲಿ  ಸಂಸ್ಥೆಯ ಖಾತೆಗೆ ಹಣ ಜಮಾ ಮಾಡಿದರೆ ರಾಕೇಶ್‌ರವರಿಗೆ ನಂತರದ ದಿನಗಳಲ್ಲಿ ಹೆಚ್ಚಿನ ಹಣ ದೊರೆಯುವುದಾಗಿ ನಂಬಿಸಿ ರಾಕೇಶ್‌ರವರ ಬ್ಯಾಂಕ್‌ ಖಾತೆಯಿಂದ ಸಂಸ್ಥೆಯ ಖಾತೆಗೆ ಸುಮಾರು ರೂ.೭೨,೫೦೦/- ಹಣವನ್ನು ವರ್ಗಾಯಿಸಿಕೊಂಡು ನಂತರ ತಾವುದೇ ಹಣವನ್ನು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ ೨೯/೧೦/೨೦೨೦ರಂದು ಕುಶಾಲನಗರ ಬಳಿಯ ತೊರೆನೂರು ಗ್ರಾಮದ ಅಳಿಲುಗುಪ್ಪೆ ನಿವಾಸಿ ಸಚಿನ್‌ ಕುಮಾರ್‌ ಎಂಬವರು ಪ್ರಜ್ವಲ್‌ ಎಂಬವರೊಂದಿಗೆ ಬೈಕಿನಲ್ಲಿ ಕುಡ್ಲೂರು ಬಳಿಯ ಕೈಗಾರಿಕಾ ಬಡಾವಣೆ ಬಳಿ ಹೋಗುತ್ತಿರುವಾಗ ಸುಂದರನಗರ ಕಡೆಯಿಂದ ಒಂದು ಮಾರುತಿ ೮೦೦ ಕಾರನನ್ನು ಅದರ ಚಾಲಕ ಗಣೇಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಚಿನ್‌ ಕುಮಾರ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಪ್ರಜ್ವಲ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನೆ ಕಳವು ಪ್ರಕರಣ

ಮಡಿಕೇರಿ ಬಳಿಯ ಕೆ.ಬಾಡಗ ಗ್ರಾಮದ ನಿವಾಸ ಎನ್‌.ಪಿ.ರೇಖಾ ಎಂಬವರು ದಿನಾಂಕ 28/10/2020ರಂದು ಹಮ್ಮಿಯಾಲ ಗ್ರಾಮದಲ್ಲಿನ ಅವರ ತಾಯಿಯ ಮನೆಗೆ ಹೋಗಿ ದಿನಾಂಕ 29/10/2020 ರಂದು ಸಂಜೆ ಮನೆಗೆ ಮರಳಿ ಬಂದಾಗ ಯಾರೋ ಕಳ್ಳರು ಮನೆಯ ಸ್ನಾನದ ಮನೆಯ ಛಾವಣಿಯನ್ನು ಒಡೆದು ಪ್ರವೇಶಿಸಿ ಮನೆಯ ಮುಂಭಾಗದ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಸುಮಾರು ರೂ.86,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 30-10-2020 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080